ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಹುತೇಕ ಹೊರಬಿದ್ದಿದೆ. ಯಾವ ಪಕ್ಷಕ್ಕೆ ಬಹುಮತ ಸಿಗಬಹುದು ಎಂಬ ಸ್ಪಷ್ಟ ಚಿತ್ರಣ ಸಿಕ್ಕಿದೆ. ಅದರೆ ರಾಜಸ್ಥಾನದ ಮತದಾರರು 30 ವರ್ಷಗಳಿಂದಲೂ 5 ವರ್ಷ ಅಧಿಕಾರ ನಡೆಸಿದ ಯಾವುದೇ ಪಕ್ಷಕ್ಕೂ ಮತ್ತೆ ಅಧಿಕಾರ ನೀಡಿಲ್ಲ. ಈ ಬಾರಿಯೂ ಅಂತಹದ್ದೆ ಸ್ಥಿತಿ ನಿರ್ಮಣವಾಗಿದೆ
ತೆಲಂಗಾಣದಲ್ಲಿ ಹತ್ತು ವರ್ಷಗಳ ಬಿಆರ್ಎಸ್ ಪಕ್ಷದ ಅಧಿಕಾರ ಕೊನೆಗೊಂಡಿದ್ದು, ಮತದಾರರು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಆಗೆಯೇ ಮಧ್ಯ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ನಿರೀಕ್ಷೆಯಂತೆ ಬಿಜೆಪಿ ದಿಗ್ವಿಜಯ ಸಾಧಿಸಿದೆ. ಛತ್ತೀಸ್ಗಢದಲ್ಲಿ ಕಾಂಗ್ರೆಸ್ಗೆ ಮತದಾರರು ಶಾಕ್ ಕೊಟ್ಟಿದ್ದು, ಬಿಜೆಪಿ ಕೈ ಹಿಡಿದಿದ್ದಾರೆ.
ರಾಜಸ್ಥಾನದಲ್ಲಿ 1990ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಮತ್ತೆ 1993ರರಲ್ಲಿ ಅಧಿಕಾರಕ್ಕೆ ಬಂದಿತ್ತು. ನಂತರ ರಾಜಸ್ಥಾನದ ಮತದಾರರು 30 ವರ್ಷಗಳಿಂದಲೂ 5 ವರ್ಷ ಅಧಿಕಾರ ನಡೆಸಿದ ಯಾವುದೇ ಪಕ್ಷಕ್ಕೂ ಮತ್ತೆ ಅಧಿಕಾರ ನೀಡಿಲ್ಲ.
![](https://pratidhvani.com/wp-content/uploads/2023/12/raj_1700832874756_1700832877973.jpg)
2018ರಲ್ಲಿ 100 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಗೆಹ್ಲೋಟ್ 3ನೇ ಬಾರಿ ಸಿಎಂ ಆಗಿದ್ದರು. ಆದರೆ ಇದೀಗ 2023ರ ಚುನಾವಣೆಯಲ್ಲಿ ಮತ್ತೆ ಅಧಿಕಾರ ಬದಲಾವಣೆ ಮುಂದುವರಿದಿದೆ. ಕಾಂಗ್ರೆಸ್ ಅಧಿಕಾರ ಕಳೆದುಕೊಂಡರೆ, ಬಿಜೆಪಿ ಗೆಲುವಿನತ್ತ ಹೆಜ್ಜೆಯಿಟ್ಟಿದೆ.