ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ 2022 ಅನ್ನು ಗುರಿಯಾಗಿಸಿಕೊಂಡಿರುವ ಪ್ರಿಯಾಂಕ ಗಾಂಧಿ, ಭರವಸೆಗಳ ಪಟ್ಟಿಯನ್ನೇ ಜನರ ಮುಂದಿರಿಸಿ ಬಿರುಸಿನಿಂದ ಪ್ರಚಾರ ಮಾಡುತ್ತಿದ್ದಾರೆ. ಈಗ ಒಂದು ಹೆಜ್ಜೆ ಮುಂದೆ ಸಾಗಿರುವ ಪ್ರಿಯಾಂಕಾ, ಯೋಗಿ ಆದಿತ್ಯನಾಥ್ ಅವರ ಸ್ವ ಕ್ಷೇತ್ರ ಗೋರಖ್‌ಪುರ್ಗೆ ಲಗ್ಗೆಇಟ್ಟಿದ್ದಾರೆ.
ಹೌದು, ಯೋಗಿ ಆದಿತ್ಯನಾಥ್ ಅವರ ಸ್ವ ಕ್ಷೇತ್ರ ಗೋರಖ್‌ಪುರ್ಗೆ ಲಗ್ಗೆ ಇಟ್ಟಿರುವ ಉತ್ತರ ಪ್ರದೇಶದ ಪ್ರಿಯಾಂಕಾ ನೇತೃತ್ವದ ಕಾಂಗ್ರೆಸ್ ಪಕ್ಷ ಬಿರುಸಿವ ಪ್ರಚಾರ ಶುರು ಮಾಡಿದೇ. ಈವರೆಗೆ ಉತ್ತರ ಪ್ರದೇಸದ ಮಹಿಳೆಯರಿಗೆ ಮತ್ತು ಯುವಜನರಿಗೆ ಸಾಲು ಸಾಲು ಭರವಸೆಗಳು ನೀಡಿರುವ ಪ್ರಿಯಾಂಕಾ, ನಮ್ಮ ಪಕ್ಷ ಆಡಳಿತಕ್ಕೆ ಬಂದರೆ ಕೃಷಿ ಸಾಲ ಮನ್ನ ಮಾಡಲಾಗುವುದು ಮತ್ತು ಗೋಧಿ, ಭತ್ತವನ್ನು ಕ್ವಿಂಟಾಲ್ಗೆ 2500 ಕ್ಕೆ ಖರೀದಿಸಲಾಗುವುದು ಎಂದು ಗೋರಾಖ್ ಪುರ್ ನಲ್ಲಿ ಭರವಸೆ ನೀಡಿದ್ದಾರೆ.
ರೈತರು ಮತ್ತು ಮೀನುಗಾರ ಸಮುದಾಯದ ಸದಸ್ಯರನ್ನು ತಲುಪಿದ ಪ್ರಿಯಾಂಕ.
ಪ್ರದೇಶದ ಗೋರಖ್‌ಪುರದಲ್ಲಿ ಕಾಂಗ್ರೆಸ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀನುಗಾರಿಕೆಗೆ ಕೃಷಿ ಸ್ಥಾನಮಾನ ನೀಡಲಾಗುವುದು ಮತ್ತು ಕೃಷಿಯಂತಹ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು. ಮರಳುಗಾರಿಕೆ ಮತ್ತು ಮೀನುಗಾರಿಕೆಯಲ್ಲಿ ನಿಷಾದ್ ಸಮುದಾಯದ ಜನರ ಹಕ್ಕುಗಳನ್ನು ಮರುಸ್ಥಾಪಿಸಲಾಗುತ್ತದೆ. ಗುರು ಮಚೇಂದ್ರನಾಥರ ಹೆಸರಿನ ವಿಶ್ವವಿದ್ಯಾನಿಲಯವನ್ನೂ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

“ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು. ಗೋಧಿ ಮತ್ತು ಭತ್ತವನ್ನು ಪ್ರತಿ ಕ್ವಿಂಟಲ್‌ಗೆ ₹ 2,500, ಕಬ್ಬನ್ನು ₹ 400 ಕ್ಕೆ ಖರೀದಿಸಲಾಗುತ್ತದೆ. ಬಿಡಾಡಿ ದನಗಳ ಸಮಸ್ಯೆಯನ್ನು ಛತ್ತೀಸ್‌ಗಢ ಮಾದರಿಯಲ್ಲಿ ಪರಿಹರಿಸಲಾಗುವುದು. ಸಂಪೂರ್ಣ ಪರಿಹಾರವನ್ನು ಅಭಿವೃದ್ಧಿಪಡಿಸಲಾಗುವುದು, ”ಎಂದು ಅವರು ಹೇಳಿದ್ದಾರೆ.
20 ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು, ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಲಾಗುವುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇದೇ ವೇಳೆ ಹೇಳಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ₹ 10,000 ಗೌರವಧನ, ಮಹಿಳೆಯರಿಗೆ ವರ್ಷದಲ್ಲಿ ಮೂರು ಉಚಿತ ಸಿಲಿಂಡರ್‌ಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇದಲ್ಲದೆ, ಅಧಿಕಾರಕ್ಕೆ ಬಂದರೆ, ನಮ್ಮ ಸರ್ಕಾರವು ಯಾವುದೇ ಕಾಯಿಲೆಯ ಚಿಕಿತ್ಸೆಯ ವೆಚ್ಚವನ್ನು ₹ 10 ಲಕ್ಷದವರೆಗೆ ಭರಿಸಲಿದೆ ಎಂದು ಅವರು ಹೇಳಿದ್ದಾರೆ.
ಕೋವಿಡ್-19ನಿಂದ ಜೀವನೋಪಾಯವನ್ನು ಕಳೆದುಕೊಂಡ ಕುಟುಂಬಗಳಿಗೆ ₹ 25,000 ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಗೋರಖ್‌ಪುರದಿಂದ ಐದು ಬಾರಿ ಸಂಸದರಾಗಿರುವ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಜಿಲ್ಲೆಯಲ್ಲಿ ಆರೋಗ್ಯ ಸ್ಥಿತಿ ಹೀನಾಯವಾಗಿದೆ ಎಂದಿದ್ದಾರೆ.
ಮುಂದುವರೆದು, “ಚುನಾವಣೆಗಳು ಸಮೀಪಿಸುತ್ತಿದ್ದಂತೆ, ನಾವು ಎಐಐಎಂಎಸ್ (AIIMS) ಅನ್ನು ಕಾರ್ಯಗತಗೊಳಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಐದು ವರ್ಷಗಳಿಂದ ಏನು ಮಾಡುತ್ತಿದ್ದರು.? ಆಗಲೇ ಏನು ಮಾಡದವರು ಈಗ ಅದನ್ನು ಹೇಗೆ ಮಾಡುತ್ತಾರೆ ? ಎಂದು ಪ್ರಿಯಾಂಕ ಪ್ರಶ್ನಿಸಿದ್ಧಾರೆ.

70 ವರ್ಷಗಳಲ್ಲಿ ನಾವು ಏನು ಮಾಡಿದ್ದೇವೆ ಎಂದು ಅವೆಲ್ಲವನ್ನೂ ಮಾರುತ್ತಿದ್ದಾರೆ.
“ಕಾಂಗ್ರೆಸ್ ರೈಲ್ವೆ, ವಿಮಾನ ನಿಲ್ದಾಣ, ರಸ್ತೆಗಳನ್ನು ನಿರ್ಮಿಸಿತು. ಅವೆಲ್ಲವನ್ನೂ ಮಾರುತ್ತಿದ್ದಾರೆ. 70 ವರ್ಷಗಳಲ್ಲಿ ನಾವು ಏನು ಮಾಡಿದ್ದೇವೆ ಎಂದು ಅವರು ಕೇಳುತ್ತಾರೆ. ಅವರು ಕೇವಲ 7 ವರ್ಷಗಳಲ್ಲಿ 70 ವರ್ಷಗಳ ಪ್ರಯತ್ನವನ್ನು ವ್ಯರ್ಥ ಮಾಡಿದ್ದಾರೆ, ”ಎಂದಿದ್ದಾರೆ.
ನಿರುದ್ಯೋಗವನ್ನು ರಾಜ್ಯದ ಪ್ರಮುಖ ಸಮಸ್ಯೆಯಾಗಿದೆ. ಯುಪಿಯಲ್ಲಿ 5 ಕೋಟಿ ನಿರುದ್ಯೋಗಿ ಯುವಕರಿದ್ದಾರೆ. ನಿರುದ್ಯೋಗದಿಂದ ಪ್ರತಿದಿನ ಮೂವರು ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ,” ಎಂದಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಯುಪಿ ಸರ್ಕಾರವು ಎಲ್ಲಾ ಜಾತಿಗಳು ಮತ್ತು ವರ್ಗಗಳ ಜನರನ್ನು ಶೋಷಣೆ
ದಲಿತರು, ನೇಕಾರರು, ಒಬಿಸಿಗಳು, ಬಡವರು, ಅಲ್ಪಸಂಖ್ಯಾತರು ಮತ್ತು ಬ್ರಾಹ್ಮಣರು ಶೋಷಣೆಗೆ ಒಳಗಾಗಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಗುರು ಗೋರಖನಾಥರ ಬೋಧನೆಗೆ ವಿರುದ್ಧವಾಗಿ ಸರ್ಕಾರವನ್ನು ನಡೆಸುತ್ತಿದ್ದಾರೆ. ಈ ಸರ್ಕಾರ ಪ್ರತಿನಿತ್ಯ ಜನರ ಮೇಲೆ ಹಲ್ಲೆ ನಡೆಸುತ್ತಿದೆ” ಎಂದು ಗಾಂಧಿ ಹೇಳಿದರು.
“ಎಸ್ಪಿ ಮತ್ತು ಬಿಎಸ್ಪಿಯವರು ಕಾಂಗ್ರೆಸ್ ಬಿಜೆಪಿಯೊಂದಿಗೆ ಶಾಮೀಲಾಗಿದೆ
“ಎಸ್ಪಿ ಮತ್ತು ಬಿಎಸ್ಪಿಯವರು ಕಾಂಗ್ರೆಸ್ ಬಿಜೆಪಿಯೊಂದಿಗೆ ಶಾಮೀಲಾಗಿ ಕೆಲಸ ಮಾಡುತ್ತಿದೆ ಎಂದು ಹೇಳುತ್ತಾರೆ. ನಾನು ಆರೋಪಿಸುವವರಿಗೆ ಕೇಳಲು ಬಯಸುತ್ತೇನೆ – ನಿಮ್ಮ ಕಷ್ಟದ ಸಮಯದಲ್ಲಿ ಅವರು ನಿಮ್ಮೊಂದಿಗೆ ಏಕೆ ನಿಲ್ಲಬಾರದು. ಕಾಂಗ್ರೆಸ್ ಮಾತ್ರ ಹೋರಾಡುತ್ತಿದೆ ಎಂದು ಯಾಕೆ ಹೇಳುತ್ತೀರಿ. ನಾನು ಬೇಕಾದರೆ ಸಾಯುತ್ತೇನೆ ಆದರೆ ಬಿಜೆಪಿಯೊಂದಿಗೆ ಯಾವುದೇ ರೀತಿಯ ಸಂಬಂಧವನ್ನು ಹೊಂದುವುದಿಲ್ಲ” ಎಂದು ಅವರು ಪ್ರತಿಪಾದಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ 403 ಸ್ಥಾನಗಳ ಪೈಕಿ ಕೇವಲ ಏಳು ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ನ ಈ ಬಾರಿಯ ಚುನಾವಣೆ 2024ರ ಚುನಾವಣೆಯ ನಿರ್ಣಾಯಕವಾಗಲಿದೆ ಎನ್ನಲಾಗಿದೆ. ಉತ್ತರ ಪ್ರದೇಶದಲ್ಲಿ ಪಕ್ಷದ ಲೆಕ್ಕಾಚಾರವನ್ನು ಸುಧಾರಿಸುವ ಕಠಿಣ ಕೆಲಸವನ್ನು ಎದುರಿಸುತ್ತಿದೆ.
ಈ ತಿಂಗಳ ಆರಂಭದಲ್ಲಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ, ಪ್ರಧಾನಿ ನರೇಂದ್ರ ಮೋದಿ ಅವರ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ರ್ಯಾಲಿ ನಡೆಸಿದ್ದರು.