ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಳೆರಾಯನ ಅಡ್ಡಿಯಾಗಿದೆ.ಭಾರೀ ಮಳೆಯಿಂದಾಗಿ ಮಂಡ್ಯ ಸಾಹಿತ್ಯ ಸಮ್ಮೇಳನವೇ ಅಸ್ತವ್ಯಸ್ತಗೊಂಡಿದೆ.
ಸಮ್ಮೇಳನದ 2ನೇ ದಿನದಂದು ಇಂದು ಸಂಜೆ ಶುರುವಾದ ಮಳೆ, ಅರ್ಧಗಂಟೆಗೂ ಹೆಚ್ಚುಕಾಲ ಎಡಬಿಡದೇ ಸುರಿಯಿತು.ಮಳೆಯಿಂದಾಗಿ ವೇದಿಕೆಯ ಆಸುಪಾಸು ಸಂಪೂರ್ಣ ಕೆಸರು ಗದ್ದೆಯಂತಾಗಿದೆ. ಈ ಹಿನ್ನೆಲೆಯಲ್ಲಿ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ಜನರಿಗೆ ಭಾರೀ ಮಳೆಯಿಂದಾಗಿ ಅಡ್ಡಿಯಾದಂತೆ ಆಗಿದೆ.