ರಾಜ್ಯದಲ್ಲಿಹಲವು ದಿನಗಳಿಂದ ಪಿಎಸ್‌ಐ ಪರೀಕ್ಷೆ ನೇಮಕಾತಿ ಅಕ್ರಮದ ಬಗ್ಗೆ ಬಿಸಿಬಿಸಿ ಚರ್ಚೆಯ ನಂತರ ತನಿಖೆ ನಡೆಸಲು ಬಿಜೆಪಿ ಸರ್ಕಾರ ನಿರ್ಧರಿಸಿತು. ಅಕ್ರಮದ ಹಿಂದಿನ ಕೈಗಳ ಹುಡುಕಾಟದಲ್ಲಿ ಬಿದ್ದಿರುವ ಸಿಐಡಿ ಬಲೆಗೆ ಹಲವು ಅದಕಾರಿಗಳು ಬಂಧನವಾಗಿದೆ. ಈ ಮದ್ಯೆ ಡಿವೈಎಸ್ ಪಿ ಶಾಂತಕುಮಾರ್ ಕೂಡ ಬಂಧನವಾಗಿದೆ ಎಂಬ ಸುದ್ದಿ ಕೇಳಿ ಬಂದ ಹಿನ್ನೆಲೆ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದು, ನೇಮಕಾತಿ ಹಗರಣದಲ್ಲಿ ಡಿವೈಎಸ್ ಪಿ ಶಾಂತಕುಮಾರ್ ಬಂಧನವಾಗಿಲ್ಲ ಎಂದು ತಿಳಿಸಿದ್ದರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ ಐ ನೇಮಕಾತಿ ಹಗರಣದಲ್ಲಿ ಡಿವೈಎಸ್ ಪಿ ಶಾಂತಕುಮಾರ್ ಸೇರಿದಂತೆ ಹಲವು ಆರೋಪಿಗಳ ವಿಚಾರಣೆ ನಡೆದಿದೆ. ಸೂಕ್ತ ಸಾಕ್ಷ್ಯಗಳು ಲಭಿಸಿದರೆ ಇತರರನ್ನು ಬಂಧಿಸುತ್ತೇವೆ. ಈ ಹಿಂದೆ ಬಂಧಿಸಿ ವಿಚಾರಣೆ ನಡೆಸಿದ ಸಿಬ್ಬಂದಿ ಹಲವು ಮಾಹಿತಿ ನೀಡಿದ್ದಾರೆ ಎಂದಿದ್ಧಾರೆ.

ಇನ್ನು ದೆಹಲಿ ಭೇಟಿ ಕುರಿತು ಸ್ಪಷ್ಟನೆ ನೀಡಿದ ಸಚಿವ ಅರಗಜ್ಞಾನೇಂದ್ರ, ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದೆ. ಪಕ್ಷದ ಯಾವುದೇ ನಾಯಕರನ್ನು ಭೇಟಿಯಾಗಿಲ್ಲ. ಬೊಮ್ಮಾಯಿ ನನಗೆ ಸಚಿವ ಸ್ಥಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಕ್ಕರೂ ಸಿಗದಿದ್ದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.