ಭಾರತದ ಸಾರ್ವಭೌಮತ್ವ ಹಾಗೂ ಸಮಗ್ರತೆ, ಭಾರತದ ರಕ್ಷಣೆ ಹಾಗೂ ರಾಜ್ಯಗಳ ಭದ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಭಾರತ ಸರ್ಕಾರ ಮತ್ತೆ 118 ಚೈನೀಸ್ ಮೊಬೈಲ್ ಅಪ್ಲಿಕೇಶನ್‌ಗಳಿಗೆ ನಿಷೇಧ ಹೇರಿದೆ.
ಭಾರತ ಚೀನಾ ಗಡಿ ಸಂಘರ್ಷ ಉಂಟಾದ ಹಿನ್ನಲೆಯಲ್ಲಿ, ಭಾರತ ಸರ್ಕಾರ ಜೂನ್ 29 ರಂದು ಮೊದಲ ಬಾರಿಗೆ 59 ಚೀನಾ ಅಪ್ಲಿಕೇಶನ್ ನಿಷೇಧಿಸಿತ್ತು. ಅಂದು ಟಿಕ್‌ಟಾಕ್, ಷೇರ್‌ಇಟ್, ಯುಸಿ ಬ್ರೌಸರ್ ಸೇರಿದಂತೆ ಅನೇಕ ಭಾರತೀಯರು ಬಳಕೆದಾರರಾಗಿದ್ದ ದಿಗ್ಗಜ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿತ್ತು. ತರುವಾಯ, ಜುಲೈನಲ್ಲಿ ಮತ್ತೆ 47 ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು. ಅದಾಗ್ಯೂ ಚೀನಾ- ಭಾರತ ಗಡಿ ಸಂಘರ್ಷ ಮತ್ತೆ ಉಲ್ಬಣಗೊಂಡಿತ್ತು.
ಈ ಬಾರಿ ಬಹುತೇಕ ಮೊಬೈಲ್ ಗೇಮ್ ಅಪ್ಲಿಕೇಶನ್‌ಗಳು ನಿಷೇಧಕ್ಕೊಳಗಾಗಿವೆ. ನಿಷೇಧಕ್ಕೊಳಗಾದ 118 ಅಪ್ಲಿಕೇಶನ್ ಪಟ್ಟಿ ಈ ಕೆಳಗಿನಂತಿದೆ.


