ಬೆಂಗಳೂರು(Bangalore): ಮುಂಗಾರು ಜೂನ್ (June) ಮೊದಲ ವಾರದಲ್ಲಿಯೇ ಕರ್ನಾಟಕ(Karnataka) ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಕೆ (Weather Department) ಮುನ್ಸೂಚನೆ ನೀಡಿದೆ.
ಈಗಾಗಲೇ ರಾಜ್ಯದ ಹಲವೆಡೆ ಮುಂಗಾರು ಪೂರ್ವ ಮಳೆಯ (Pre-Monsoon) ಅಬ್ಬರ ಆರಂಭವಾಗಿದೆ. ಜೂನ್ 7 ಅಥವಾ 8ರಂದು ಮುಂಗಾರು ಮಾರುತಗಳು (Monsoon Winds) ಕರ್ನಾಟಕ ಪ್ರವೇಶಿಸಲಿವೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮೇ 19ರಂದು ನೈಋತ್ಯ ಮುಂಗಾರು ಮಾರುತಗಳು (South West Monsoon 2024) ಅಂಡಮಾನ್ ನಿಕೋಬಾರ್(Andaman & Nicobar) ಮೂಲಕ ಭಾರತವನ್ನು ಪ್ರವೇಶಿಸಲಿದೆ. ಜೂನ್ 7 ಅಥವಾ 8 ರಂದು ಮುಂಗಾರು ಮಳೆ ರಾಜ್ಯದಲ್ಲಿ ಆರಂಭವಾಗಲಿದೆ. ಈ ವರ್ಷ ಕರ್ನಾಟಕ ರಾಜ್ಯ ಸೇರಿದಂತೆ ದಕ್ಷಿಣ ಭಾರದಲ್ಲಿ (South India) ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈಗಾಗಲೇ ರಾಜ್ಯದಲ್ಲಿ ಮುಂಗಾರು (Monsoon) ಪೂರ್ವ ಮಳೆಯಾಗುತ್ತಿದೆ. ಕೊಡಗಿನಲ್ಲಿಯೂ(Kodagu) ಕಾವೇರಿ (Kaveri) ನದಿಗೆ ಜೀವಕಳೆ ಬಂದಿದೆ. ಬೆಳಗಾವಿ(Belagavi), ಹಾವೇರಿ(Haveri), ಹುಬ್ಬಳ್ಳಿ(Hubli), ಕೊಡಗು(Kodagu), ಚಿಕ್ಕಮಗಳೂರು(chikkamagaluru), ಹಾಸನ(Hassan) ಸೇರಿ ಹಲವೆಡೆ ಮಳೆ ಆಗುತ್ತಿದೆ. ಮುಂದಿನ ಐದು ದಿನ ಬೆಂಗಳೂರು (Bangalore) ಸೇರಿ ರಾಜ್ಯದ ವಿವಿಧೆಡೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ(Weather Department) ಹೇಳಿದೆ.