PSI ನೇಮಕಾತಿ ಅಕ್ರಮ ಕೇಸ್ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪು ತಾಲೂಕಿನ ಹೇರೂರು ಗ್ರಾಮದ ಗಣಪತಿ ಭಟ್ ಎಂಬುವವನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿ ಪೊಲೀಸ್ ಇಲಾಖೆಯ ಹಲವು ಅಧಿಕಾರಿಗಳ ಟ್ರಾನ್ಸ್ ಫರ್ ಹಾಗೂಇತರ ಡೀಲಿಂಗ್ಗಳಲ್ಲಿ ಸಕ್ರಿಯನಾಗಿದ್ದ ಎಂಬ ಬಗ್ಗೆ ತಿಳಿದುಬಂದಿದೆ.
ಗಣಪತಿ ವಿ.ಭಟ್, ಶಾಸಕರಿಗೆ ಬಹಳ ಆತ್ಮೀಯನಾಗಿದ್ದ . ಅಕ್ರಮ ಚಟುವಟಿಕೆಯಿಂದ ಆಸ್ತಿ ಸಂಪಾದಿಸಿದ್ದ. ನಿನ್ನೆ ಬೆಂಗಳೂರಿನಿಂದ ಸಿದ್ಧಾಪುರದ ಹೇರೂರಿಗೆ ಆಗಮಿಸಿದ್ದ ಸಿಐಡಿ ಅಧಿಕಾರಿಗಳು ಆರೋಪಿ ಗಣಪತಿಯನ್ನು ಬಂಧಿಸಿ ವಶಕ್ಕೆ ಪಡೆದು, ಸಿಐಡಿ ಕಚೇರಿಗೆ ಕರೆದೊಯ್ಯುತ್ತಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.

ಹೋಂ ಮಿನಿಸ್ಟರ್ ಆರಗ ಜ್ಞಾನೇಂದ್ರ ಅವರು ಗಣಪತಿ ಭಟ್ ಪಿಎ ಆಗಿದ್ದಾರೆ. ಗಣಪತಿ ಭಟ್ ಹಲವು ಪಿಎಸ್‌ಐಗಳ ಅಕ್ರಮ ನೇಮಕಾತಿಯಲ್ಲಿ ಭಾಗಿಯಾಗಿದ್ದಾರೆಂದು ಮಾಧ್ಯಮಗಳು ವರದಿ ಮಾಡಿದ್ದವು ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಆರಗ, ನನ್ನ ಕಚೇರಿಯಲ್ಲೂ ಗಣಪತಿ ಭಟ್ ಅಂತ ಇದ್ದಾರೆ. ಹೀಗಾಗಿಗೊಂದಲ ಆಗಿದೆ. ಸದ್ಯ ಶಿರಸಿಯಲ್ಲಿ ಗಣಪತಿ ಭಟ್ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.