• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಉಲ್ಟಾ ಹೊಡೆದ ಕೈ ಲೆಕ್ಕಾಚಾರ : ಅಂಚೆ ಮತಗಳಲ್ಲಿ ರಾಜೇಗೌಡಗೆ ಹಿನ್ನಡೆ , ಬಿಜೆಪಿಯ ಜೀವರಾಜ್‌ ಏನಂದ್ರು..?

ಆರಂಭದಿಂದಲೂ  ಸ್ಟ್ರಾಂಗ್ ರೂಂನಿಂದ ಹಿಡಿದು ಗೊಂದಲ ಶುರುವಾಗಿದ್ದು, ಇವಿಎಂಗಳನ್ನು ಇರಿಸಿರುವ ಕೋಣೆಯಲ್ಲಿ ಅನಗತ್ಯ ಸಮಸ್ಯೆಗಳು ಸೃಷ್ಟಿಯಾಗಿವೆ : ಜೀವರಾಜ್‌ ಆರೋಪ

ಪ್ರತಿಧ್ವನಿ by ಪ್ರತಿಧ್ವನಿ
May 3, 2026
in Top Story, ಇದೀಗ, ಕರ್ನಾಟಕ, ರಾಜಕೀಯ
0
ಉಲ್ಟಾ ಹೊಡೆದ ಕೈ ಲೆಕ್ಕಾಚಾರ : ಅಂಚೆ ಮತಗಳಲ್ಲಿ ರಾಜೇಗೌಡಗೆ ಹಿನ್ನಡೆ , ಬಿಜೆಪಿಯ ಜೀವರಾಜ್‌ ಏನಂದ್ರು..?
Share on WhatsAppShare on FacebookShare on Telegram

ಬೆಂಗಳೂರು : ತೀವ್ರ ಕುತೂಹಲ ಕೆರಳಿಸಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತ‌ಎಣಿಕೆಗೆ ಸಂಬಂಧಿಸಿದಂತೆ ನಿನ್ನೇ ರಾತ್ರಿಯಿಡೀ ಹೈಡ್ರಾಮಾ ನಡೆದಿದೆ. ಈ ಮೂಲಕ ಕಾಂಗ್ರೆಸ್‌ ಶಾಸಕರ ವಶದಲ್ಲಿದ್ದ ಶೃಂಗೇರಿಯಲ್ಲಿ ಮತಎಣಿಕೆಯು ಮತ್ತೊಂದು ಮಹತ್ವದ ತಿರುವು ಪಡೆದಿದೆ. ಹೈಕೋರ್ಟ್ ಆದೇಶದಂತೆ ನಡೆದ ಅಂಚೆ ಮತಗಳ (Postal Ballots) ಮರು ಎಣಿಕೆಯಲ್ಲಿ ಗೆಲುವಾಗಿದೆ ಎಂದು ಘೋಷಿಸಲಾಗಿದ್ದ ಹಾಲಿ ಕಾಂಗ್ರೆಸ್‌ ಶಾಸಕ ಟಿ.ಡಿ. ರಾಜೇಗೌಡರಿಗೆ ಹಿನ್ನಡೆಯಾಗಿದೆ.

ADVERTISEMENT
ವ್ಯಾಪಾರ ಮಾಡದೇ ವಿಧಿಯಿಲ್ಲ, ಭಯ ಆಗುತ್ತೆ, ಸರ್ಕಾರ ನಮ್ಮ ಕಡೆ ಕಣ್ತೆರೆಯಲಿ.. #pratidhvani

ನಿನ್ನೆ ನಡೆದ ಅಂಚೆ ಮತಗಳ ಎಣಿಕೆಯಲ್ಲಿ ರಾಜೇಗೌಡ ಗೆಲುವು ಸಾಧಿಸಿದ್ದರು ಎನ್ನಲಾಗಿತ್ತು. ನಂತರ ನಡೆದ ಬೆಳವಣಿಗೆಯಲ್ಲಿ ಗೊಂದಲ ಉಂಟಾಗಿದ್ದ ಕಾರಣ ಬೆಳಿಗ್ಗೆ 7 ಗಂಟೆಗೆ ಆರಂಭವಾಗಿದ್ದ ಮತ ಎಣಿಕೆ ಕಾರ್ಯವು ತಡರಾತ್ರಿಯವರೆಗೆ ನಡೆದಿದೆ. ಇದರಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿರುವ ಡಿ.ಎನ್.‌ ಜೀವರಾಜ್‌ಗೆ ಮುನ್ನಡೆಯಾಗಿದೆ. ಆದರೆ ಇದಾದ ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ನಡುವೆ ಆರೋಪ  – ಪ್ರತ್ಯಾರೋಪಗಳು ಜೋರಾಗಿಯೇ ನಡೆಯುತ್ತಿವೆ.

ಇದನ್ನೂ ಓದಿ : ಅಸಾಮಾನ್ಯ ಬಿಸಿಲು–ಅನಿಲ ಸಂಕಷ್ಟ: ಏಪ್ರಿಲ್‌ನಲ್ಲಿ ರಾಜ್ಯದ ವಿದ್ಯುತ್ ಬಳಕೆ ಭಾರೀ ಏರಿಕೆ

ಇನ್ನೂ ಅಂಚೆ ಮತಗಳಲ್ಲಿ ಮುನ್ನಡೆ ಸಾಧಿಸಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಜೀವರಾಜ್‌, ಆರಂಭದಿಂದಲೂ  ಸ್ಟ್ರಾಂಗ್ ರೂಂನಿಂದ ಹಿಡಿದು ಗೊಂದಲ ಶುರುವಾಗಿದ್ದು, ಇವಿಎಂಗಳನ್ನು ಇರಿಸಿರುವ ಕೋಣೆಯಲ್ಲಿ ಅನಗತ್ಯ ಸಮಸ್ಯೆಗಳು ಸೃಷ್ಟಿಯಾಗಿವೆ. ಬೇಡದ ಸಮಸ್ಯೆಗಳು ನಿರ್ಮಾಣವಾಗುತ್ತಿವೆ.  ಒಂಬತ್ತು ಗಂಟೆಗೆ ಎಲ್ಲಾ 22 ಟ್ರಂಕ್‌ಗಳನ್ನು ತೆರೆದು ಬ್ಯಾಲೆಟ್‌ಗಳನ್ನು ಎಣಿಕೆ ಮಾಡಲಾಗಿದೆ. ಅದರಲ್ಲಿ ಅಮಾನ್ಯ ಎಂದು ಪರಿಗಣಿಸಲಾಗಿದ್ದ ಮತಗಳಲ್ಲಿ ಡಿಕ್ಲರೇಶನ್ ಕೊರತೆಯಿಂದ ಕೆಲವು ಮತಗಳನ್ನು ಕೈಬಿಡಲಾಗಿದೆ ಎಂದು ಹೇಳಿದ್ದಾರೆ.

ಮಾನ್ಯತೆ ಪಡೆದಿರುವ ಮತಗಳು ಹಾಗೂ ತಮ್ಮ ಎದುರಾಳಿ ಅಭ್ಯರ್ಥಿಯ ಉರ್ಜಿತ ಮತಗಳನ್ನು ಲೆಕ್ಕ ಹಾಕಿದಾಗ, ಪ್ರಸ್ತುತ ಪರಿಸ್ಥಿತಿಯಲ್ಲಿ ನಮಗೆ ಬಹುಮತ ಬರುತ್ತಿದೆ. ಈ ಅಂಕಿಅಂಶಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗುವುದು ಮತ್ತು ಆಯೋಗದ ನಿರ್ಧಾರಕ್ಕಾಗಿ ಕಾಯುತ್ತಿದ್ದೇನೆ. ಈ ವಿಚಾರವಾಗಿ ನಾನು ಕಳೆದ ಮೂರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇನೆ. ಆದರೆ ಅದಕ್ಕೆ ಈಗ ಜಯ ಸಿಕ್ಕಿದೆ. ಆದರೂ ಸಹ, ಚುನಾವಣಾ ಆಯೋಗ ಇಂದೇ ಫಲಿತಾಂಶ ಘೋಷಿಸುವ ನಿರೀಕ್ಷೆಯಲ್ಲಿದ್ದೇನೆ ಎಂದು ಜೀವರಾಜ್‌ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Tags: bjp karnatakacm siddarmaiahCongress Governmentcongress karnatakaD N JeevarajDK ShivaumarElection commission of karnatakaHigh Court of KarnatakaKarnataka GovernmentKarnataka PoliticsPostal VotesShringeri RecountingT D Rajegowda
Previous Post

ಅಸಾಮಾನ್ಯ ಬಿಸಿಲು–ಅನಿಲ ಸಂಕಷ್ಟ: ಏಪ್ರಿಲ್‌ನಲ್ಲಿ ರಾಜ್ಯದ ವಿದ್ಯುತ್ ಬಳಕೆ ಭಾರೀ ಏರಿಕೆ

Next Post

ಅಗ್ನಿ ನರ್ತನಕ್ಕೆ 9 ಜನರ ಬಲಿ : ರಾತ್ರಿ ಕಣ್ಣು ಮುಚ್ಚಿದವರು ಬೆಳಿಗ್ಗೆ ಕಣ್ಣು ತೆರೆಯಲೇ ಇಲ್ಲ..!

Related Posts

ದೇವೇಗೌಡರ ಭೇಟಿಯಿಂದ ಜಿಟಿ ದೇವೇಗೌಡ ರಾಜಕೀಯಕ್ಕೆ ಟ್ವಿಸ್ಟ್ !
Top Story

ದೇವೇಗೌಡರ ಭೇಟಿಯಿಂದ ಜಿಟಿ ದೇವೇಗೌಡ ರಾಜಕೀಯಕ್ಕೆ ಟ್ವಿಸ್ಟ್ !

by ಪ್ರತಿಧ್ವನಿ
May 15, 2026
0

ಬೆಂಗಳೂರು : ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ಅವರು ದಿಢೀರ್ ಬೆಳವಣಿಗೆಯಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ...

Read moreDetails
ಸುಪ್ರೀಂ ತೀರ್ಪು ದರ್ಶನ್‌ಗೆ ಲಾಭವೇ? : ವಕೀಲ ಬಾಲನ್ ಪ್ರತಿಧ್ವನಿಗೆ  ಹೇಳಿದ್ದೇನು

ಸುಪ್ರೀಂ ತೀರ್ಪು ದರ್ಶನ್‌ಗೆ ಲಾಭವೇ? : ವಕೀಲ ಬಾಲನ್ ಪ್ರತಿಧ್ವನಿಗೆ  ಹೇಳಿದ್ದೇನು

May 15, 2026
ಪಶ್ಚಿಮ ಏಷ್ಯಾ ಕಗ್ಗಂಟು ಗಂಭೀರ : ಭಾರತದಲ್ಲೇ ಇರಾನ್ ವಿದೇಶಾಂಗ ಸಚಿವರ ಸ್ಪೋಟಕ ಮಾತು

ಪಶ್ಚಿಮ ಏಷ್ಯಾ ಕಗ್ಗಂಟು ಗಂಭೀರ : ಭಾರತದಲ್ಲೇ ಇರಾನ್ ವಿದೇಶಾಂಗ ಸಚಿವರ ಸ್ಪೋಟಕ ಮಾತು

May 15, 2026
ಸುಪ್ರೀಂ ತೀರ್ಪು ದರ್ಶನ್‌ಗೆ ಲಾಭವೇ? : ವಕೀಲ ಬಾಲನ್ ಪ್ರತಿಧ್ವನಿಗೆ  ಹೇಳಿದ್ದೇನು

ಪಶ್ಚಿಮ ಏಷ್ಯಾ ಶಾಂತಿಗೆ ಭಾರತದ ಬೆಂಬಲ : ಮೋದಿ ಹೇಳಿಕೆಯಿಂದ ಹೊಸ ರಾಜತಾಂತ್ರಿಕ ಸಂದೇಶ

May 15, 2026
ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

May 15, 2026
Next Post
ಅಗ್ನಿ ನರ್ತನಕ್ಕೆ 9 ಜನರ ಬಲಿ : ರಾತ್ರಿ ಕಣ್ಣು ಮುಚ್ಚಿದವರು ಬೆಳಿಗ್ಗೆ ಕಣ್ಣು ತೆರೆಯಲೇ ಇಲ್ಲ..!

ಅಗ್ನಿ ನರ್ತನಕ್ಕೆ 9 ಜನರ ಬಲಿ : ರಾತ್ರಿ ಕಣ್ಣು ಮುಚ್ಚಿದವರು ಬೆಳಿಗ್ಗೆ ಕಣ್ಣು ತೆರೆಯಲೇ ಇಲ್ಲ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada