ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲಡಾಖ್ ಪ್ರಾಂತ್ಯದ ಲೇಹ್ ಮಾರುಕಟ್ಟೆಯಲ್ಲಿ ಸೇನೆಯ ಹಿರಿಯ ಅಧಿಕಾರಿಗಳನ್ನು ಮಂಗಳವಾರ (ಆಗಸ್ಟ್ 22) ಭೇಟಿ ಮಾಡಿದ್ದಾರೆ.
ರಾಹುಲ್ ಭೇಟಿಯ ವಿಡಿಯೊವನ್ನು ಕಾಂಗ್ರೆಸ್ ತನ್ನ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದು, ‘ಭಾರತ ಮಾತೆಗೆ ಜಯವಾಗಲಿ’ ಎಂದು ಬರೆದುಕೊಂಡಿದೆ.
ನಾಯಕ ರಾಹುಲ್ ಗಾಂಧಿ ಅವರು ಆಗಸ್ಟ್ 19ರಂದು ಬೈಕ್ನಲ್ಲಿ ಲಡಾಖ್ ಪ್ರವಾಸ ಆರಂಭಿಸಿದ್ದರು. ಅವರೊಂದಿಗೆ ಹಲವು ಬೈಕರ್ಗಳು ಇದ್ದಾರೆ.
ಈ ಕುರಿತು ಇನ್ಸ್ಟಾಗ್ರಾಮ್ ಪೋಸ್ಟ್ ಹಂಚಿಕೊಂಡಿದ್ದ ರಾಹುಲ್, “ಜಗತ್ತಿನ ಅತಿ ಸುಂದರ ಪ್ರದೇಶಗಳಲ್ಲಿ ಒಂದು ಎಂದು ನನ್ನ ತಂದೆ ಯಾವಾಗಲೂ ಹೇಳುತ್ತಿದ್ದ ಪಾಂಗಾಂಗ್ ಸರೋವರಕ್ಕೆ ಹೊರಟಿದ್ದೇವೆ” ಎಂದು ತಿಳಿಸಿದ್ದರು.
ಲಡಾಖ್ ಲೇಹ್ನಲ್ಲಿಯ ಪಾಂಗಾಂಗ್ ಸರೋವರ ತಟಕ್ಕೆ ಭಾನುವಾರ ಭೇಟಿ ನೀಡಿದ್ದ ರಾಹುಲ್ ಗಾಂಧಿ, ತಮ್ಮ ತಂದೆ ರಾಜೀವ್ ಗಾಂಧಿ ಜನ್ಮದಿನದ ಪ್ರಯುಕ್ತ ಗೌರವ ನಮನ ಸಲ್ಲಿಸಿದ್ದರು. ಸೋಮವಾರ ಖರ್ದುಂಗ್ ಲಾಗೆ ತೆರಳಿದ್ದರು.
ರಾಹುಲ್, ಆಗಸ್ಟ್ 25 ರವರೆಗೆ ಲಡಾಖ್ನಲ್ಲಿ ಇರಲಿದ್ದಾರೆ.