ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Stylish star Allu Arjun) ನಟನೆಯ ಪುಷ್ಪ-೨ (Pushpa 2) ಸಿನಿಮಾ ರಿಲೀಸ್ ಗೂ ಮುನ್ನವೇ ದಾಖಲೆ ಮೇಲೆ ದಾಖಲೆಗಳನ್ನು ಬರೆಯುತ್ತಿದೆ. ಇದೀಗ ರಿಲೀಸ್ ಆದ ಒಂದೇ ವಾರದಲ್ಲಿ ಪುಷ್ಪ ಮತ್ತೊಂದು ದಾಖಲೆ ಬರೆದಿದ್ದಾನೆ.
ಈಗಾಗಲೇ ದೇಶಾದ್ಯಂತ ಪುಷ್ಪ ೨ ಸಿನಿಮಾದಲ್ಲಿನ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika mandanna) ಅಭಿನಯ ಹಾಗೂ ಸುಕುಮಾರ್ ನಿರ್ದೇಶನಕ್ಕೆ ಪ್ರೇಕ್ಷಕರು ಜೈಕಾರ ಹಾಕಿದ್ದಾರೆ. ದಿನದಿಂದ ದಿನಕ್ಕೆ ಪುಷ್ಪರಾಜ್ ಹವಾ ಹೆಚ್ಚಾಗಿದ್ದು, ಕೇವಲ 6 ದಿನದಲ್ಲಿ ಪುಷ್ಪಾ 2 ಸಿನಿಮಾ ಬರೋಬ್ಬರಿ 1002 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಪುಷ್ಪ ಚಿತ್ರ ತಂಡ ಅಧಿಕೃತವಾಗಿ ಈ ಮಾಹಿತಿ ಹಂಚಿಕೊಂಡಿದ್ದು, ಇದು ಭಾರತೀಯ ಸಿನಿಮಾ ಇತಿಹಾಸದಲ್ಲೇ ಮೊಟ್ಟ ಮೊದಲ ದಾಖಲೆ ಆಗಿದೆ. ಪುಷ್ಪ 2 ಸಿನಿಮಾ ಅತಿ ಕಡಿಮೆ ಅವಧಿಯಲ್ಲಿ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಚಿತ್ರ ತಂಡದ ಅಧಿಕೃತ ಘೋಷಣೆ ಪ್ರಕಾರ ಪುಷ್ಪಾ 2 ಬರೋಬ್ಬರಿ 1002 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸಂತಸ ಹಂಚಿಕೊಂಡಿದೆ.