ಡಾ ರಾಜ್ ಕುಮಾರ್ ಕುಟುಂಬ ಚಿತ್ರರಂಗದಲ್ಲಿ ಮಾದರಿಯಾದ ಕುಟುಂಬ. ದೊಡ್ಮನೆ ಅಂದ್ರೆ ಯಾರೊಬ್ಬರೂ ಬೆರಳು ತೋರಿಸುವಂತಿರಲಿಲ್ಲ. ಆದರೆ ಇದೀಗ ಡಾ ರಾಜ್ ಕುಡುಂಬದ ಕುಡಿ ಸಂಸಾರದಲ್ಲಿ ಬಿರುಕು ಮೂಡಿದೆ. ಸ್ಯಾಂಡಲ್‌ವುಡ್‌ನ ದೊಡ್ಮನೆಯಲ್ಲಿ ಬೀಸಿರುವ ಬಿರುಗಾಳಿ ಮತ್ತೋರ್ವ ನಟಿಯನ್ನು ಎಳೆದು ತಂದು ಬೀದಿಯಲ್ಲಿ ನಿಲ್ಲುವ ಸಮಯ ಬಂದಾಗಿದೆ. ಅಣ್ಣಾವ್ರ ಮೊಮ್ಮಗ ರಾಘವೇಂದ್ರ ರಾಜಕುಮಾರ್ ಪುತ್ರ ನಟ ಯುವ ಹಾಗು ಶ್ರೀದೇವಿ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಈಗಾಗಲೇ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದೆ. ಜೊತೆಗೆ ವೈಯಕ್ತಿಕ ದಾಳಿಗಳು ಕೂಡ ಶುರುವಾಗಿವೆ.

ರಾಘವೇಂದ್ರ ರಾಜ್‌ಕುಮಾರ್ Raghavendra Rajkumar ಪುತ್ರ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಮದುವೆ ಮುರಿದು ಬಿದ್ದಿದ್ದು, ನಟ ಯುವ Yuva ಕೌಟುಂಬಿಕ ನ್ಯಾಯಾಲಯದ Family Court ಮೆಟ್ಟಿಲೇರಿದ್ದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.. ನನಗೆ ನನ್ನ ಹೆಂಡ್ತಿಯಿಂದ ಮಾನಸಿಕ ಕಿರುಕುಳ ಆಗ್ತಿದೆ. ಅಗೌರವದಿಂದ ಶ್ರೀದೇವಿ ನಡೆದುಕೊಂಡಿದ್ದಾರೆ ಅಂತಾ ಆರೋಪಿಸಿ ಜೂನ್ 6ರಂದು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. 7 ವರ್ಷ ಪ್ರೀತಿಸಿದ ಬಳಿಕ ಮದುವೆ ಆಗಿದ್ದ ಯುವ ಹಾಗು ಶ್ರೀದೇವಿ ನಡುವೆ ಜಗಳ ಶುರುವಾಗುವುದಕ್ಕೆ ಪ್ರಮುಖ ಕಾರಣ ಕನ್ನಡದ ನಟಿ ಎನ್ನುವ ವಾಸನೆ ಹರಿದಾಡುತ್ತಿದೆ.

2019ರ ಮೇ 26ರಂದು ಎಲ್ಲರನ್ನೂ ಒಪ್ಪಿಸಿ ಮದುವೆಯಾಗಿದ್ದ Yuva and Shridevi, ಮದುವೆಯಾದ ಕೇವಲ 4 ವರ್ಷಕ್ಕೆ ದೂರವಾಗುವ ನಿರ್ಧಾರ ಮಾಡಿದ್ದಾರೆ. ಯುವ ಪತ್ನಿ ಶ್ರೀದೇವಿ ಡಾ. ರಾಜ್‌ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ ಉಸ್ತುವಾರಿ ವಹಿಸಿಕೊಂಡಿದ್ರು. 6 ತಿಂಗಳ ಹಿಂದೆ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಿದ್ದಾರೆ. ಈ ನಡುವೆ ಯುವ ರಾಜ್‌ಕುಮಾರ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕನ್ನಡದ ಖ್ಯಾತ ನಟಿ ಜೊತೆ ಓಡಾಟವೇ ವಿಚ್ಛೇದನಕ್ಕೆ ಕಾರಣ ಅನ್ನೋ ಗುಸುಗುಸು ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡ್ತಿದೆ. ವಿದೇಶದಲ್ಲಿರುವ ಶ್ರೀದೇವಿ ವಾಟ್ಸ್ ಆಪ್ ಮೂಲಕ ಪ್ರತಿಕ್ರಿಯಿಸಿದ್ದು, ವಿಚ್ಛೇದನದ ಅರ್ಜಿ ನನ್ನ ಕೈ ಸೇರಿಲ್ಲ.. ಸಿಕ್ಕಾಗ ಕೋರ್ಟ್‌ಗೆ ಉತ್ತರಿಸುತ್ತೇನೆ ಎಂದಿದ್ದಾರೆ.

ಯುವ – ಶ್ರೀದೇವಿ ಡಿವೋರ್ಸ್ ವಿಚಾರವಾಗಿ ನಟ ಶಿವಣ್ಣ ದಂಪತಿ ಪ್ರತಿಕ್ರಿಯೆ ನೀಡಿದ್ದು ಸದ್ಯಕ್ಕೆ ಡಿವೋರ್ಸ್ ಬಗ್ಗೆ ನಮಗೆ ಮಾಹಿತಿ ಇಲ್ಲ. ಆದರೆ ಮಾಧ್ಯಮಗಳಲ್ಲಿ ಬಂದಿದ್ದನ್ನು ನೋಡಿದ್ದೇವೆ. ಈ ರೀತಿ ಆಗಿದ್ದರೆ ಮನಸ್ಸಿಗೆ ತುಂಬಾ ಬೇಜಾರಾಗುತ್ತದೆ ಎಂದಿದ್ದಾರೆ. ಮೈಸೂರಿನಲ್ಲಿ ಶ್ರೀದೇವಿ ತಂದೆ ಪ್ರತಿಕ್ರಿಯೆ ನೀಡಿದ್ದು, ಇಬ್ಬರು ಚೆನ್ನಾಗಿರಲಿ ಎಂದು ಮದುವೆ ಮಾಡಿ ಕೊಟ್ಟಿದ್ದೆವು. ಈ ರೀತಿ ಆಗಬಾರದು. ಮಗಳು ಅಳಿಯ ಚೆನ್ನಾಗಿರಬೇಕು ಎಂದಿದ್ದಾರೆ. ಆದರೆ ಈಗಾಗಲೇ ಸಂಬಂಧ ವಿಷಮ ಸ್ಥಿತಿಗೆ ತಲುಪಿದ್ದು, ಮಾತಿನ ವಾಗ್ಬಾಣಗಳು ಶುರುವಾಗಿವೆ. ಇಬ್ಬರ ಸಂಬಂಧ ಉಳಿಯುವ ಸಾಧ್ಯತೆಗಳು ಕಷ್ಟ ಸಾಧ್ಯ ಎನ್ನುವಂತಾಗಿದೆ.

ಕನ್ನಡದಲ್ಲಿ ಇತ್ತೀಚಿಗಷ್ಟೇ ಖ್ಯಾತಿ ಪಡೆದ ನಟಿ ಯುವನ ಜೊತೆಗೂ ಒಂದು ಸಿನಿಮಾ ಮಾಡಿದ್ದು, ಆಕೆಯ ಜೊತೆಗೆ ಯುವ ಸ್ನೇಹದಿಂದ ಇರುವುದು ಶ್ರೀದೇವಿ ಕಣ್ಣು ಕೆಂಪಾಗುವಂತೆ ಮಾಡಿದೆ ಎನ್ನಲಾಗ್ತಿದೆ. ಆದರೆ ಸಿನಿಮಾದಲ್ಲಿ ನಟನೆ ಮಾಡಿರುವ ಕಾರಣಕ್ಕೆ ಈ ರೀತಿ ಹೇಳುವುದು ಅಷ್ಟೊಂದು ಸಮಂಜಸವೂ ಅಲ್ಲ. ನಟಿಯ ಹೆಸರು ಕೂಡ ಪ್ರತಿಧ್ವನಿಗೆ ಗೊತ್ತಾಗಿದೆ. ಆದರೂ ನಾವು ಆಕೆಯ ಹೆಸರನ್ನು ಹೇಳುವುದು ತರವಲ್ಲ ಅನ್ನೋದು ನಮ್ಮ ಭಾವನೆ. ಮುಂದಿನ ದಿನಗಳಲ್ಲಿ ತನ್ನಷ್ಟಕ್ಕೆ ತಾನೇ ಬಯಲಾಗಲಿದ್ದು, ಅಲ್ಲೀವರೆಗೂ ನಾವು ಕಾಯುತ್ತೇವೆ. ನೀವೂ ಕೂಡ.
ಕೃಷ್ಣಮಣಿ
