
ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಸೌಂದರ್ಯ ಜಗದೀಶ್ ಬ್ಯುಸಿನೆಸ್ ಪಾರ್ಟ್ನರ್ ಮೇಲೆ ಎಫ್ಐಆರ್ ದಾಖಲಾಗಿದೆ. ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಎಂಬುವರ ಮೇಲೆ FIR ದಾಖಲಾಗಿದೆ. ಆತ್ಮಹತ್ಯೆ ಪ್ರಕರಣ ಸಂಬಂಧ ಜಗದೀಶ್ ವ್ಯವಹಾರಿಕ ಪಾಲುದಾರರ ಮೇಲೆ ಎಫ್ಐಆರ್ ದಾಖಲಾಗಿದೆ.
ಎಫ್ಐಆರ್ಗೆ ಕಾರಣ ಡೆತ್ ನೋಟ್ನಲ್ಲಿ ಬಯಲಾಗಿದೆ. ಸೌಂದರ್ಯ ಜದೀಶ್ ಮನೆಯಲ್ಲಿ ಕೆಲವೇ ಸಾಲುಗಳು ಬರೆದಿದ್ದ ಡೆತ್ ನೋಟ್ ಪತ್ತೆಯಾಗಿದೆ.. ಇದರಲ್ಲಿ ಸೌಂದರ್ಯ ಕನ್ಸ್ಟ್ರಕ್ಷನ್ ಸಂಬಂಧ ಬ್ಯುಸಿನೆಸ್ ಲಾಸ್ ಬಗ್ಗೆ ಮಾಹಿತಿ ಸಿಕ್ಕಿತ್ತು.. ಪಾಲುದಾರರು ಕಾರಣ ಎಂದು ಉಲ್ಲೇಖ ಮಾಡಿದ್ದಾರೆ.. ಸುಮಾರು 60 ಕೋಟಿ ನಷ್ಟವಾಗಿರುವ ಬಗ್ಗೆ ಡೆತ್ನೋಟ್ನಲ್ಲಿ ಉಲ್ಲೇಖ ಮಾಡಿದ್ದರು..

ಡೆತ್ನೋಟ್ ಆಧರಿಸಿ ಪತ್ನಿ ಶಶಿರೇಖಾರಿಂದ ಮಹಾಲಕ್ಷ್ಮಿ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ಸದ್ಯ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ ಹೇಳಿಕೆ ಆಧರಿಸಿ ಕೇಸ್ ದಾಖಲು ಮಾಡಲಾಗಿದೆ.
ಮೇ 29 ಕ್ಕೆ ನಮ್ಮ ಯಜಮಾನರ ಪೂಜೆ ಇದೆ. ಜೂನ್ನಲ್ಲಿ ನಮ್ಮ ಯಜಮಾನರ ಬರ್ತ್ ಡೇ ಇತ್ತು. ಪೂಜೆ ಇರೋ ಕಾರಣ ಶ್ರೀರಂಗಪಟ್ಟಣದಲ್ಲಿ ಅವರ ಹಳೇ ಬಟ್ಟೆ ಬಿಡಬೇಕು ಅಂತ ಹೇಳಿದ್ರು. ಅದಕ್ಕೆ ಅವರ ವಾರ್ಡ್ರೋಬ್ನಲ್ಲಿ ಅವರ ಚೆಕ್ ಮಾಡಿದಾಗ ಡೆತ್ ನೋಟ್ ಸಿಕ್ಕಿತ್ತು. ಡೆತ್ ನೋಟ್ ನೋಡಿ ನನಗೆ ತುಂಭಾ ಶಾಕ್ ಆಯ್ತು. ಡೆತ್ ನೋಟ್ನಲ್ಲಿ ಅವರ ಬ್ಯುಸಿನೆಸ್ ಪಾರ್ಟ್ನರ್ ಸುರೇಶ್, ಹೊಂಬಣ್ಣ ಕಿರುಕುಳದ ಬಗ್ಗೆ ಬರೆದಿದ್ದಾರೆ ಎಂದಿದ್ದಾರೆ.

ನಮ್ಮ ಯಜಮಾನ್ರು ಅವರನ್ನು ತುಂಬಾ ನಂಬಿದ್ರು, ಆದರೆ ಅವರು ಮೋಸ ಮಾಡಿದ್ದಾರೆ. ಖಾಲಿ ಚೆಕ್ ಮೇಲೆ ಸಹಿ ಹಾಕಿಸಿಕೊಂಡು ಫೋರ್ಜರಿ ಮಾಡಿದ್ದಾರೆ. ಅವರ ಕಿರುಕುಳದಿಂದಲೇ ನಮ್ಮ ಯಜಮಾನ್ರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ತೆಗೆದುಕೊಂಡು ಹೋಗಿ ಪೊಲೀಸರಿಗೆ ನೀಡಿದ್ದೇನೆ. ಪೊಲೀಸ್ರು ತನಿಖೆ ಮಾಡಿ ನನಗೆ ನ್ಯಾಯ ಕೊಡಿಸ್ತೀನಿ ಅಂತ ಹೇಳಿದ್ದಾರೆ. ನಮ್ಮ ಯಜಮಾನರ ಸಾವಿಗೆ ನ್ಯಾಯ ಕೊಡಿಸಿ ಅಂತಾ ಕಣ್ಣೀರಿಟ್ಟಿದ್ದಾರೆ ಶಶಿರೇಖಾ. ಸುರೇಶ್ ಮತ್ತು ಹೊಂಬಣ್ಣ ಅವರಿಂದ ನನಗೆ ಮತ್ತು ನನ್ನ ಮಗನಿಗೂ ಜೀವಭಯ ಇದೆ ಎಂದಿದ್ದಾರೆ.

ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಮಾತನಾಡಿ, ನಮ್ಮಪ್ಪನ ಪಾರ್ಟನರ್ ಸುರೇಶ್ ಮತ್ತು ಹೊಂಬಣ್ಣ ಅವರಿಂದಲೇ ಮೋಸ ಆಗಿದೆ. ರೀಸೆಂಟ್ ಆಗಿ ಅಪ್ಪನ ಪ್ಯಾಂಟ್ನಲ್ಲಿ ಡೆತ್ ನೋಟ್ ಸಿಕ್ಕಿದೆ. ಈ ವಿಚಾರವಾಗಿ ಅಪ್ಪ ಅಗಾಗ ಹೇಳ್ತಿದ್ರು, ಮೋಸ ಮಾಡಿಬಿಟ್ರು ಅಂತ. ಅದರೆ ನಮಗೆ ಈ ಮಟ್ಟಕ್ಕೆ ಹೋಗುತ್ತೆ ಅಂತ ನಾವು ತಿಳ್ಕೊಂಡಿರಲಿಲ್ಲ. ನಮ್ಮ ಅಮ್ಮ ಮತ್ತು ನಮಗೆ ಅವರಿಂದ ಭಯ ಇದೆ. ಈಗಾಗಿ ಸುರೇಶ್ ಮತ್ತು ಹೊಂಬಣ್ಣ ಅವರಿಂದ ಥ್ರೆಟ್ ಇದೆ ಅಂತ ದೂರು ನೀಡಿದ್ದೀವಿ ಎಂದಿದ್ದಾರೆ.