• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ತಮಿಳುನಾಡು | ಮಹಿಳೆಯರು ನಡೆಸುವ ಚಾಕೋಲೇಟ್‌ ಫ್ಯಾಕ್ಟರಿಗೆ ರಾಹುಲ್‌ ಗಾಂಧಿ ಭೇಟಿ

ಪ್ರತಿಧ್ವನಿ by ಪ್ರತಿಧ್ವನಿ
August 27, 2023
in ಇದೀಗ, ದೇಶ, ರಾಜಕೀಯ
0
ರಾಹುಲ್‌ ಗಾಂಧಿ

ತಮಿಳುನಾಡಿನಲ್ಲಿ ಮಹಿಳೆಯರು ನಡೆಸುವ ಚಾಕೊಲೇಟ್‌ ಕಾರ್ಖಾನೆಗೆ ರಾಹುಲ್‌ ಗಾಂಧಿ ಭೇಟಿ ನೀಡಿದರು

Share on WhatsAppShare on FacebookShare on Telegram

ತಮಿಳುನಾಡಿನಲ್ಲಿ ಸುಮಾರು 70 ಮಹಿಳೆಯರು ನಡೆಸುತ್ತಿರುವ ಮಾಡೀಸ್ ಚಾಕೋಲೆಟ್ ಕಾರ್ಖಾನೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ್ದು, ಚಾಕೋಲೆಟ್ ಮಾಡುವ ವಿಧಾನವನ್ನು ಕಲಿತುಕೊಂಡಿದ್ದಾರೆ ಎಂದು ಭಾನುವಾರ (ಆಗಸ್ಟ್‌ 27) ವರದಿಯಾಗಿದೆ.

ADVERTISEMENT

ತಮಿಳುನಾಡಿನ ಜನಪ್ರಿಯ ಚಾಕೋಲೆಟ್ ಬ್ರಾಂಡ್ ‘ಮಾಡೀಸ್’ (moddy’s) ಚಾಕೋಲೆಟ್ ಅನ್ನು ಹೇಗೆ ತಯಾರಿಸಲಾಗುತ್ತದೆ ಎಂಬುವುದರ ಬಗ್ಗೆ ರಾಹುಲ್ ಗಾಂಧಿ ವಿವರವಾದ ಮಾಹಿತಿ ಪಡೆದಿದ್ದಾರೆ. ಜೊತೆಯಲ್ಲಿ ತಮಿಳು ಭಾಷೆ ಕಲಿಯಲು ಪ್ರಯತ್ನಿಸಿದ್ದಾರೆ.

ಈ ಬಗ್ಗೆ ರಾಹುಲ್‌ ಗಾಂಧಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ‘ಎಕ್ಸ್ʼ ಖಾತೆಯಲ್ಲಿ ಭಾನುವಾರ ಬರೆದುಕೊಂಡಿದ್ದು ವಿಡಿಯೊ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಮಹಿಳೆಯರೆಲ್ಲ ಸೇರಿ ಉದ್ಯಮವೊಂದನ್ನು ನಡೆಸುತ್ತಿರುವುದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

A team of 70 incredible women drives one of Ooty’s famous chocolate factories!

The story of Moddys Chocolates is a remarkable testament to the great potential of India's MSMEs.

Here's what unfolded during my recent visit to the Nilgiris:https://t.co/yNdM37M01M pic.twitter.com/UfPvLryBuC

— Rahul Gandhi (@RahulGandhi) August 27, 2023

“70 ಮಹಿಳೆಯರು ಒಟ್ಟಾಗಿ ಊಟಿಯ ಪ್ರಸಿದ್ಧ ಚಾಕೋಲೆಟ್ ಫ್ಯಾಕ್ಟರಿಯೊಂದನ್ನು ನಡೆಸಿಕೊಂಡು ಬರುತ್ತಿದ್ದಾರೆ! ಮಾಡೀಸ್ ಚಾಕೋಲೆಟ್ ನಡೆದು ಬಂದ ಹಾದಿ ಇತರ ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ನಡೆಸುತ್ತಿವವರಿಗೆ ಸ್ಪೂರ್ತಿಯಾಗಲಿದೆ” ಎಂದು ಹೇಳಿದರು.

“ಈ ಸಾಧನೆಯ ಹಿಂದಿನ ಶಕ್ತಿಗಳಾದ ಮುರಳೀಧರ್ ರಾವ್ ಮತ್ತು ಸ್ವಾತಿ ಅವರ ಉದ್ಯಮಶೀಲತಾ ಮನೋಭಾವವು ಸ್ಪೂರ್ತಿದಾಯಕವಾಗಿದೆ. 70 ಮಹಿಳೆಯರು ಕೂಡ ಅಷ್ಟೇ ಸ್ಪೂರ್ತಿದಾಯಕರಾಗಿದ್ದಾರೆ. ನಾನು ರುಚಿ ಕಂಡ ಹಲವು ಚಾಕೋಲೆಟ್ಗಳಲ್ಲಿ ಈ ಚಾಕೋಲೆಟ್ ಅತ್ಯದ್ಭುತವಾಗಿದೆ” ಎಂದರು.

ಜಿಎಸ್ಟಿಯನ್ನು ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಕರೆದ ರಾಹುಲ್ ಗಾಂಧಿ, ಕೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದ ಅಸಂಖ್ಯಾತ ಇತರ ಸಣ್ಣ ಮತ್ತು ಮಧ್ಯಮ ಉದ್ಯಮಗಳಂತೆಯೇ ಮಾಡೀಸ್ ಚಾಕೋಲೆಟ್ಗೂ ಜಿಎಸ್ಟಿಯ ಬಿಸಿ ಮುಟ್ಟಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗಿಂತ ಕೇಂದ್ರಕ್ಕೆ ದೊಡ್ಡ ಉದ್ಯಮಗಳೇ ಹೆಚ್ಚು ಆಸಕ್ತಿದಾಯಕವಾಗಿವೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಹಲವು ವಿಷಯಗಳನ್ನು ಚರ್ಚಿಸಿದ ನಂತರ ರಾಹುಲ್ಗೆ ಮಹಿಳೆಯರು ಮಾಡೀಸ್ ಚಾಕೋಲೆಟ್ ತಯಾರಿಸುವ ವಿಧಾನವನ್ನು ಹೇಳಿಕೊಟ್ಟರು. ಅಪ್ರಾನ್ ತೊಟ್ಟು ರೆಡಿಯಾದ ರಾಹುಲ್ ಗಾಂಧಿ ಚಾಕೋಲೆಟ್ ಮೋಲ್ಗೆ ಕ್ರೀಮ್ನ್ನು ಸುರಿದು ಚಾಕೋಲೆಟ್ ಮಾಡುವುದನ್ನು ಕಲಿತರು. ಈ ವೇಳೆ ತಮಿಳು ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸಿದರು.

Tags: Chocolate FactoryMadisRahul GandhiTamilnaduಚಾಕೋಲೇಟ್‌ ಕಾರ್ಖಾನೆತಮಿಳುನಾಡುಮಾಡೀಸ್‌ರಾಹುಲ್‌ ಗಾಂಧಿ
Previous Post

ಮೇಕೆದಾಟು ಯೋಜನೆ ಅನುಷ್ಠಾನ ಯಾವಾಗ?: ಸರ್ಕಾರಕ್ಕೆ ಎಎಪಿ ಪ್ರಶ್ನೆ

Next Post

ಕೇರಳ | ಭದ್ರಕಾಳಿ ದೇವಾಲಯದಲ್ಲಿ ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌ ಪೂಜೆ

Related Posts

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?
Top Story

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

by ಪ್ರತಿಧ್ವನಿ
May 15, 2026
0

ಬೆಂಗಳೂರು :  ಪರಿಣತ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಕೆಲಸ ಮಾಡುವ ಕ್ಷಮೆತೆಯಿರುವ ರಾಜ್ಯದ ಕಾರ್ಮಿಕರಿಗೆ ಅವಕಾಶ ಕಲ್ಪಿಸುವ ಸಂಬಂಧ ಕಾರ್ಮಿಕ ಸಚಿವ ಸಂತೋಷ್‌...

Read moreDetails
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

May 15, 2026
ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

May 15, 2026
ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

May 15, 2026
ಕೇರಳದ ನೂತನ ಸಿಎಂ: ವೇಣುಗೋಪಾಲ್‌ಗೆ ನಿರಾಸೆ? ಫಸ್ಟ್ ರಿಯಾಕ್ಷನ್ ಏನು

ಕೇರಳದ ನೂತನ ಸಿಎಂ: ವೇಣುಗೋಪಾಲ್‌ಗೆ ನಿರಾಸೆ? ಫಸ್ಟ್ ರಿಯಾಕ್ಷನ್ ಏನು

May 15, 2026
Next Post
ಎಸ್‌.ಸೋಮನಾಥ್‌

ಕೇರಳ | ಭದ್ರಕಾಳಿ ದೇವಾಲಯದಲ್ಲಿ ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌ ಪೂಜೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada