ರಾಜಸ್ಥಾನ: ಮನೆಯವರಿಗೆ ತಿಳಿಯದಂತೆ ರೈತ ಜಮೀನಿನಲ್ಲಿ ಹೂತಿಟ್ಟಿದ್ದ 5 ಲಕ್ಷ ರೂಪಾಯಿ ನಗದು ಹಣ ಗೆದ್ದಲು ತಿಂದು ಹಾಳಾಗಿರುವ ಘಟನೆ ರಾಜಸ್ಥಾನದ ಬಾಲೋತ್ರಾ ಜಿಲ್ಲೆಯಲ್ಲಿ ನಡೆದಿದೆ.

ಪಚಪದ್ರಾ ನಿವಾಸಿ ಮಾಂಗಿಲಾಲ್ ಮೇಘವಾಲ್ ಎಂಬ ರೈತ ಜಮೀನಿನಲ್ಲಿ ಶೆಡ್ ನಿರ್ಮಿಸಲು ಹಣವನ್ನು ಉಳಿಸಿಕೊಂಡಿದ್ದರು. ಮನೆಯಲ್ಲಿಟ್ಟರೆ ಸುರಕ್ಷಿತವಾಗಿರುವುದಿಲ್ಲ ಎಂಬ ಆತಂಕದಿಂದ, ಹಣವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಜಮೀನಿನೊಳಗೆ ಹೂತುಹಾಕಿದ್ದರು. ಕೆಲವು ದಿನಗಳ ಬಳಿಕ ಹಣದ ಅಗತ್ಯ ಬಂದಾಗ, ಅದನ್ನು ಎಲ್ಲಿ ಹೂತುಹಾಕಿದ್ದೇನೆ ಎಂಬುದನ್ನು ರೈತ ಮರೆತುಹೋದರು. ಕುಟುಂಬದವರು ಕೂಡ ಸಾಕಷ್ಟು ಹುಡುಕಿದರೂ ಹಣ ಸಿಕ್ಕಿರಲಿಲ್ಲ.

ಇತ್ತೀಚೆಗೆ ಜಮೀನನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುವ ವೇಳೆ ಪ್ಲಾಸ್ಟಿಕ್ ಚೀಲ ಪತ್ತೆಯಾಯಿತು. ಅದನ್ನು ತೆರೆದು ನೋಡಿದಾಗ ಒಳಗಿದ್ದ ಬಹುತೇಕ ನೋಟುಗಳನ್ನು ಗೆದ್ದಲುಗಳು ತಿಂದು ಸಂಪೂರ್ಣ ಹಾಳು ಮಾಡಿರುವುದು ಬೆಳಕಿಗೆ ಬಂದಿದೆ.

ಹಾಳಾದ ನೋಟುಗಳನ್ನು ಕುಟುಂಬಸ್ಥರು ಸ್ಥಳೀಯ ಎಸ್‌ಬಿಐ ಶಾಖೆಗೆ ತೆಗೆದುಕೊಂಡು ಹೋದರೂ, ಅವುಗಳ ಸ್ಥಿತಿ ತುಂಬಾ ಕೆಟ್ಟಿರುವ ಕಾರಣ ಬ್ಯಾಂಕ್ ಸ್ವೀಕರಿಸಲಿಲ್ಲ ಎನ್ನಲಾಗಿದೆ. ಅಲ್ಲದೇ ಜೈಪುರದಲ್ಲಿರುವ ಆರ್‌ಬಿಐ ಅಥವಾ ಎಸ್‌ಬಿಐ ಮುಖ್ಯ ಕಚೇರಿಯಲ್ಲಿ ಪರಿಶೀಲನೆ ಬಳಿಕ ಬದಲಾವಣೆ ಸಾಧ್ಯವಾಗಬಹುದು ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ. ಆದರೆ, ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಜೈಪುರಕ್ಕೆ ತೆರಳಲು ಕೂಡ ಹಣವಿಲ್ಲದ ಕಾರಣ, ಇದೀಗ ಏನು ಮಾಡಬೇಕು ಎಂಬ ಚಿಂತೆಯಲ್ಲಿ ಕುಟುಂಬ ಮುಳುಗಿದೆ ಎಂದು ವರದಿಯಾಗಿದೆ.
जमीन में पैसे कौन दबाता है इस किसान ने अपना प्लोट बेचकर चोरी के डर से 5 लाख रूपये ज़मीन में दबा दिए।
कुछ दिन बाद पैसे निकाले सारे पैसे दिमाक खा गई और बड़ा नुक्सान उठाना पड़ा। pic.twitter.com/ByAvdK8BH3
— 𝗠𝗮𝗿𝗶𝘆𝗮𝗺_𝗠𝗕𝗗 (@Mariyam_MBD) August 9, 2026






