ಬೆಂಗಳೂರು : ಕಚೇರಿಯಲ್ಲೇ ಮಹಿಳೆಯರೊಂದಿಗೆ ರಾಸಲೀಲೆ ಆಡಿದ್ದ ವಿಡಿಯೋ ವೈರಲ್(Video Viral) ಹಿನ್ನೆಲೆಯಲ್ಲಿ ಡಿಜಿಪಿ ಡಾ.ರಾಮಚಂದ್ರ ರಾವ್(Ramachandra Rao) ಅನ್ನು ಅಮಾನತು ಮಾಡಲಾಗಿದೆ.

ಅಧಿಕಾರ ದುರುಪಯೋಗದಂತ ಗಂಭೀರ ಆರೋಪದ ಮೇಲೆ ಡಿಜಿಪಿ ರಾಮಚಂದ್ರ ರಾವ್ ರನ್ನ ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ನಿನ್ನೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ರಾಸಲೀಲೆ ವೈರಲ್ ಆಗುತ್ತಿದ್ದಂತೆ ರಾಮಚಂದ್ರ ರಾವ್ ಕಚೇರಿಯಿಂದ ಕಾಲ್ಕಿತ್ತು ಅಜ್ಞಾತ ಸ್ಥಳ ಸೇರಿದ್ದಾರೆ. ತಮ್ಮ ವಕೀಲರೊಂದಿಗೆ ಕಾನೂನಾತ್ಮಕ ಹೋರಾಟದ ಕುರಿತು ಚರ್ಚಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಇಂದು ಅಧಿಕಾರಿಯನ್ನು ಅಮಾನತು ಮಾಡಿ ಆದೇಶ ಮಾಡಿದೆ.

ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಡಿಜಿಪಿಯಾಗಿದ್ದ ಡಾ.ರಾಮಚಂದ್ರ ರಾವ್ 8 ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಐಜಿಪಿಯಾಗಿದ್ದಾಗ ಕಚೇರಿಗೆ ಬಂದಿದ್ದ ಮಹಿಳೆಯರ ಜೊತೆ ಅಶ್ಲೀಲವಾಗಿ ವರ್ತಿಸಿದ್ದಾರೆ ಎಂಬ 47 ಸೆಕೆಂಡ್ ವಿಡಿಯೋ ನಿನ್ನೆ ವೈರಲ್ ಆಗಿತ್ತು. ಇದರ ಬೆನ್ನಲ್ಲೆ 10 ದಿನ ರಜೆ ಹಾಕಿರುವ ರಾಮಚಂದ್ರ ರಾವ್ ಅಜ್ಞಾತ ಸ್ಥಳ ಸೇರಿದ್ದಾರೆ.













