ರಾಜ್ಯದ ಹಲವೆಡೆ ಈಗಾಗ್ಲೇ 4 ದಿನದಿಂದ ಉತ್ತಮ ಮಳೆ ಆಗುತ್ತಿದೆ.ಬಂಗಾಳಕೊಳ್ಳಿಯಲ್ಲಿ(Bay of Bengal) ವಾಯು ಭಾರ ಕುಸಿತ ಹಿನ್ನೆಲೆಯಲ್ಲಿ ಮುಂದಿನ ಐದು ದಿನ ಬೆಂಗಳೂರು ಸೇರಿದಂತೆ ರಾಜ್ಯ ವಿವಿಧ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ(Weather Department) ಮುನ್ಸೂಚನೆ ನೀಡಿದೆ.ಮುಂದಿನ 48 ಗಂಟೆಯಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ಸ್(Celsius) ಉಷ್ಣಾಂಶ ಇರಲಿದೆ. ಕನಿಷ್ಠ ತಾಪಮಾನ(Temperature) 23 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ತಿಳಿಸಿದೆ. ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ರೂಪುಗೊಂಡ ಪರಿಣಾಮ ಸೈಕ್ಲೋನ್(Cyclone) ಸೃಷ್ಟಿಯಾಗಿದೆ.
ನಾಳೆ ರಿಮಲ್ (Cyclone Remal) ಹೆಸರಿನ ಸೈಕ್ಲೋನ್ ಸೃಷ್ಟಿಯಾಗಲಿದೆ. ಇದು ಬಂಗಾಳ ಕೊಲ್ಲಿಯಲ್ಲಿ ಉತ್ತರಾಭಿಮುಖವಾಗಿ(North Ward) ಚಲಿಸಲಿದೆ.
ಮೇ 26 ರಂದು ಪಶ್ಚಿಮ ಬಂಗಾಳ ಅಥವಾ ಬಾಂಗ್ಲಾದೇಶದ ಬಳಿ ಸೈಕ್ಲೋನ್ ಭೂ-ಸ್ಪರ್ಷ(Earth touch) ಮಾಡಲಿದೆ. ಸೈಕ್ಲೋನ್ ಪರಿಣಾಮವಾಗಿ ಪಶ್ಚಿಮ ಬಂಗಾಳ, ಒರಿಸ್ಸಾ, ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಸೈಕ್ಲೋನ್ನಿಂದ ಮುಂಗಾರು ಮಳೆ ತೀವ್ರವಾಗುವ ಸಾಧ್ಯತೆಯೂ ಇದೆ. ಕರ್ನಾಟಕದ ಬಳ್ಳಾರಿ, ಬೆಳಗಾವಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ