mmಉತ್ತರ ಪ್ರದೇಶದ (Uttara pradesh) ಶಂಬಾಲ್ ಜಿಲ್ಲೆಯ ಶಾಹಿ ಜಮಾ ಮಸೀದಿ (Shahi Jama masjid) ಸರ್ವೆಗೆ ಹೋದ ಹೋದ ವೇಳೆ ಜನ ರೊಚ್ಚಿಗೆದ್ದು ಭಾರೀ ಗಲಾಟೆ ಗದ್ದಲ ಕೋಲಾಹಲ ಸೃಷ್ಟಿಯಾದ ಬೆನ್ನಲ್ಲೇ, ಇತ್ತ ರಾಜಸ್ಥಾನದ ಅಜ್ಮೀರ್ ದರ್ಗಾವೂ (ajmir darga) ಹಿಂದೂ ದೇವಸ್ಥಾನದ ಮೇಲೆ ಕಟ್ಟಿದ್ದು ಅಂತ ರಾಜಸ್ಥಾನದ ಅಜೀರ್ ಕೋರ್ಟ್ ಗೆ ಹಿಂದುಪರ ವಕೀಲರು ಅರ್ಜಿಸಲ್ಲಿಸಿದ್ದಾರೆ.

ಈ ಬಗ್ಗೆ ಅಜೀರ್ ದರ್ಗಾ ಕಮಿಟಿಗೆ ಕೋರ್ಟ್ ನೋಟಿಸ್ ನೀಡಿದೆ. ದರ್ಗಾವನ್ನ ಮಹದೇವ ದೇವಸ್ಥಾನ ಮತ್ತು ಜೈನ್ ದೇವಾಲಯದ ಮೇಲೆ ಕಟ್ಟಲಾಗಿದೆ. ಖಾಲಿ ಜಾಗದಲ್ಲಿ ದರ್ಗಾ ಕಟ್ಟಲಾಗಿದೆ ಅನ್ನೋದಕ್ಕೆ ಯಾವ ದಾಖಲೆ ಇಲ್ಲ. ದರ್ಗಾದ ಗುಂಬಜ್ ಮತ್ತು ಮುಖ್ಯಭಾಗ ಹಿಂದೂ ಸಂಪ್ರದಾಯಿಕ ಕಟ್ಟಡವಾಗಿದೆ ಎದು ಈ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಕೂಲಂಕುಶವಾದ ಸರ್ವೆ ಮಾಡಲು ಪುರಾತತ್ವ ಇಲಾಖೆಗೆ ಆದೇಶ ನೀಡಬೇಕು ಎಂದು ಹಿಂದೂ ಸೇನೆಯ ಅಧ್ಯಕ್ಷ ವಿಷ್ಣುಗುಪ್ತ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಅಜೀರ್ ಸಿವಿಲ್ ಕೋರ್ಟ್ ದರ್ಗಾ ಕಮಿಟಿಗೆ ಈ ಕುರಿತು ನೋಟಿಸ್ ಜಾರಿ ಮಾಡಿದ್ದು, ಈ ಬಗ್ಗೆ ಡಿಸೆಂಬರ್ 2ಕ್ಕೆ ವಿಚಾರಣೆ ಮುಂದೂಡಿದೆ.












