ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader rahul gandhi) 54ನೇ ಜನ್ಮ ದಿನ. ದೆಹಲಿಯ ಎಐಸಿಸಿ (AICC) ಪ್ರಧಾನ ಕಚೇರಿಯಲ್ಲಿ ರಾಹುಲ್ ಗಾಂಧಿ (Rahul gandhi) ಹುಟ್ಟುಹಬ್ಬವನ್ನ ಆಚರಿಸಲಾಯಿತು. ಕೇಕ್ ಕಟ್ ಮಾಡಿ ರಾಹುಲ್ ಗಾಂಧಿ ಜನ್ಮದಿನವನ್ನ ಆಚರಣೆ ಮಾಡಲಾಯಿತು.
![](https://pratidhvani.com/wp-content/uploads/2024/04/RAHUL-GANDHI_-PRIYANKA-GANDHI.webp)
ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ 54 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (mallikarjuna kharge), ಪ್ರಿಯಾಂಕಾ ಗಾಂಧಿ ವಾದ್ರಾ (Priyanka gandhi vadra), ಕೆ ಸಿ ವೇಣುಗೋಪಾಲ್ (KC Venugopal) ಸೇರಿದಂತೆ ಇತರ ಮುಖಂಡರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಮಾಧಾನಕರ ಮುನ್ನಡೆ ಕಂಡಿದ್ದು, ಜೊತೆಗೆ ತಾವು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ಗೆಲುವು ಸಾಧಿಸಿದ್ದು, ಅವರಿಗೆ ಸಮಾಧಾನ ತಂದಿದ್ದು, ಈ ಬಾರಿಯ ಹುಟ್ಟುಹಬ್ಬ ರಾಹುಲ್ ಗಾಂಧಿಗೆ ಕೊಂಚ ವಿಶೇಷವೆಂದೇ ಹೇಳಬಹುದು.