ಕಾಂಗ್ರೆಸ್ ನಾಯಕ ಹಾಗು ಗಾಯಕ ಸಿಧು ಮೂಸೇವಾಲಾ ಹತ್ಯ ಎಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಗ್ಯಾಂಗ್ಗಳ ನಡುವಿದ್ದ ಹಳೇ ವೈಷಮ್ಯವೇ ಹತ್ಯೆಗೆ ಪ್ರಮುಖ ಕಾರಣ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಹಾಗು ಲಕ್ಕಿ ಪಟಿಯಾಲಾ ಗ್ಯಾಂಗ್ ನಡುವೆ ಹಳೇ ವೈಷಮ್ಯವಿತ್ತು ಲಾರೆನ್ಸ್ ಗುಂಪಿನ ವಿಕ್ಕಿ ಮಿಧುಕೇರಾ ಹತ್ಯೆಗೆ ಪ್ರತೀಕಾರವಾಗಿ ಸಿಧು ಮೂಸೇವಾಲಾ ಹತ್ಯ ನಡೆದಿದೆ ಎಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಪಂಜಾಬ್ ಚಿತ್ರರಂಗದ ನಟ-ನಟಿ ಹಾಗು ಗಾಯಕರಿಗೆ ಬೆದರಿಕೆ ಕರೆಗಳು ನಿರಂತರವಾಗಿ ಬರುತ್ತಿದ್ದವು ಎಂದು ಡಿಜಿಪಿ ಹೇಳಿದ್ದಾರೆ.
ಪಂಜಾಬ್ ಸರ್ಕಾರ ಸಿಧುಗೆ ಒದಗಿಸಿದ್ದ ಪೊಲೀಸ್ ಬದ್ರತೆಯನ್ನು ಹಿಂಪಡೆದ ಮರುದಿನವೇ ಸಿಧು ಹತ್ಯೆ ನಡೆದಿರುವುದು ರಾಷ್ಟ್ರಾ ರಾಜಕಾರಣದಲ್ಲಿ ತೀವ್ರ ಸಂಚಲನವನ್ನುಂಟು ಮಾಡಿದೆ.