ರಜಿನಿಕಾಂತ್ (rajini kanth) 171ನೇ ಸಿನಿಮಾ ಮೇಲೆ ಇಡೀ ಭಾರತೀಯ ಚಿತ್ರರಂಗ ಕಣ್ಣು ನೆಟ್ಟಿದೆ.ಒಂದೆಡೆ ತಲೈವಾ, ಮತ್ತೊಂದೆಡೆ ಲೋಕೇಶ್ ಕನಗರಾಜ್ (Lokesh kanagaraj), ಇನ್ನೊಂದೆಡೆ ಅನಿರುದ್ (Anirudh) ಮ್ಯೂಸಿಕ್. ಈ ತ್ರಿಮೂರ್ತಿಗಳ ಕಾಂಬೋದಿಂದ ತಲೈವಾ 171 ಬಹು ನಿರೀಕ್ಷೆ ಹುಟ್ಟಿಸಿತ್ತು.. ಅದರಲ್ಲೂ ಸಿನಿಮಾ ಟೈಟಲ್ ಏನಿರಬಹುದು ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡಿತ್ತು.. ಇದಕ್ಕೀಗ ಉತ್ತರ ಸಿಕ್ಕಿದ್ದು ಸೂಪರ್ ಸ್ಟಾರ್ ‘ಕೂಲಿ’ (kooli) ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ.
ಕೂಲಿ (kooli) ಸಿನಿಮಾದ ಟೈಟಲ್ ಟೀಸರ್ (Tittle teaser) ರಿಲೀಸ್ ಆಗಿದ್ದು, ಚಿನ್ನದ ಲೋಕದಲ್ಲಿ ರಜಿನಿಕಾಂತ್ ಮಿಂಚಿದ್ದಾರೆ. ರಜಿನಿ ಮಾಸ್, ಕನಗರಾಜ್ ಕ್ಲಾಸ್ ಎರಡೂ ಸೇರಿ ಅಭಿಮಾನಿಗಳಿಗೆ ರಸದೌತಣ ಸಿಕ್ಕಿದೆ. ತಲೈವಾ ಮ್ಯಾನರಿಸಂ, ಸ್ಟೈಲ್, ಡೈಲಾಗ್ ಡೆಲಿವರಿ ನೋಡಿ ಸೂಪರ್ ಸ್ಟಾರ್ ಫ್ಯಾನ್ಸ್ (fans) ಡ್ರಿಲ್ (thrill) ಆಗಿದ್ದಾರೆ.
ತಲೈವಾ-ಲೋಕೇಶ್ ಕಾಂಬಿನೇಷನ್ ಅನೌನ್ಸ್ ಆಗ್ತಿದ್ದಂತೆ, ಇದೂ ಕೂಡ ಲೋಕೇಶ್ ಕನಗರಾಜ್ ಯೂನಿವರ್ಸ್ ಸಿನಿಮಾ (universal cinema) ಆಗಿರುತ್ತಾ ಅನ್ನೋ ಚರ್ಚೆ ಜೋರಾಗಿದೆ. ಆದ್ರೆ, ಇದಿನ್ನೂ ಕನ್ಸರ್ಮ್ ಆಗಿಲ್ಲ.. ಆಗಿದ್ದೇ ಹೌದಾದ್ರೆ ವಿಕ್ರಮ್, ಲಿಯೋ, ರೊಲೆಲ್ಸ್ ತಲೈವಾ ಎಲ್ಲರೂ ಒಂದೆಡೆ ಕಾಣಿಸಿಕೊಳ್ಳೋ ಚಾನ್ಸ್ ಹೆಚ್ಚಿದೆ.