ಪಂಜಾಬಿನ ನೂತನ ಮುಖ್ಯಮಂತ್ರಿಯಾಗಿ ಸುಖಜಿಂದರ್ ಸಿಂಗ್ ರಾಂಧವ ಆಯ್ಕೆ ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ನ ಶಾಸಕರು ಸುಖಜಿಂದರ್ ಅವರ ಹೆಸರನ್ನೇ ಹೈಕಮಾಂಡಿಗೆ ಸೂಚಿಸಿರುವುದಾಗಿ ಪಕ್ಷದ ಮೂಲ ತಿಳಿಸಿವೆ.
ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜಿನಾಮೆಯಿಂದ ತೆರವಾಗಿದ್ದ ಸಿಎಂ ಸ್ಥಾನಕ್ಕೆ ಪಂಕಜಾಬ್ ಕಾಂಗ್ರೆಸಿನ ಹಿರಿಯ ನಾಯಕರಾದ ಅಂಬಿಕಾ ಸೋನಿ, ಟ್ರಿಪ್ಟ್ ರಾಜಿಂದರ್ ಸಿಂಗ್ ಬಜ್ವಾ, ಬ್ರಹ್ಮ ಮೊಹಿಂದ್ರಾ, ವಿಜಯ್ ಇಂದರ್ ಸಿಂಗ್ಲಾ, ಪಂಜಾಬ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕುಲ್ಜಿತ್ ಸಿಂಗ್ ನಾಗ್ರಾ ಮತ್ತು ಇನ್ನಿತರರ ಹೆಸರುಗಳು ಕೇಳಿಬಂದಿದ್ದವು. ಸದ್ಯ, ಈಗ ಬಂದಿರುವ ವರದಿ ಪ್ರಕಾರ ಸುಖಜಿಂದರ್ ಸಿಂಗ್ ಪಂಜಾಬಿನ ನೂತನ ಸಿಎಂ ಆಗಲಿದ್ದಾರೆ.
ಅದಾಗ್ಯೂ, ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಮುಖ್ಯಮಂತ್ರಿ ರೇಸ್ ನಿಂದ ಹೊರಗುಳಿದಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣಬಾಗಿತ್ತು.