ಪಂಜಾಬಿ ಗಾಯಕ ನಿರ್ವಾರಿ ಸಿಂಗ್ ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಆಸ್ಟ್ರೇಲಿಯಾದ ಡಿಗ್ಗರ್ಸ್ ರೆಸ್ಟ್ ನಲ್ಲಿರುವ ಬುಲ್ಲಾ ಡಿಗ್ಗರ್ಸ್ ರೆಸ್ಟ್ ರಸ್ತೆಯಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಮೂರು ಕಾರುಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದ್ದು, ಗಾಯಕ ನಿರ್ವಾರಿ ಸಿಂಗ್ ಮೃತಪಟ್ಟಿದ್ಧಾರೆ.
ಸೆಡಾನ್ ನ 23 ವರ್ಷದ ಚಾಲಕನ ನಿರ್ಲಕ್ಷ್ಯದಿಂದಾಗಿ ಈ ದುರಂತ ಸಂಭವಿಸಿದ್ದು, ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
![](https://pratidhvani.com/wp-content/uploads/2022/09/punjabi-singer.jpg)
ಮೆಲ್ಬೋರ್ನ್ ಬಳಿ ಒಟ್ಟು ಮೂರು ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಈ ಅಪಘಾತದಲ್ಲಿ ಎರಡು ಮಕ್ಕಳ ತಂದೆಯಾಗಿರುವ, 42ರ ವಯಸ್ಸಿನ ನಿರ್ವೈರ್ ಸಿಂಗ್ ಮೃತಪಟ್ಟಿದ್ದಾರೆ. ಮಹಿಳೆಯೊಬ್ಬರಿಗೆ ಗಾಯವಾಗಿದ್ದು, ಅವರನ್ನು ಸ್ಥಳಿಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಪಂಜಾಬ್ ಸಂಗೀತ ಲೋಕದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡ ನಂತರ ಸಿಂಗ್, 9 ವರ್ಷಗಳ ಹಿಂದೆ ಆಸ್ಟ್ರೇಲಿಯಾಗೆ ಬಂದಿದ್ದರು ಎನ್ನಲಾಗುತ್ತಿದೆ.
ಪಂಜಾಬ್ ನ ಕುರಾಲಿ ಪ್ರದೇಶದ ಸಿಂಗ್, ಒಂಬತ್ತು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ನೆಲೆಯೂರಿದ್ದರು. ಒಂದಷ್ಟು ದಿನ ಟ್ಯಾಕ್ಸಿ ಚಾಲಕರಾಗಿಯೂ ಕೆಲಸ ಮಾಡಿದ್ದು, ಹಲವಾರು ಆಲ್ಬಂಗೂ ಇವರು ಹಾಡಿದ್ದರು. ಮೈ ಟರ್ನ್ ಎಂಬ ಆಲ್ಬಂಗೆ ಹಾಡಿದ ‘ತೆರೆ ಬಿನಾ’ ಹಾಡು ಖ್ಯಾತವಾಗಿದೆ.