ಬಿಗ್ ಬಾಸ್(Bigg Boss) ಮನೆಯ ಚಿತ್ರಣ ಈ ವಾರ ಸಂಪೂರ್ಣವಾಗಿ ಬದಲಾಗಿ ಹೋಗಿದ್ದು, ಬಿಗ್ ಬಾಸ್ ಅಧಿಕಾರವನ್ನು ಕಿತ್ತುಕೊಂಡು ಸದ್ಯ ವಿಲನ್ ಸಾಮ್ರಾಜ್ಯ ಆರಂಭವಾಗಿದೆ. ಈವರೆಗೂ ಬಿಗ್ ಬಾಸ್ ಆಜ್ಞೆ ಕೇಳಬೇಕಿದ್ದ ಮನೆಯ ಸದಸ್ಯರು ಈ ವಾರ ವಿಲನ್ ಆಜ್ಞೆ ಪಾಲಿಸಬೇಕಿದೆ. ಹೀಗಾಗಿ ಮನೆಯ ಸದಸ್ಯರು ಕೂಡ ಅಸುರರಾಗಿ ಬದಲಾಗಿದ್ದಾರೆ.

ನಿನ್ನೆಯ ಸಂಚಿಕೆಯಲ್ಲಿ ಮನೆಯ ಸದಸ್ಯರಿಗೆ ವಿಲನ್ ಪರಿಚಯವಾಗಿದ್ದು, ಚೈತ್ರಾ ಹಾಗೂ ರಾಶಿಕಾ ಸೇರಿದಂತೆ ಕೆಲ ಸ್ಪರ್ಧಿಗಳಿಗೆ ವಿಶೇಷ ಅವಕಾಶ ನೀಡಲಾಯಿತು. ಇಂದು ಈ ವಾರ ಮನೆಯಿಂದ ಆಚೆ ಕಳುಹಿಸಲು ನಾಮೀನೇಷನ್ ಮಾಡಬೇಕಿದ್ದು, ನಾಮೀನೇಷನ್ ಭಾಗವಾಗಿ ಇಬ್ಬರು ಸ್ವರ್ಧಿಗಳನ್ನು ಸ್ವಿಮ್ಮಿಂಗ್ ಪೂಲ್ಗೆ ತಳ್ಳಿ ಕಾರಣ ನೀಡಬೇಕು. ಕಾವ್ಯ, ಗಿಲ್ಲಿ ಹಾಗೂ ರಜತ್ ಅವರನ್ನು ನಾಮಿನೇಟ್ ಮಾಡಿದ್ದು, ಈ ವೇಳೆ ರಜತ್ ಮತ್ತು ಧ್ರುವಂತ್ ನಡುವೆ ದೊಡ್ಡ ಜಗಳ ಆಗಿರುವ ಮೊದಲ ಪ್ರೋಮೋ ವೈರಲ್ ಆಗುತ್ತಿದೆ.

ಇನ್ನು ಎರಡನೇ ಪ್ರೋಮೋದಲ್ಲಿ ರಜತ್, ಧ್ರುವಂತ್ ಹಾಗೂ ಅಶ್ವಿನಿ ಹೆಸರನ್ನು ನಾಮಿನೇಷನ್‌ಗೆ ತೆಗೆದುಕೊಂಡಿದ್ದಾರೆ. ಈ ವೇಳೆ ರಜತ್ ಹಾಗೂ ಅಶ್ವಿನಿ ನಡುವೆ ಮಾತಿನ ಚಕಮಕಿ ಜೋರಾಗಿ ನಡೆದಿದ್ದು, ನೀವು ಗಂಡಸಲ್ವಾ? ಎಂದು ಅಶ್ವಿನಿ ಕೂಗಾಡಿದ್ದು, ಅಶ್ವಿನಿಯನ್ನು ರಜತ್ ಜೋರಾಗಿ ನೀರಿಗೆ ತಳ್ಳಿದ್ದಾರೆ. ಇದರಿಂದ ಮತ್ತಷ್ಟು ಕೋಪಕಗೊಂಡ ಅಶ್ವಿನಿ ಏ ಥೂ.. ಕಚಡಾ ಎಂದು ಕೂಗಿದ್ದಾರೆ. ಅದಕ್ಕೆ ರಜತ್.. ಕಚಡಾ ಅಂತೆ ಕಚಡಾ.. ನೀನೇನು ನಂಗೆ ಹೇಳೋದು ಕಚಡಾ ಎಂದು ಕೌಂಟರ್ ಕೊಟ್ಟಿದ್ದಾರೆ. ಸದ್ಯ ಈ ಪ್ರೋಮೋ ವೈರಲ್ ಆಗುತ್ತಿದ್ದು, ಇಂದಿನ ಸಂಚಿಕೆಗಾಗಿ ಪ್ರೇಕ್ಷಕರು ಕಾತುರರಾಗಿದ್ದಾರೆ.



