ಮಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಪುತ್ತೂರಿನ ಬಿಜೆಪಿ ಶಾಸಕ ಸಂಜೀವ ಮಠಂದೂರು ಭಾರೀ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಮಹಿಳೆಯೊಂದಿಗೆ ಬಿಜೆಪಿ ಶಾಸಕ ಇರುವ ಫೋಟೋ ವೈರಲ್ ಆಗಿದ್ದು ಕರಾವಳಿ ಭಾಗದಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಈ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಮಹಿಳೆಯು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿದ ಮಹಿಳೆಯು ನನ್ನ ಫೋಟೋವನ್ನು ಶಾಸಕರ ಫೊಟೋವೊಂದಿಗೆ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ. ಇದರಿಂದ ನನಗೂ ನನ್ನ ಕುಟುಂಬದವರಿಗೂ ನೋವುಂಟಾಗಿದೆ ಎಂದು ಆರೋಪಿಸಿದ್ದಾರೆ. ಮಹಿಳೆಯು ಇನ್ಫಾರ್ಮೇಶನ್ ಟೆಕ್ನಾಲಜಿ ಆಕ್ಟ್ ಅಡಿಯಲ್ಲಿ ಕೇಸ್ ದಾಖಲು ಮಾಡಿದ್ದಾರೆ.
ಈ ಪ್ರಕರಣದ ಸಂಬಂಧ ಮಾತನಾಡಿದ ದೂರುದಾರ ಮಹಿಳೆ, ನಾನು ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು ಈವರೆಗೂ ಮುಖತಃ ಭೇಟಿ ಮಾಡಿಲ್ಲ. ಶಾಸಕರನ್ನು ಭೇಟಿ ಮಾಡುವ ಪ್ರಸಂಗವೇ ನನಗೆ ಇದುವರೆಗೂ ಬಂದಿಲ್ಲ. ಆದರೆ ಈಗ ನನ್ನ ಫೋಟೋವನ್ನು ಎಡಿಟ್ ಶಾಸಕರ ಫೋಟೋದೊಂದಿಗೆ ಇಡಲಾಗಿದೆ. ಈ ಬೆಳವಣಿಗೆಯಿಂದ ನಾನು ಕುಟುಂಬದವರು ನೊಂದಿದ್ದೇವೆ. ಈ ಸಂಬಂಧ ನಾನು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.