ದಿನಾಂಕ 09.07.2021ರಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯುರೋ ಸೈನ್ಸಸ್ (ನಿಮ್ಹಾನ್ಸ್) ಅಲ್ಲಿ ಹಲವಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ 19 ಹಾಸ್ಪಿಟಲ್ ಅಸಿಸ್ಟೆಂಟ್ ಗಳನ್ನು ಕಾನೂನು ಬಾಹಿರವಾಗಿ ಕೆಲಸದಿಂದ ವಜಾಗೊಳಿಸಲಾಗಿದೆ. 19 ಜನ ಕಾರ್ಮಿಕರಲ್ಲಿ 15 ಜನ ಮಹಿಳೆಯರಾಗಿದ್ದು, ಬಹುತೇಕ ಮಂದಿ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಇದೇ ಹಾಸ್ಪಿಟಲ್ ಅಸಿಸ್ಟೆಂಟ್ ಗಳ ಬೆವರು ಮತ್ತು ಶ್ರಮದಿಂದ ನಿಮ್ಹಾನ್ಸ್ ಆಸ್ಪತ್ರೆಯು ರಾಷ್ಟ್ರ ಮಟ್ಟದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಕರ್ನಾಟಕ ಸರ್ಕಾರವು ಕೋವಿಡ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿದ್ದ ರಾತ್ರಿ ಕರ್ಫ್ಯೂ ನಂತರದಲ್ಲಿ ಯಾರೂ ಸಹ ಪ್ರಯಾಣಿಸುವಂತೆ ಇಲ್ಲ ಎಂದು ಆದೇಶಿಸಿದ್ದರು. ಹೀಗಿರುವಾಗ ನಿಮ್ಹಾನ್ಸ್ ಅವರು ಕಾರ್ಮಿಕರಿಗೆ ತಿಳಿಸದೆ ಕೆಲಸದ ಪಾಳಿ ಸಮಯದಲ್ಲಿ ಬದಲಾವಣೆಯನ್ನು ತರುತ್ತಾ, ನಿಮ್ಹಾನ್ಸ್ ತನ್ನ ಕಾರ್ಮಿಕರ ಕೆಲಸದ ಅವಧಿಯನ್ನು ಮಧ್ಯಾಹ್ನ 1.30- 7.30 ರಿಂದ ಮಧ್ಯಾಹ್ನ 2- 9 ಗಂಟೆಗೆ ಬದಲಾಯಿಸಿತ್ತು. ನೌಕರರು ಕೆಲಸದ ಅವಧಿಯನ್ನು ರಾತ್ರಿ 9ಕ್ಕೆ ಬದಲಾಗಿ 8ಕ್ಕೆ ಕೊನೆಗೊಳಿಸುವಂತೆ ನೌಕರರು ಮನವಿ ಮಾಡಿದ್ದರು. ಆದರೆ ನಿಮ್ಹಾನ್ಸ್ ಕಾರ್ಮಿಕರಿಗೆ ರಾತ್ರಿ 9.30 ಗಂಟೆಯ ವರೆಗೂ ಕೆಲಸ ಮಾಡಬೇಕೆಂದು ಹೇಳಿದರು. ಸಹಜವಾಗಿ, ಕಾರ್ಮಿಕರು ಮನೆ ತಲುಪುವುದಕ್ಕೆ ಕಷ್ಟವಾಗುವುದು ಎಂದು ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿ, ನಿಮ್ಹಾನ್ಸ್ ಅವರಿಗೆ ಸಾರಿಗೆ ವ್ಯವಸ್ಥೆಯನ್ನು ಮಾಡಿಕೊಡಲು ಕೇಳಿಕೊಂಡರು. ನಿಮ್ಹಾನ್ಸ್ ಮಂಡಳಿ ನೌಕರರ ಅಹವಾಲಿಗೆ ಸ್ಪಂದಿಸುವುದಕ್ಕೆ ಬದಲಾಗಿ ಅಷ್ಟೂ ಮಂದಿ ನೌಕರರನ್ನು ಜುಲೈ 9, 2021ಕ್ಕೆ ಕೆಲಸದಿಂದ ತೆಗೆದು ಹಾಕಿದೆ ಎಂದು ಆರೋಪಿಸಲಾಗಿದೆ.
ಈ ಕಾರ್ಮಿಕರು ಹಲವಾರು ವರ್ಷಗಳಿಂದ ನಿಷ್ಠೆಯಿಂದ ಕೆಲಸ ನಿರ್ವಹಿಸಿಕೊಂಡು ಬಂದಿದ್ದು, ಕೊವಿಡ್ -19 ತಡೆಗಟ್ಟಲು ಅತ್ಯುನ್ನತ ಕೆಲಸವನ್ನು ಮುಂಚೂಣಿಯಲ್ಲಿ ನಿಂತು ಮಾಡಿದ್ದಾರೆ. ವಿರಾಮ ರಹಿತವಾಗಿ ಕೆಲಸ ಮಾಡುತ್ತಾ, ನಿಮ್ಹಾನ್ಸ್ ಸಂಸ್ಥೆಯ ಪ್ರಸಿದ್ಧತೆಯನ್ನು ಹೆಚ್ಚಿಸಿದರು. ತಮ್ಮ ಕಷ್ಟಗಳನ್ನು ಹೇಳಿಕೊಂಡ ಕಾರಣ, ಅವರನ್ನು ಏಕಪಕ್ಷೀಯವಾಗಿ ಕೆಲಸದಿಂದ ವಜಾಗೊಳಿಸಿದ್ದಾರೆ.

ಕರ್ನಾಟಕ ಸರ್ಕಾರವು ದಿನಾಂಕ 20.11.2019ರಂದು ಅಧಿಸೂಚನೆಯನ್ನು ಹೊರಡಿಸುತ್ತಾ ಮಹಿಳಾ ಕಾರ್ಮಿಕರು ಸಂಜೆ 7 ಗಂಟೆಯ ನಂತರದ ಪಾಳಿಯಲ್ಲೂ ಕೆಲಸ ಮಾಡಬಹುದೆಂದು ಆದೇಶಿಸಿದರು. ಆದರೆ ರಾತ್ರಿ ಪಾಳಿಯಲ್ಲಿ ಮಹಿಳಾ ಕಾರ್ಮಿಕರು ಕೆಲಸ ಮಾಡಬೇಕೆಂದರೆ ಮಾಲೀಕರು ಸಾರಿಗೆ ವ್ಯವಸ್ಥೆಯನ್ನು ರೂಪಿಸಬೇಕು ಮತ್ತು ಸಾರಿಗೆಯಲ್ಲಿ ಸಿಸಿಟಿವಿ ಕ್ಯಾಮರಾ ಇರಬೇಕು, ಹಾಗೂ ಇತರೆ ರಕ್ಷಣೆಗಳನ್ನು ಒದಗಿಸಿದರೆ ಮಾತ್ರ ಮಹಿಳಾ ಕಾರ್ಮಿಕರನ್ನು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿಸಿಕೊಳ್ಳಬಹುದು ಎಂದು ಆದೇಶದಲ್ಲಿ ಹೇಳಲಾಗಿದೆ. ಆದರೆ, ನಿಮ್ಹಾನ್ಸ್ ಕಾರ್ಮಿಕರು ಸಾರಿಗೆ ವ್ಯವಸ್ಥೆ ಕೆಳಿದ್ದಲ್ಲಿ ಅವರನ್ನು ವಿನಾಕಾರಣ ಕೆಲಸದಿಂದ ವಜಾಗೊಳಿಸಲಾಗಿದೆ.
ನಿಮ್ಹಾನ್ಸ್ ಪ್ರಗತಿಪರ ವರ್ಕರ್ಸ್ ಯೂನಿಯನ್ (NPWU) ಎಐಸಿಸಿಟಿಯು ಸಂಯೋಜಿತ ಸಂಘಟನೆಯಾಗಿದ್ದು, ಈ 19 ಜನ ಕೆಲಸದಿಂದ ವಜಾಗೊಂಡ ಕಾರ್ಮಿಕರು ಈ ಸಂಘದ ಸದಸ್ಯರಾಗಿರುತ್ತಾರೆ. ಇವರುಗಳು ದಿನಾಂಕ 09.07.2021ರಿಂದ ನಿಮ್ಹಾನ್ಸ್ ಆವರಣದಲ್ಲಿ ಕೆಲಸಕ್ಕೆ ವಾಪಸ್ ತೆಗೆದುಕೊಳ್ಳಬೇಕೆಂದು ಹೋರಾಟದಲ್ಲಿ ಕುಳಿತಿದ್ದಾರೆ. ದಶಕಗಳಿಂದ ಕೆಲಸ ನಿರ್ವಹಿಸಿದ್ದ ಈ ಕಾರ್ಮಿಕರನ್ನು ಒಮ್ಮೆಯೂ ನಿಮ್ಹಾನ್ಸ್ ಅಧಿಕಾರಿಗಳು ಮಾತನಾಡಿಸಲು ಸಹ ಬಂದಿರುವುದಿಲ್ಲ.
ಕೇಂದ್ರ ಸರ್ಕಾರದ ಸಂಸ್ಥೆಯಾದ ನಿಮ್ಹಾನ್ಸ್ ತಮ್ಮ ಕಾರ್ಮಿಕರನ್ನು ಇಷ್ಟು ಕೀಳು ಮಟ್ಟದಲ್ಲಿ ವರ್ತಿಸುತ್ತಿರುವುದು ಅಮಾನವೀಯ ಮತ್ತು ಖಂಡನೀಯವಾದದ್ದು. ಈ ಎಲ್ಲಾ 19 ಜನ ಕಾರ್ಮಿಕರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳುವ ತನಕ ನಿಮ್ಹಾನ್ಸ್ ಪ್ರಗತಿಪರ ವರ್ಕರ್ಸ್ ಯೂನಿಯನ್ ತನ್ನ ಹೋರಾಟವನ್ನು ಮುಂದುವರೆಸುತ್ತದೆ ಎಂದಿದೆ.
ಕೆಲಸ ಕಳೆದುಕೊಂಡ ಮಹಿಳೆಯೊಬ್ಬರು ಮಾತನಾಡಿ, ಸುಮಾರು ಮೂರು ತಿಂಗಳಿನಿಂದ ಕೆಲಸವಿಲ್ಲದೇ ನಮ್ಮ ಮನೆಯ ಆರ್ಥಿಕ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಮೂರು ತಿಂಗಳಿನಿಂದ ಕೆಲಸ ಇಲ್ಲ ದಡಿಮೆ ಇಲ್ಲವೇ ಮನೆಯನ್ನು ನಡೆಸುವುದೆ ಕಷ್ಟಕರವಾಗಿದೆ. ಕೆಲ ಮನೆಯಲ್ಲಿ ಗಂಡಸರು ಸರಿಯಾಗಿ ಕೆಲಸ ಮಾಡಿದರೆ ಇನ್ನು ಕೆಲ ಮನೆಗಳಲ್ಲಿ ನಮ್ಮದೇ ದುಡಿಮೆಯಲ್ಲಿ ಮನೆ ನಿಂತಿರುತ್ತದೆ ಅಂತಹ ಮನೆಗಳಲ್ಲಿನ ಆರ್ಥಿಕ ಪರಿಸ್ಥಿತಿ ತುಂಬ ಕೆಟ್ಟಿದೆ ಎಂದು ಹೇಳಿದ್ದಾರೆ.
ಈ ಕುರಿತು ಸಮಗ್ರ ಮಾಹಿತಿಯನ್ನು ವಿನಯ್ ಶ್ರೀನಿವಾಸ್ ಅವರು ನಿಮ್ಹಾನ್ಸ್ ನಿಂದ ಪೇಸ್ ಬುಕ್ ಲೈವ್ ಮಾಡಿದ್ದು ಅದರ ಲಿಂಕ್ ಇಲ್ಲಿದೆ.