• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಟ ಯುವನ ಹೆಂಡ್ತಿ ಮೇಲೆ ಇಷ್ಟೊಂದು ಆರೋಪ.. ಶ್ರೀದೇವಿ ಹೇಳಿದ್ದೇನು..?

ಪ್ರತಿಧ್ವನಿ by ಪ್ರತಿಧ್ವನಿ
June 11, 2024
in Top Story, ಇದೀಗ, ವಿಶೇಷ, ಸಿನಿಮಾ
0
ನಟ ಯುವನ ಹೆಂಡ್ತಿ ಮೇಲೆ ಇಷ್ಟೊಂದು ಆರೋಪ.. ಶ್ರೀದೇವಿ ಹೇಳಿದ್ದೇನು..?
Share on WhatsAppShare on FacebookShare on Telegram

ಸ್ಯಾಂಡಲ್​ವುಡ್​ನ ದೊಡ್ಮನೆಯಲ್ಲಿ ಬಿರುಗಾಳಿ ಶುರುವಾಗಿದೆ. ಯುವ ರಾಜಕುಮಾರ್ ಪರ ವಕೀಲ ಡಿವೋರ್ಸ್​ ವಿಚಾರವಾಗಿ ಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಪತ್ನಿ ಶ್ರೀದೇವಿ ವಿರುದ್ಧ ವಿಚ್ಚೇದನಕ್ಕೆ 54 ಪುಟಗಳ ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ವಕೀಲರು ಸಲ್ಲಿಸಿರುವ ಡಿವೋರ್ಸ್ ಪಿಟಿಷನ್​ನಲ್ಲಿ ಏನೇನು ಸೇರಿಸಿದ್ದಾರೆ ಅನ್ನೋದನ್ನು ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಎದುರು ಬಿಚ್ಚಿಟ್ಟಿದ್ದಾರೆ.

ADVERTISEMENT

ನಟ ಯುವ ಪರ ವಕೀಲ ಸಿರಿಲ್ ಪ್ರಸಾದ್ ಪಯಾಸ್ ಮಾತನಾಡಿ, ಪತ್ನಿ ಶ್ರೀದೇವಿ ವಿರುದ್ಧ ಅನೈತಿಕ ಸಂಬಂಧದ ಆರೋಪ ಮಾಡಿದ್ದಾರೆ. ರಾಜ್ ಕುಟುಂಬದಲ್ಲಿ ಪಾರ್ವತಮ್ಮ ಸ್ಥಾನದ ಮೇಲೆ ಕಣ್ಣಿದ್ರಂತೆ ಯುವ ಪತ್ನಿ ಶ್ರೀದೇವಿ. ಇಡೀ ಕುಟುಂಬದ ವ್ಯವಹಾರ ಹಾಗೂ ಎಲ್ಲದರ ಮೇಲೂ ಕಂಟ್ರೋಲ್ ಮಾಡೋಕೆ ಯತ್ನಿಸಿದ್ರಂತೆ. ರಾಜ್ ಕುಮಾರ್ ಕುಟುಂಬದ ಬ್ಯುಸಿನೆಸ್ ಮೇಲೂ ಯುವ ಪತ್ನಿ ಶ್ರೀದೇವಿ ಕಣ್ಣು ಹಾಕಿದ್ರಂತೆ. ರಾಜ್ ಕುಮಾರ್ ಫಿಲ್ಮ್ ಅಕಾಡೆಮಿಯಿಂದ ಕೋಟಿ ಕೋಟಿ ಹಣ ವರ್ಗಾಯಿಸಿಕೊಂಡಿರುವ ಆರೋಪ ಮಾಡಿದ್ದಾರೆ. ಬರೋಬ್ಬರಿ 4.5 ಕೋಟಿ ಹಣ ತನ್ನ ವೈಯಕ್ತಿಕ ಖಾತೆಗೆ ವರ್ಗಾಯಿಸಿದ್ದಾರೆ ಎಂದು ದೂರಿದ್ದಾರೆ.

ಡಾ. ರಾಜ್ ಕುಮಾರ್ ಫಿಲ್ಮ್ ಅಕಾಡೆಮಿ ನೋಡಿಕೊಳ್ತಿದ್ದ ಶ್ರೀದೇವಿ, ಆಕೆಯ ಅಕೌಂಟ್‌ಗೆ 3 ಕೋಟಿಗೂ ಅಧಿಕ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಮೈಸೂರಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಬೆಂಗಳೂರಲ್ಲಿ ಸುಮಾರು 20ಕ್ಕೂ ಹೆಚ್ಚು ಸೈಟ್ ಖರೀದಿ ಮಾಡಿದ್ದಾರೆ ಎಂದು ಯುವ ಪರ ವಕೀಲರು ಆರೋಪಿಸಿದ್ದಾರೆ. ಡಾ ರಾಜ ಕುಮಾರ್ Raj Kumar ಕುಟುಂಬದ ಹೆಸರು ಕೆಡಿಸ್ತೀನಿ ಅಂತ ಯುವನಿಗೆ ಸಂದೇಶ ಕಳುಹಿಸಿದ್ದಾರೆ ಶ್ರೀದೇವಿ ಎಂದು ಆರೋಪಿಸಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಶ್ರೀದೇವಿ ಯುಎಸ್​​ಗೆ ತೆರಳಿದ್ದಾರೆ. ಕಳೆದೊಂದು ವರ್ಷದಿಂದ ಯುವ ಹಾಗೂ ಶ್ರೀದೇವಿ ಸಂಬಂಧ ಹಾಳಾಗಿದ್ದು, ಹಲವು ಬಾರಿ ಕುಟುಂಬದ ಹೆಸರು ಕೆಡಿಸುವ ಬೆದರಿಕೆ ಹಾಕಿದ್ದಾರೆ ಅಂತಾನು ತಿಳಿಸಿದ್ದಾರೆ.

ಅಕಾಡೆಮಿಯ ಪ್ರಾಪರ್ಟಿಯನ್ನು ಶ್ರೀದೇವಿ ತನ್ನ ತಂಗಿಯ ಹೆಸರಿಗೆ ಮಾರ್ಟ್​ಗೇಜ್​ ಮಾಡಿ ಲೋನ್ ತೆಗೆದುಕೊಂಡಿದ್ದಾರೆ. ರಾಜ್ ಕುಮಾರ್ ಲರ್ನಿಂಗ್ ಆ್ಯಪ್​ನಿಂದಲೂ ಗೌಪ್ಯವಾಗಿ ಹಣ ವರ್ಗಾಯಿಸಿಕೊಂಡಿದ್ದಾರೆ ಎಂದಿದ್ದಾರೆ. ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡಲು ಎಜುಕೇಶನ್ ಲೋನ್ ಕೂಡ ನಟ ಯುವನೇ ಕೊಡಿಸಿದ್ದಾರೆ. 2016ರಲ್ಲಿ ಶ್ರೀದೇವಿಯನ್ನು ಭೇಟಿಯಾಗಿದ್ದ ಯುವ ರಾಜ್ ಕುಮಾರ್, 2018ರಲ್ಲಿ ಮನೆಯವರ ವಿರೋಧದ ನಡುವೆಯೂ ಶ್ರೀದೇವಿಯನ್ನು ವರಿಸಿದ್ದ. ಯುವನ ಮನೆಯವರು ಆಕೆಯನ್ನು ಮದುವೆಯಾಗದಂತೆ ಮನವಿ ಮಾಡಿದ್ದರು. ಕುಟುಂಬದ ಮಾತು ಕೇಳದೆ ಆಕೆಯನ್ನು ಮದುವೆ ಆಗಿದ್ದ. ಮದುವೆ ಆದ ಮೇಲೆ ಯುಎಸ್​​ನಲ್ಲಿ ಸೆಟ್ಲ್ ಆಗೋಕೆ ಟಾರ್ಚರ್ ಮಾಡ್ತಿದ್ರು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ವಕೀಲರ ಆರೋಪದ ಬಗ್ಗೆ ತಿರುಗೇಟು ನೀಡಿರುವ ಶ್ರೀದೇವಿ, ವೃತ್ತಿಪರ ಸೌಹಾರ್ದತೆಯನ್ನು ಕಾಯ್ದುಕೊಳ್ಳಬೇಕಾದ ವ್ಯಕ್ತಿಯೇ ಸಾರ್ವಜನಿಕವಾಗಿ ಒಬ್ಬ ಹೆಣ್ಣಿನ ಚಾರಿತ್ರ್ಯದ ಬಗ್ಗೆ ಕೀಳು ಮಟ್ಟದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಅತ್ಯಂತ ದುರಾದೃಷ್ಟಕರ ಹಾಗೂ ಬಹಳ ನೋವುಂಟು ಮಾಡಿದೆ ಎಂದಿದ್ದಾರೆ. ಕಳೆದ ಕೆಲವು ತಿಂಗಳಿಂದ ಆದ ಅನೇಕ ನೋವುಗಳ ಹೊರತಾಗಿಯೂ, ನಾನು ಕುಟುಂಬದ ಗೌರವ ಕಾಪಾಡಿಕೊಳ್ಳಲು, ಮೌನವಾಗಿದ್ದೆ. ಆದರೆ ನನ್ನ ಸಭ್ಯತೆ ಹಾಗೂ ಮಾನವೀಯತೆಯನ್ನು ಗೌರವಿಸದೆ, ಕೀಳು ಮಟ್ಟದ ಆರೋಪಗಳನ್ನು ಮಾಡುತ್ತಿರುವುದು ದುರಾದೃಷ್ಟಕರ. ಸತ್ಯ ಮತ್ತು ನ್ಯಾಯವು ಖಂಡಿತ ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬಿದ್ದೇನೆ ಎಂದಿದ್ದಾರೆ.

ಕೃಷ್ಣಮಣಿ

Tags: @shivarajkumar@shivarajkumarfanActor-young-woman-likes-onpunithrajkumaryuvarajkumarYuvaRajkumarWife
Previous Post

ಬಿಜೆಪಿಯಲ್ಲಿ ಶುರುವಾಗಿದೆ ಅಧ್ಯಕ್ಷ ಸ್ಥಾನದ ಚರ್ಚೆ! ಯಾರಿಗೆ ಒಲಿಯಲಿದೆ ಸ್ಥಾನ

Next Post

ರಾಜಕುಮಾರ್​ ಮೊಮ್ಮಗನ ಸಂಸಾರ ಹಾಳಾಗಿದ್ದಕ್ಕೆ ಕಾರಣ ಈಕೆನಾ..?

Related Posts

ಉದ್ಯೋಗಾಕಾಂಕ್ಷಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಗುಡ್‌ ನ್ಯೂಸ್..!
Top Story

ಉದ್ಯೋಗಾಕಾಂಕ್ಷಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಗುಡ್‌ ನ್ಯೂಸ್..!

by ಪ್ರತಿಧ್ವನಿ
March 11, 2026
0

ಬೆಂಗಳೂರು : ಅಂಗನವಾಡಿ ಕೇಂದ್ರಗಳಲ್ಲಿ ಯಾವುದೇ ಹುದ್ದೆ ಖಾಲಿಯಾದ 90 ದಿನಗಳ ಒಳಗಾಗಿ ಭರ್ತಿ ಮಾಡಬೇಕು ಎಂದು ಕಳೆದ ಡಿಸೆಂಬರ್‌ನಲ್ಲೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ನ ಮುಖ್ಯ...

Read moreDetails
ವಿಚಾರಣೆ ಬಳಿಕ ದರ್ಶನ್ ಅಭಿಮಾನಿಗಳ ಬಗ್ಗೆ ರಮ್ಯಾ ಹೇಳಿದ್ದೇನು?

ವಿಚಾರಣೆ ಬಳಿಕ ದರ್ಶನ್ ಅಭಿಮಾನಿಗಳ ಬಗ್ಗೆ ರಮ್ಯಾ ಹೇಳಿದ್ದೇನು?

March 11, 2026
ಉನ್ನತ ಶಿಕ್ಷಣ ಸುಧಾರಣೆ: ಯುಜಿಸಿ ಸೇರಿ ಮೂರು ಸಂಸ್ಥೆಗಳೊಂದಿಗೆ ಜೆಪಿಸಿ ಸಭೆ

ಉನ್ನತ ಶಿಕ್ಷಣ ಸುಧಾರಣೆ: ಯುಜಿಸಿ ಸೇರಿ ಮೂರು ಸಂಸ್ಥೆಗಳೊಂದಿಗೆ ಜೆಪಿಸಿ ಸಭೆ

March 10, 2026
“ನನಗಿಂತ ಕಿರಿಯ ಶಿವಕುಮಾರ್‌ಗೆ ಉಜ್ವಲ ರಾಜಕೀಯ ಭವಿಷ್ಯವಿದೆ”

“ನನಗಿಂತ ಕಿರಿಯ ಶಿವಕುಮಾರ್‌ಗೆ ಉಜ್ವಲ ರಾಜಕೀಯ ಭವಿಷ್ಯವಿದೆ”

March 10, 2026
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಿ : ಕೇಂದ್ರಕ್ಕೆ ಸಿಎಂ ಪತ್ರ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಿ : ಕೇಂದ್ರಕ್ಕೆ ಸಿಎಂ ಪತ್ರ

March 10, 2026
Next Post
ರಾಜಕುಮಾರ್​ ಮೊಮ್ಮಗನ ಸಂಸಾರ ಹಾಳಾಗಿದ್ದಕ್ಕೆ ಕಾರಣ ಈಕೆನಾ..?

ರಾಜಕುಮಾರ್​ ಮೊಮ್ಮಗನ ಸಂಸಾರ ಹಾಳಾಗಿದ್ದಕ್ಕೆ ಕಾರಣ ಈಕೆನಾ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada