ಕಾಂಗ್ರೆಸ್ ನಾಯಕ ಈ ಹಿಂದೆ ‘ಯುವರಾಜ’ನಂತೆ ವರ್ತಿಸುತ್ತಿದ್ದರು. ಮತ್ತೀಗ ಅವರು ದೇಶದ ‘ರಾಜ’ ಎಂದು ಭಾವಿಸುತ್ತಿದ್ದಾರೆ ಎಂದು ಕಾನೂನು ಸಚಿವ ಕಿರಣ್ ರಿಜಿಜು ಇಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
ಬಿಜೆಪಿ ಸರ್ಕಾರವು ಎರಡು ಭಾರತಗಳನ್ನು ಸೃಷ್ಟಿಸಿದೆ ಎಂದು ಆರೋಪಿಸಿ ಮಾಜಿ ಕಾಂಗ್ರೆಸ್ ಅಧ್ಯಕ್ಷರ ರಾಹುಲ್ ಗಾಂಧಿ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಿರಣ್, “ಎರಡು ಭಾರತಗಳೆಂದರೆ: ಒಂದು ಜನರು ಉನ್ನತ ದರ್ಜೆಯ ಸಮಾಜದ ಜೀವನವನ್ನು ಆನಂದಿಸುತ್ತಾರೆ, ರೇವ್ ಪಾರ್ಟಿಗಳಿಗೆ ಹಾಜರಾಗುತ್ತಾರೆ, ವಿದೇಶಿ ಸ್ಥಳಗಳಿಗೆ ಆಗಾಗ್ಗೆ ವಿಹಾರಕ್ಕೆ ಹೋಗುತ್ತಾರೆ ಮತ್ತು ಅತ್ಯಂತ ವರ್ಣರಂಜಿತ ಜೀವನವನ್ನು ಆನಂದಿಸುತ್ತಾರೆ. ಎರಡು ಭಾರತದಲ್ಲಿ ಜನರು ಸರಳ ಜೀವನವನ್ನು ನಡೆಸುತ್ತಾರೆ, ಎಲ್ಲಾ ಸಮಯದಲ್ಲೂ ಅಗತ್ಯವಿರುವ ಜನರೊಂದಿಗೆ ಇರುತ್ತಾರೆ, ಯೋಚಿಸಿ ಭಾರತೀಯ ಸಂಪ್ರದಾಯಗಳನ್ನು ಅನುಸರಿಸಿ” ಎಂದು ವ್ಯಂಗ್ಯವಾಡಿದ್ದಾರೆ.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕೇಂದ್ರವು ಎರಡು ಭಾರತಗಳನ್ನು ಸೃಷ್ಟಿಸಿದೆ – ಒಂದು ಶ್ರೀಮಂತರಿಗೆ ಮತ್ತು ಇನ್ನೊಂದು ಬಡವರಿಗೆ ಎಂದು ಸಾಲು ಸಾಲು ಆರೋಪ ಮಾಡಿ ಸುದೀರ್ಘ ಒಂದು ಗಂಟೆಗಳ ಕಾಲ ಭಾಷಣ ಮಾಡಿದ್ದರು.

