ತುಮಕೂರು: ನಗರದಲ್ಲಿ ಹಿಂದು ಮಹಾಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹಿಂದುಪರ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು (Police Arrested)ಬಂಧಿಸಿದ್ದಾರೆ. ತುಮಕೂರಿನ ಕ್ಯಾತಸಂದ್ರ ಬಳಿಯ ಜಾಸ್ ಟೋಲ್ ಬಳಿ ಪುನೀತ್ ಕೆರೆಹಳ್ಳಿಯನ್ನು (Puneeth Kerehalli) ಬಂಧಿಸಲಾಗಿದೆ.
ತುಮಕೂರಿನ ಗಣೇಶೊತ್ಸವ ಕಾರ್ಯಕ್ರಮಕ್ಕೆ ಭಾಗವಹಿಸು ಹಕ್ಕು ಕಸಿದುಕೊಂಡ ಕಾಂಗ್ರೆಸ್ಸ್ ಸರ್ಕಾರ ನನಗೆ ಯಾವುದೇ ರೀತಿಯ ನೋಟೀಸ್ ಕೂಡಾ ನೀಡದೇ ನನ್ನನ್ನೆ ಬಂಧಿಸಿ ನನ್ನ ಬದುಕುವ ಮೂಲಭೂತ ಹಕ್ಕಿಗೆ ದಕ್ಕೆ ತಂದಿದೆ ಇದು ಪ್ರಜಾಪ್ರಭುತ್ವವೇ?! pic.twitter.com/hrdOVYzGYb
— Puneeth Kerehalli (@Puneeth74353549) September 21, 2024
ತುಮಕೂರು ನಗರದಲ್ಲಿ ಶನಿವಾರ ಹಿಂದು ಮಹಾಗಣಪತಿ ವಿಸರ್ಜನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚರ್ಚ್ ವೃತ್ತದ ಬಳಿ ಪುನೀತ್ ಕೆರೆಹಳ್ಳಿ ಭಾಷಣ ಮಾಡಬೇಕಿತ್ತು. ಆದರೆ, ಅವರು ಪ್ರಚೋದನಕಾರಿ ಭಾಷಣ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಇನ್ನು ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ತುಮಕೂರು ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.