ಇಂದು ಚಾಮರಾಜಪೇಟೆಯ (Chamarajapete) ವಿನಾಯಕ ನಗರದಲ್ಲಿ ಗೋಪೂಜೆಯಲ್ಲಿ ಭಾಗಿಯಾಗಿದ್ದ ವಿಪಕ್ಷ ನಾಯಕ ಆರ್.ಅಶೋಕ್ (R ashok) ಅವರು, ಗೋವಿನ ಕೆಚ್ಚಲು ಕೊಯ್ದ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.
ಈ ಘಟನೆಯಾದ ತಕ್ಷಣ ನನಗೆ ನಮ್ಮ ಕಾರ್ಯಕರ್ತರು ತಿಳಿಸಿದ್ರು.ನಾನು ಸ್ಥಳಕ್ಕೆ ಬಂದು ಭೇಟಿ ನೀಡಿದ್ದೇನೆ.ಹಸು ಕಟ್ಟಿದ್ದ ಜಾಗದಲ್ಲಿ ರಕ್ತ ಹರಿಯುತ್ತಿತ್ತು.ಮುನುಷ್ಯತ್ವ ಇರುವವರು ಯಾರು ಹೀಗೆ ನಡೆದುಕೊಳ್ಳಲು ಸಾಧ್ಯವಿಲ್ಲ.ನಮ್ಮ ಪೊಲೀಸರು ಹೇಳುತ್ತಾರೆ, ಆತ ಬ್ಲೇಡ್ ಹಿಡಿದುಕೊಂಡು ಇರುತ್ತಿದ್ದ ಅಂತಾರೆ.ಬ್ಲೇಡ್ ಇಟ್ಟುಕೊಂಡು ಕಾಲು ಕತ್ತರಿಸಲು ಸಾಧ್ಯವಾ ಎಂದು ಪ್ರಶ್ನೆ ಮಾಡಿದ್ದಾರೆ.
ಇದು ಯಾವನೋ ಒಬ್ಬ ಮಾಡಲು ಸಾಧ್ಯವಿಲ್ಲ.ಇದರ ಹಿಂದೆ ಬೇರೆಯವರೇ ಇದ್ದಾರೆ. ಇಲ್ಲಿ ಈ ರಸ್ತೆಯಲ್ಲಿ 50 ಕ್ಕೂ ಹೆಚ್ಚು ದನಗಳನ್ನು ಕೊಂದಿದ್ದಾರೆ.ಈ ಸರ್ಕಾರದಿಂದ ಕರ್ಣನಿಗೆ ಎರಡು ಹಸು ತೆಗೆದುಕೋ ಎಂದು ಒತ್ತಾಯಿಸಿದ್ದಾರೆ.ಒಂದು ಕೈ ಯಲ್ಲಿ ಕೊಡುವುದು, ಇನ್ನೊಂದು ಕೈ ಯಲ್ಲಿ ಕಿತ್ತುಕೊಳ್ಳುವ ಕೆಲಸ ಆಗಿದೆ.ನನಗೆ ಪೊಲೀಸರ ಮೇಲೂ ಅನುಮಾನ ಇದೆ ಎಂದು ಆರ್.ಅಶೋಕ್ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಹಸು ಮಾಲೀಕ ಕರ್ಣನ ಮೇಲೆ ಒತ್ತಾಯ ಮಾಡಲಾಗಿದೆ.ಇದಕ್ಕೆಲ್ಲಾ ನಾವು ಬಿಡುವುದಿಲ್ಲ.ಇಲ್ಲಿ ಅನ್ಯಾಯವಾದ್ರೆ, ಕರಾಳ ಸಂಕ್ರಾಂತಿ ಕೂಡ ಆಚರಣೆ ಮಾಡಲಾಗುತ್ತದೆ.ಇದು ಬಿಜೆಪಿಯ (Bjp) ಎಚ್ಚರಿಕೆ ಎಂದಿದ್ದಾರೆ.ಇಡೀ ಬೆಂಗಳೂರಿನಲ್ಲಿ ದನಗಳ ಆಸ್ಪತ್ರೆ ಬೆರಳೆಣಿಕೆಯಷ್ಟು ಮಾತ್ರ ಇರುವುದು.ಅದರಲ್ಲಿ ಚಾಮರಾಜಪೇಟೆಯಲ್ಲಿ ಒಂದು ಇದೆ.ಅದನ್ನು ವಕ್ಫ್ ಎಂದು ಮಾಡಿದ್ದೀರಿ. 500 ಕೋಟಿಗೂ ಅಧಿಕ ಹಣ ಅದರಲ್ಲಿ ಇದೆ.ಅದನ್ನು ವಕ್ಫ್ ಮಾಡಿದ್ದಾರೆ.
ಇದನ್ನು ಖಂಡಿಸಿದ್ದು, ಅದರ ವಿರುದ್ಧ ಹೋರಾಟ ಮಾಡಿರುವುದು ಕರ್ಣ.ಹೀಗಾಗಿ ಕರ್ಣನಿಗೆ ಧಮ್ಕಿ ಹಾಕಿದ್ದಾರೆ.ಆತನಿಗೆ ಎಚ್ಚರಿಕೆ ಕೊಡುವ ರೀತಿಯಲ್ಲಿ ಈಗ ಹಸುಗಳ ಕೆಚ್ಚಲನ್ನು ಕತ್ತರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಹಸುವಿನ ಆರೈಕೆಗೆ ಆರ್.ಅಶೋಕ್. ವೈಯುಕ್ತಿಕವಾಗಿ ಒಂದು ಲಕ್ಷ ರೂಪಾಯಿ ನೀಡಿದ್ದಾರೆ.ಹಸು ಇನ್ನು ಮುಂದೆ ಹಾಲು ಕೊಡಲು ಸಾಧ್ಯವಿಲ್ಲ.ಹೀಗಾಗಿ, ನಾನು ವೈಯುಕ್ತಿಕವಾಗಿ ಒಂದು ಲಕ್ಷ ರೂಪಾಯಿ ಕೊಡುತ್ತಿದ್ದೇನೆ ಎಂದು ಆರ್. ಅಶೋಕ್ ಹೇಳಿದ್ದಾರೆ.