ಪಂಜಾಬ್ ಚುನಾವಣೆ ವಾರದ ಮೊದಲೇ ಅಕ್ರಮ ಮರಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಅವರ ಮನೆ ಮೇಲೆ ಇಂದು ಬೆಳಗ್ಗೆ ಇಡಿ ದಾಳಿ ನಡೆದಿದೆ.
ಮಂಗಳವಾರ ರಾಜ್ಯಾದ್ಯಂತ ಅವರಗೆ ಸಂಬಂಧಪಟ್ಟ ಹತ್ತು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಇದೇ ವೇಳೆ ಭೂಪಿಂದರ್ ಸಿಂಗ್ ಅವರ ಹತ್ತಿರದವರ ಮೇಲೂ ದಾಳಿ ನಡೆದಿದೆ.
ಫೆಬ್ರವರಿ 20 ರಂದು ಮತದಾನ ನಡೆಯಲಿರುವ ಪಂಜಾಬ್‌ನಲ್ಲಿ ಪ್ರಚಾರದ ಮಧ್ಯದಲ್ಲಿ ಈ ದಾಳಿಗಳು ಬಂದಿವೆ. ಪಂಜಾಬ್ ಫಲಿತಾಂಶ ಮಾರ್ಚ್ 10 ಪ್ರಕಟಗೊಳ್ಳಲಿದೆ.