ಬುಧವಾರ ನಡೆದ ಭಾರತ ಹಾಗೂ ಹಾಂಗ್ ಕಾಂಗ್ ನಡುವೆ ಏಷ್ಯಾಕಪ್ ಟಿ-20 ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ(59 ರನ್, 44ಎಸೆತ, 1 ಬೌಂಡರಿ, 3ಸಿಕ್ಸರ್) ಹಾಗೂ ಸೂರ್ಯಕುಮಾರ್ ಯಾದವ್ (68 ರನ್, 26 ಎಸೆತ, 6 ಬೌಂಡರಿ, 6ಸಿಕ್ಸರ್) ಜೊತೆಯಾಟದ ಫಲವಾಗಿ ಭಾರತ 20 ಓವರ್ಗಳಲ್ಲಿ 192 ರನ್ಗಳನ್ನು ಪೇರಿಸಿತ್ತು.
ಇದನ್ನು ಬೆನ್ನಟ್ಟಿದ ಹಾಂಗ್ ಕಾಂಗ್ ತಂಡ 5 ವಿಕೆಟ್ಗಳ ನಷ್ಟಕ್ಕೆ 152ರನ್ಗಳನ್ನು ಗಳಿಸಲು ಶಕ್ತವಾಯಿತ್ತು.
ಇನ್ನು ಬುಧವಾರ ನಡೆದ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಮಾಡಿದ ಆ ಒಂದು ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸೂರ್ಯಕುಮಾರ್ ಬಿರುಸಿನ ಆಟಕ್ಕೆ ಮನಸೋತ ಕೊಹ್ಲಿ ಎದೆಯ ಮೇಲೆ ಕೈಯಿಟ್ಟುಕೊಂಡು ತಲೆಬಾಗಿ ಅಭಿನಂದಿಸಿದ್ದಾರೆ. ಇದೀಗ ಈ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲರು ಕೊಹ್ಲಿ ಸರಳತೆಯನ್ನು ಹಾಡಿ ಹೊಗಳಿದ್ದಾರೆ.
ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸೂರ್ಯಕುಮಾರ್ ಯಾದವ್ ವಿರಾಟ್ ನಡವಳಿಕೆಯೂ ಹೃದಯಸ್ಪರ್ಶಿಯಾಗಿತ್ತು ಇದೊಂದು ಅನಿರೀಕ್ಷಿತ ಹಾಗೂ ಸಂತಸದ ಸಂಗತಿಯಾಗಿದೆ. ಇನ್ನಿಂಗ್ಸ್ ಮುಗಿದ ನಂತರ ಪೆವಿಲಿಯನ್ ಕಡೆ ಹೋಗುವ ಸಮಯದಲ್ಲಿ ವಿರಾಟ್ ನನನ್ನು ಮುಂದೆ ಹೋಗಲು ಬಿಟ್ಟು ಅವರು ಹಿಂದೆ ಬಂದರು ಮೊದಲಿಗೆ ಇದು ನನ್ನಗೆ ಅರ್ಥವಾಗಲಿಲ್ಲ ನಂತರ ಅರಿವಾಯಿತು ಎಂದಿದ್ದಾರೆ.
ವಿರಾಟ್ ಜೊತೆ ಬ್ಯಾಟಿಂಗ್ ಮಾಡಿದ್ದು ನನ್ನಗೆ ಒಂದು ಅದ್ಭುತ ಅನುಭವ ಅತಿಕಡಿಮೆ ಟಿ-20 ಪಂದ್ಯಗಳನ್ನು ಆಡಿರುವ ನನ್ನಗೆ ಅವರ ಮಾರ್ಗದರ್ಶನದ ಅವಶ್ಯಕತೆ ತುಂಬಾ ಇದೆ. ವಿರಾಟ್ನಂತಹ ಶ್ರೇಷ್ಠ ಬ್ಯಾಟರ್ ಕ್ರೀಸ್ನ ಮತ್ತೊಂದು ತುದಿಯಲ್ಲಿದ್ದ ಸಮಯದಲ್ಲಿ ನನ್ನ ಆತ್ಮವಿಶ್ವಾಸ ದುಪ್ಪಟ್ಟಾಗಿತ್ತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.