ಇದುವರೆಗೂ ರಾಜ್ಯದಲ್ಲಿ ಒಟ್ಟು 8 ಕೊಳವೆ ಬಾವಿ ದುರಂತಗಳು ನಡೆದಿದ್ದು, ಆ ಪೈಕಿ ಕೇವಲ ಒಂದು ಪ್ರಕರಣದಲ್ಲಿ ಮಾತ್ರ ಯಶಸ್ವಿ ಕಾರ್ಯಾಚರಣೆ ನಡೆಸಿ ಮಗುವನ್ನ ರಕ್ಷಿಸಲಾಗಿತ್ತು. ಇದೀಗ ಎರಡನೆಯಾದಾಗಿ ಮೃತ್ಯಗುಂಡಿಯಿಂದ ಜೀವಂತವಾಗಿ ಎದ್ದು ಬಂದಿರೋದು ಮಗು ಸಾತ್ವಿಕ್. ಈ ಪ್ರಕರಣದ ಮೂಲಕ ರಾಜ್ಯದಲ್ಲಿ ಈ ಹಿಂದೆ ನಡೆದ ಕೊಳವೇ ಬಾವಿ ದರಂತದ ಪ್ರಕರಣಗಳು ಮತ್ತೆ ಚರ್ಚೆಯ ಮುನ್ನಲೆಗೆ ಬಂದಿದೆ.

ರಾಜ್ಯದ ಮೊದಲ ಕೊಳವೇ ಬಾವಿ ದುರಂತ ನಡೆದಿದ್ದು ದಾವಣಗೆರೆಯಲ್ಲಿ, ಸತತವಾಗಿ ಪ್ರಯತ್ನ ನಡೆಸಿದರೂ ಬಾಲಕನನ್ನು ಜೀವಂತವಾಗಿ ಕರೆತರಲು ಈ ಪ್ರಕರಣದಲ್ಲಿ ಸಾಧ್ಯವಾಗಿರಲಿಲ್ಲ. ಇದು ರಾಜ್ಯದ ಮೊದಲ ಕೊಳವೇ ಬಾವಿ ದುರಂತ ಪ್ರಕರಣ ಇನ್ನು ಬಾಗಲಕೋಟೆ ತಾಲೂಕಿನ ಸೀಗಿಕೇರಿ ಗ್ರಾಮದಲ್ಲಿ ಕಲ್ಲವ್ವ ಎಂಬ ಮಹಿಳೆಯೊಬ್ಬಳು ಕೊಳವೆ ಬಾವಿಗೆ ಬಿದ್ದಿದ್ದಳು. ಈ ಪ್ರಕರಣದಲ್ಲಿ ಅದೃಷ್ಟವಶಾತ್ ಸುರಂಗ ಕೊರೆದು ರಕ್ಷಿಸುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿತ್ತು.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಎಂಬಲ್ಲಿ ಸಂದೀಪ್ ಎಂಬ ಮಗುವೊಂದು ತೆರೆದ ಬೋರ್ ವೆಲ್ ಒಳಗೆ ಬಿದ್ದಿದ್ದು, ಇಲ್ಲಿಯೂ ಕೂಡ ಮಗುವನ್ನು ಜೀವಂತವಾಗಿ ಹೊರತೆಗೆಯಲು ಸಾಧ್ಯವಾಗಿರಲಿಲ್ಲ. ಇನ್ನು ವಿಜಯಪುರ ಜಿಲ್ಲೆಯ ಕಾಂಚನಾ ಎಂಬ ಬಾಲಕಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದು ಈ ಪ್ರಕರಣದಲ್ಲೂ ಮಗುವನ್ನು ಜೀವಂತವಾಗಿ ಮೇಲೆತ್ತುವ ರಕ್ಷಣಾ ತಂಡ ಪ್ರಯತ್ನ ಯಶಸ್ವಿಯಾಗಿರಲಿಲ್ಲ.

ಬಾಗಲಕೋಟೆಯ ಸೂಳಿಕೇರಿ ಗ್ರಾಮದಲ್ಲಿ 6 ವರ್ಷದ ತಿಮ್ಮಣ್ಣ ಎಂಬ ಮಗು 350 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿತ್ತು ಕಾರ್ಯಾಚರಣೆ ನಡೆದಿತ್ತಾದರೂ ಮಗು ಬದುಕಿ ಬಂದಿರಲಿಲ್ಲ. ವಿಜಯಪುರದ ನಾಗರಾಣಾ ಹಳ್ಳಿಯಲ್ಲಿ ಅಕ್ಷತಾ ಎಂಬ ಬಾಲಕಿ ತೆರೆದ ಬೋರ್‌ವೆಲ್‌ಗೆ ಬಿದ್ದಿದ್ದಳು. ನಿರಂತರ ಪ್ರಯತ್ನ ಪಟ್ಟರೂ ಅಕ್ಷತಾಳನ್ನು ಜೀವಂತವಾಗಿ ಹೊರತರಲು ಸಾಧ್ಯವಾಗಿರಲಿಲ್ಲ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝಂಜರವಾಡ ಗ್ರಾಮದಲ್ಲಿ 4 ವರ್ಷದ ಕಾವೇರಿ ಎಂಬ ಮಗು ಕೊಳವೆ ಬಾವಿಯೊಳಗೆ ಬಿದ್ದು ಸಾವನ್ನಪ್ಪಿತ್ತು.