• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಎಸಿ ಇಲ್ಲದೆ ಬೆವೆತ ಸ್ಥಿತಿ: ಇಂಡಿಗೊ ವಿಮಾನ ಪ್ರಯಾಣದ ಕಹಿ ಅನುಭವ ಹಂಚಿಕೊಂಡ ಪಂಜಾಬ್‌ ಕಾಂಗ್ರೆಸ್‌ ನಾಯಕ

ಪ್ರತಿಧ್ವನಿ by ಪ್ರತಿಧ್ವನಿ
August 6, 2023
in ಇದೀಗ, ದೇಶ, ರಾಜಕೀಯ
0
ಇಂಡಿಗೊ ವಿಮಾನ
Share on WhatsAppShare on FacebookShare on Telegram

ಇಂಡಿಗೊ ವಿಮಾನ ಪ್ರಯಾಣದ ವೇಳೆ ಹವಾ ನಿಯಂತ್ರಣ (ಎಸಿ) ಇಲ್ಲದೆ ತಮಗೆ ಆದ ಕಹಿ ಅನುಭವವನ್ನು ಪಂಜಾಬ್‌ ಕಾಂಗ್ರೆಸ್‌ ಶಾಸಕ ಅಮರಿಂದರ್‌ ಸಿಂಗ್‌ ರಾಜಾ ವಾರಿಂಗ್‌ ಹಂಚಿಕೊಂಡಿದ್ದಾರೆ.

ADVERTISEMENT

ಈ ಕುರಿತು ಅಮರಿಂದರ್‌ ಅವರು ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದು ತಾವು ಸೇರಿ ಇತರ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ಇಂಡಿಗೊ ವಿಮಾನಯಾನ ಸಂಸ್ಥೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ ಕೋರಿದ್ದಾರೆ.

ಅಸಮರ್ಪಕ ನಿರ್ವಹಣೆಗಾಗಿ ಇಂಡಿಗೊ ವಿಮಾನ ಸಂಸ್ಥೆ ವಿರುದ್ಧ ಅಮರಿಂದರ್ ಕಿಡಿಕಾರಿದ್ದಾರೆ. ಇಂಡಿಯಾ ಸಂಸ್ಥೆಯು ತನ್ನಿಂದಾದ ಅನಾನುಕೂಲತೆಗೆ ಕ್ಷಮೆ ಕೋರಿದೆ.

“ಇಂದು ಇಂಡಿಗೊದ 6ಇ7261 ವಿಮಾನದಲ್ಲಿ ಚಂಡೀಗಢದಿಂದ ಜೈಪುರಕ್ಕೆ ಪ್ರಯಾಣ ಮಾಡಿದ್ದೇನೆ. ಇದೊಂದು ಭೀಕರ ಅನುಭವ ಎಂದು ಹೇಳಬಹುದು. ಮೊದಲಿಗೆ ಸುಡುವ ಬಿಸಿಲಿನಲ್ಲಿ 10ರಿಂದ 15 ನಿಮಿಷ ನಿಲ್ಲಿಸಿದರು. ವಿಮಾನದಲ್ಲಿ ಎಸಿ ವ್ಯವಸ್ಥೆ ಸರಿಯಾಗಿ ಕೆಲಸ ಮಾಡದೇ ಇರುವುದರಿಂದ ವಿಮಾನದೊಳಗೆ ಪ್ರಯಾಣಿಕರೆಲ್ಲ ಬೆವೆತು ಹೋದರು. ಇಷ್ಟಾದರೂ ಯಾರು ಪ್ರಯಾಣಕರ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ” ಎಂದು ಟ್ವೀಟ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

Had one of the most horrifying experiences while traveling from Chandigarh to Jaipur today in Aircraft 6E7261 by @IndiGo6E. We were made to wait for about 10-15 minutes in the queue in the scorching sun and when we entered the Plane, to our shock, the ACs weren't working and the… pic.twitter.com/ElNI5F9uyt

— Amarinder Singh Raja Warring (@RajaBrar_INC) August 5, 2023

“ಇಂಡಿಗೊ ವಿಮಾನ ಪ್ರಯಾಣದಲ್ಲಿ ಎಸಿ ಇಲ್ಲದೇ ಪ್ರಯಾಣಿಕರು ಕುಳಿತಲ್ಲಿಯೇ ಬೆವರುತ್ತಿದ್ದರು. ಏನೂ ನಡೆದಿಲ್ಲ ಎಂಬಂತೆ ಗಗನಸಖಿಯರು ಬೆವರನ್ನು ಒರೆಸಿಕೊಳ್ಳುವಂತೆ ಟಿಶ್ಯೂ ಪೇಪರ್ ಹಂಚುತ್ತಿದ್ದರು. ಮಕ್ಕಳು ಮತ್ತು ಮಹಿಳೆಯರು ಇದರಿಂದ ಸಾಕಷ್ಟು ತೊಂದರೆ ಅನುಭವಿಸಿದರು. ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಇರುವುದು ಖಂಡಿತ. ಅದು ಸಮಸ್ಯೆಯೆಂದು ಯಾರಿಗೂ ಅನ್ನಿಸುತ್ತಿಲ್ಲ. ಇಷ್ಟೆಲ್ಲ ಸಮಸ್ಯೆಯಾದರೂ ಸಂಸ್ಥೆಯ ಅಧಿಕಾರಿಗಳು ಪ್ರಯಾಣ ದರ ಕಡಿತಗೊಳಿಸುವುದಾಗಿ ಹೇಳುತ್ತಾರೆ. ದರ ಕಡಿತಗೊಳಿಸಲು ಪ್ರಯಾಣಿಕರು ತಮ್ಮ ಜೀವವನ್ನೇ ಪಣಕ್ಕಿಡಬೇಕಾಯಿತು” ಎಂದು ಅಮರಿಂದರ್ ಕಿಡಿಕಾರಿದ್ದಾರೆ.

ಅಮರಿಂದರ್ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇಂಡಿಗೊ ಸಂಸ್ಥೆಯು ಈ ಬಗ್ಗೆ ಕ್ಷಮೆಯಾಚಿಸಿದೆ. ತಾಪಮಾನದಲ್ಲಿ ಹೆಚ್ಚಳ ಇದ್ದಿದ್ದರಿಂದ ಹವಾಮಾನ ನಿಯಂತ್ರಣ ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆಯಿಂದ ಹೀಗೆ ಆಗಿದೆ ಎಂದು ಇಂಡಿಗೊ ಹೇಳಿದೆ.

“ನಮ್ಮ ವಿಮಾನದಲ್ಲಿ ನಿಮಗೆ ಇತ್ತೀಚೆಗೆ ಆದ ತೊಂದರೆಗೆ ನಾವು ಕ್ಷಮೆಯಾಚಿಸುತ್ತೇವೆ. ಪ್ರಯಾಣಿಕರ ಸೌಕರ್ಯದಲ್ಲಿ ತೃಪ್ತಿ ಇರುವಂತೆ ನಾವು ಎಚ್ಚರವಹಿಸುಸುತ್ತೇವೆ. ಚಂಡೀಗಢದಿಂದ ಜೈಪುರಕ್ಕೆ ಪ್ರಯಾಣಿಸುವಾಗ ನಿಮಗೆ ಆದ ಅನಾನುಕೂಲಕ್ಕೆ ನಾವು ವಿಷಾದಿಸುತ್ತೇವೆ” ಎಂದು ಇಂಡಿಗೊ ವಿಮಾನ ಸಂಸ್ಥೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ? ದೇಶದ 508 ರೈಲು ನಿಲ್ದಾಣಗಳ ನವೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್‌ ಮೂಲಕ ಶಂಕುಸ್ಥಾಪನೆ

“ವಿಮಾನವು ಜೈಪುರದಲ್ಲಿ ಇಳಿದ ನಂತರ ಅದರ ಹವಾಮಾನ ನಿಯಂತ್ರಣ ವ್ಯವಸ್ಥೆಯನ್ನು ಪರಿಶೀಲಿಸಲಾಗಿದೆ. ಸಂಪೂರ್ಣ ತಪಾಸಣೆ ನಂತರ ಅಲ್ಲಿಂದ ವಿಮಾನಗಳನ್ನು ಹಾರಿಸಲಾಗಿದೆ” ಎಂದು ಇಂಡಿಗೊ ಮಾಹಿತಿ ನೀಡಿದೆ.

2018ರಲ್ಲಿಯೂ ಇಂಡಿಗೊ ವಿಮಾಮ ಅಸಮರ್ಪಕ ನಿರ್ವಹಣೆ ಬಗ್ಗೆ ದೂರು ಕೇಳಿಬಂದಿತ್ತು. ಅಸಮರ್ಪಕ ಹವಾ ನಿಯಂತ್ರಣ ವ್ಯವಸ್ಥೆಯಿಂದ ದೆಹಲಿಯಿಂದ ಕೋಲ್ಕತ್ತಾಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಅಗ ಉಸಿರಾಟದ ತೊಂದರೆ ಅನುಭವಿಸಿದ್ದರು.

Tags: ACCongress leaderIndigoIndigo AircraftMLA Amarinder Singh Raja WarringPunjabಇಂಡಿಗೊಇಂಡಿಗೊ ವಿಮಾನಕಾಂಗ್ರೆಸ್‌ ನಾಯಕಪಂಜಾಬ್‌
Previous Post

ರಾಜಕೀಯ ಅಧಿಕಾರದಲ್ಲಿರುವರ ತೇಜೋವಧೆ ಮಾಡುವುದೇ ಜೆಡಿಎಸ್ ಕೆಲಸ

Next Post

ಯಾರ ಜಾಯಮಾನ ಏನು ಅಂತ ನಾಳೆ ಮಾತನಾಡೋಣ ; ಡಿಸಿಎಂ ಡಿ.ಕೆ.ಶಿವಕುಮಾರ್‌ ‌

Related Posts

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ
ದೇಶ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

by ಪ್ರತಿಧ್ವನಿ
April 10, 2026
0

ಪಟ್ನಾ, ಏ.10: ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಆರೋಪದಡಿ ಬಿಹಾರ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಈ ಘಟನೆ ದೇಶದಾದ್ಯಂತ ಆತಂಕ...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

April 9, 2026
Next Post
ಯಾರ ಜಾಯಮಾನ ಏನು ಅಂತ ನಾಳೆ ಮಾತನಾಡೋಣ ; ಡಿಸಿಎಂ ಡಿ.ಕೆ.ಶಿವಕುಮಾರ್‌ ‌

ಯಾರ ಜಾಯಮಾನ ಏನು ಅಂತ ನಾಳೆ ಮಾತನಾಡೋಣ ; ಡಿಸಿಎಂ ಡಿ.ಕೆ.ಶಿವಕುಮಾರ್‌ ‌

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada