ಲೋಕಸಭೆಯಲ್ಲಿ ನೆನ್ನೆ ರಾಹುಲ್ ಗಾಂಧಿ (Rahul gandhi) ಮಾಡಿದ್ದ ಭಾಷಣದ ಕೆಲವೊಂದು ಪದಗಳನ್ನ ಸ್ಪೀಕರ್ (Speaker) ಕಡತದಿಂದ ತೆಗೆದಿದ್ದಾರೆ. ಭಾಷಣದ ವೇಳೆ ರಾಹುಲ್ ಹಿಂದೂ (Hindu) ಹಾಗೂ ಬಿಜೆಪಿ (Bjp) ಪದಗಳನ್ನ ಬಳಸಿದ್ರು. ಇತ್ತ ಬಿಜೆಪಿ ಸಂಸದರು, ಕೇಂದ್ರ ಸಚಿವರು ಸ್ಪೀಕರ್ ಓಂ ಬಿರ್ಲಾಗೆ ರಾಹುಲ್ ಭಾಷಣದ ವಿರುದ್ಧ ದೂರು ನೀಡಿದ್ರು. ಈ ಬೆನ್ನಲ್ಲೇ ರಾಹುಲ್ ಭಾಷಣದ ಕೆಲವು ಪದಗಳನ್ನ ಸ್ಪೀಕರ್ ಓಂ ಬಿರ್ಲಾ ಕಡತದಿಂದ ತೆಗೆದು ಹಾಕಿದ್ದಾರೆ.

ಇನ್ನು ಲೋಕಸಭೆಯಲ್ಲಿ ಕಡತದಿಂದ ರಾಹುಲ್ ಗಾಂಧಿ ಭಾಷಣದ ಅಂಶ ತೆಗೆದ ಹಿನ್ನಲೆ, ಸಂಸತ್ ಹೊರಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಮೋದಿ (Modi) ಯುಗದಲ್ಲಿ ಸತ್ಯವನ್ನು ಕಡತದಿಂದ ತೆಗೆದು ಹಾಕಲಾಗುತ್ತಿದೆ. ಆದರೇ, ವಾಸ್ತವವಾಗಿ ಸತ್ಯವನ್ನು ಕಡತದಿಂದ ತೆಗೆದು ಹಾಕಲಾಗಲ್ಲ ಅಂತ ಕಿಡಿಕಾರಿದ್ರು. ನಾನು ಏನು ಹೇಳಬೇಕೋ ಅದನ್ನು ಹೇಳಿದ್ದೇನೆ, ಇದು ಸತ್ಯ, ಅವರು ಬಯಸಿದ್ದನು ಕಡತದಿಂದ ತೆಗೆದು ಹಾಕಲಿ, ಎಂದೂ ಸತ್ಯ ಸತ್ಯವೇ ಎಂದಿದ್ದಾರೆ.