ಪುಣೆ: ಪ್ರಧಾನಿ ಮೋದಿ (Narendra Modi) ಎರಡು ಭಾರತಗಳನ್ನು ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ನ್ಯಾಯವೂ ಸಂಪತ್ತಿನ ಮೇಲೆ ಅವಲಂಬಿತವಾಗಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂದಿ ವಾಗ್ದಾಳಿ ನಡೆಸಿದ್ದಾರೆ.
ಬಸ್, ಟ್ರಕ್ ಅಥವಾ ಓಲಾ-ಉಬರ್ ಚಾಲಕರು ರಸ್ತೆ ಅಪಘಾತದಲ್ಲಿ ಬೇರೆಯವರ ಸಾವಿಗೆ ಕಾರಣವಾದರೆ, 10 ವರ್ಷಗಳ ಕಾಲ ಜೈಲಿಗೆ ಕಳುಹಿಸಲಾಗುತ್ತದೆ. ವಾಹನದ ಕೀಯನ್ನು ಕಸಿದುಕೊಳ್ಳಲಾಗುತ್ತದೆ. ಆದರೆ, 16 ವರ್ಷ ವಯಸ್ಸಿನವನು ಪೋರ್ಷೆ ಕಾರನ್ನು ಅಮಲೇರಿದ ಸ್ಥಿತಿಯಲ್ಲಿ ಓಡಿಸಿ ಇಬ್ಬರು ವ್ಯಕ್ತಿಗಳನ್ನು ಕೊಂದಿದ್ದಾನೆ. ಆತನಿಗೆ ಶಿಕ್ಷೆಯಾಗಿಲ್ಲ ಎಂದು ರಾಹುಲ್ ಕಿಡಿಕಾರಿದ್ದಾರೆ.
![](https://pratidhvani.com/wp-content/uploads/2024/05/narendra-modi-2024-05-07t113623.314-1024x576.webp)
ಪುಣೆಯ ಜುವೆನೈಲ್ ಜಸ್ಟಿಸ್ ಬೋರ್ಡ್ ಇಬ್ಬರು ಜನರನ್ನು ಕೊಂದ ಕಾರು ಅಪಘಾತದಲ್ಲಿ ಭಾಗಿಯಾಗಿದ್ದ ಅಪ್ರಾಪ್ತನಿಗೆ ಜಾಮೀನು ನೀಡಿತ್ತು. ಆದರೆ, ಆತನನ್ನು ವಯಸ್ಕ ಆರೋಪಿ ಎಂದು ಪರಿಗಣಿಸಿ ವಿಚಾರಣೆ ನಡೆಸಲು ಉನ್ನತ ನ್ಯಾಯಾಲಯದ ಅನುಮತಿ ಪಡೆಯುವುದಾಗಿ ಪೊಲೀಸರು ತಿಳಿಸಿದ್ದರು. ಕೆಲವೇ ಗಂಟೆಗಳ ಆತ ಜಾಮೀನಿನ ಮೇಲೆ ಹೊರಗೆ ಬಂದಿದ್ದ.