• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, July 31, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಲ್ಲಿದ್ದಲು ಕೇಸ್‌ನಲ್ಲಿ ಮನಮೋಹನ ಸಿಂಗ್ ನಿರ್ದೋಷಿ: ‘ಕುಸಿದ ಬಿಜೆಪಿ ಸುಳ್ಳಿನ ಮಹಲು’..!

ಪ್ರತಿಧ್ವನಿ by ಪ್ರತಿಧ್ವನಿ
July 30, 2026
in Top Story, ಕರ್ನಾಟಕ, ದೇಶ, ರಾಜಕೀಯ
0
ಕಲ್ಲಿದ್ದಲು ಕೇಸ್‌ನಲ್ಲಿ ಮನಮೋಹನ ಸಿಂಗ್ ನಿರ್ದೋಷಿ: ‘ಕುಸಿದ ಬಿಜೆಪಿ ಸುಳ್ಳಿನ ಮಹಲು’..!
Share on WhatsAppShare on FacebookShare on Telegram

ಬೆಂಗಳೂರು: ಒಡಿಶಾದ ಕಲ್ಲಿದ್ದಲು ಹಂಚಿಕೆ ಪ್ರಕರಣದಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮುಕ್ತಾಯಗೊಳಿಸಿದ್ದು, ನಿಧನರಾದ 2 ವರ್ಷದ ಬಳಿಕ ಈ ಪ್ರಕರಣದಲ್ಲಿ ಮನಮೋಹನ ಸಿಂಗ್ ನಿರ್ದೋಷಿ ಎನ್ನುವ ತೀರ್ಪು ಹೊರಬಿದ್ದಿದೆ. ಅಲ್ಲದೇ ಅವರ ವಿರುದ್ಧ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್‌ ಕೂಡ ರದ್ದುಗೊಳಿಸಲಾಗಿದೆ.

ADVERTISEMENT
🌧️☔ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ಸಂದರ್ಶನ  CS Patil | Weather Report | Heavy Rain | PRATIDHVANI

ಸುಪ್ರೀಂ ಕೋರ್ಟ್‌ನ ಈ ತೀರ್ಪಿನ ಬಗ್ಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಪ್ರತಿಕ್ರಿಯಿಸಿದ್ದು, ಸುಳ್ಳು ವಿಜೃಂಭಿಸಬಹುದು, ಆದರೆ ಸತ್ಯವನ್ನು ಅಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ʼಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ನಾಯಕರ ತೇಜೋವಧೆಗೆ ಬಿಜೆಪಿ ಬಳಸಿದ ವಾಮಮಾರ್ಗಗಳು ಒಂದೆರಡಲ್ಲ, ಸತ್ಯವನ್ನು ಸೋಲಿಸಲು ಸಾಧ್ಯವಿಲ್ಲದಿದ್ದರೂ, ಸುಳ್ಳು ಸೃಷ್ಟಿಸುವ ಅನಾಹುತಗಳು ಭೀಕರ ಪರಿಣಾಮಗಳನ್ನು ಉಂಟುಮಾಡುತ್ತವೆʼ.

Lop RahulGandhi on Modi Government ಕೈ ನಾಯಕನ "ಈಡಿಯಟ್ಸ್" ಮಾತಿಗೆ ಸದನದಲ್ಲಿ ಕೋಲಾಹಲ, ಗದ್ದಲ..! |Pratidhvani

ʼ2ಜಿ ಸ್ಪೆಕ್ಟ್ರಂ ವಿಷಯದಲ್ಲಿ ಬಿಜೆಪಿ ಮಾಡಿದ ಆರೋಪಗಳು ನಿರಾಧಾರ ಎಂಬುದು ನ್ಯಾಯಾಲಯದಲ್ಲಿ ನಿರೂಪಿತವಾಗಿದ್ದು ಈಗ ಇತಿಹಾಸ, ಅಂತೆಯೇ ಕಲ್ಲಿದ್ದಲು ಹಂಚಿಕೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮೇಲೆ ಬಿಜೆಪಿ ಹೊರಿಸಿದ್ದ ಆರೋಪದಲ್ಲೂ ಈಗ ಸತ್ಯದ ಅನಾವರಣವಾಗಿದೆʼ.

ʼದೇಶ ಕಂಡಂತಹ ಸುಶಿಕ್ಷಿತ, ಸಭ್ಯ ಹಾಗೂ ಸೌಮ್ಯ ಸ್ವಭಾವದ ಮನಮೋಹನ್ ಸಿಂಗ್ ಅವರ “ಪ್ರಾಮಾಣಿಕತೆ”ಗೆ ಬಿಜೆಪಿ ಇಟ್ಟಿದ್ದ ಕಪ್ಪು ಚುಕ್ಕೆಗೆ ಈಗ ಮುಕ್ತಿ ಸಿಕ್ಕಿದೆ. ಆದರೆ ಅವರಂತಹ ಮೇಧಾವಿ ಆಡಳಿತಗಾರರನ್ನು ಕಳೆದುಕೊಂಡ ದೇಶ ಈಗ ದುಷ್ಟರ ಪರಿಣಾಮಗಳನ್ನು ಎದುರಿಸುತ್ತಿದೆ. ಬಿಜೆಪಿಗರು ಕಟ್ಟುವ ಸುಳ್ಳುಗಳ ಮಹಲು ಹೆಚ್ಚು ದಿನ ನಿಲ್ಲುವುದಿಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಲೇ ಇದೆʼ ಎಂದು ಪ್ರಿಯಾಂಕ್‌ ಖರ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ರಾಜ್ಯಸಭೆಯಲ್ಲಿ ಗದ್ದಲ ಕೋಲಾಹಲದ ನಡುವೆ ಧೂಳೆಬ್ಬಿಸಿದ ಶಿವಸೇನೆ ಸಂಸದೆ ಮಾತು..! | Pratidhvani

ಪ್ರಕರಣದ ಹಿನ್ನೆಲೆ ಏನು..?

2005ರಲ್ಲಿ ಒಡಿಶಾದ ಕಲ್ಲಿದ್ದಲು ಬ್ಲಾಕ್‌ ಅನ್ನು ಹಿಂಡಾಲ್ಗೊ ಇಂಡಸ್ಟ್ರೀಸ್‌ಗೆ ಹಂಚಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮನಮೋಹನ್ ಸಿಂಗ್ ವಿರುದ್ಧ ಆರೋಪ ಮಾಡಲಾಗಿತ್ತು. ವಿಶೇಷ ಸಿಬಿಐ ನ್ಯಾಯಾಲಯವು ಮನಮೋಹನ್ ಸಿಂಗ್, ಉದ್ಯಮಿ ಕುಮಾರ ಮಂಗಲಂ ಬಿರ್ಲಾ, ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಪಿ.ಸಿ. ಪರಾಖ್‌, ಹಿಂಡಾಲ್ಗೊ ಇಂಡಸ್ಟ್ರೀಸ್, ಅದರ ಅಧಿಕಾರಿಗಳಾದ ಶುಭೇಂದು ಅಮಿತಾಭ್ ಮತ್ತು ಡಿ. ಭಟ್ಟಾಚಾರ್ಯ ಸೇರಿದಂತೆ ಆರು ಆರೋಪಿಗಳಿಗೆ ಸಮನ್ಸ್‌ ಜಾರಿಗೊಳಿಸಿತ್ತು. ಅಲ್ಲದೇ ಮನಮೋಹನ್ ಸಿಂಗ್ ಅವರ ವಿರುದ್ಧ ಸಾರ್ವಜನಿಕ ಸೇವಕರಿಂದ ನಂಬಿಕೆ ದ್ರೋಹ ಕಾಯ್ದೆ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿತ್ತು. ಸದ್ಯ ಈ ಪ್ರಕರಣ ಅಂತ್ಯಗೊಂಡಿದ್ದು, ಮನಮೋಹನ್ ಸಿಂಗ್ ಅವರನ್ನು ನಿರ್ದೋಷಿ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

Tags: BJPcongressIndiaKarnatakaManmohan SinghPoliticsPriyank Khargesupreme court
Previous Post

CWG 2026: ನೀರಜ್ vs ನದೀಮ್..ಯಾರ ಕೊರಳಿಗೆ ಚಿನ್ನ?

Next Post

Bengaluru: ರಸ್ತೆಯಲ್ಲಿ ಕೆಜಿಗಟ್ಟಲೆ ಮೊಳೆ ಚೆಲ್ಲುತ್ತಿದ್ದ ಪಂಚರ್ ಅಂಗಡಿ ಮಾಲೀಕರ ಬಂಧನ

Related Posts

ಡಿ.ಕೆ. ಶಿವಕುಮಾರ್ ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆಯಲಿ- ವಿಜಯೇಂದ್ರ ಆಗ್ರಹ
Top Story

ದೇಶದ ಅತ್ಯಂತ ಶ್ರೀಮಂತ ಸಿಎಂ ಡಿ.ಕೆ. ಶಿವಕುಮಾರ್; ಎಡಿಆರ್ ವರದಿಯಲ್ಲಿ ಬಹಿರಂಗವಾದ ಆಸ್ತಿ ವಿವರ!

by ಪ್ರತಿಧ್ವನಿ
July 31, 2026
0

ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಆಸ್ತಿ ವಿವರಗಳನ್ನು ಬಹಿರಂಗಪಡಿಸಿರುವ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿಯಲ್ಲಿ, ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೇಶದ ಅತ್ಯಂತ ಶ್ರೀಮಂತ...

Read moreDetails
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಶಿಕ್ಷಕರೇ ಕಾರಣ? ಸಿಬಿಐ ತನಿಖೆಯಲ್ಲಿ ಸ್ಫೋಟಕ ಮಾಹಿತಿ!

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಶಿಕ್ಷಕರೇ ಕಾರಣ? ಸಿಬಿಐ ತನಿಖೆಯಲ್ಲಿ ಸ್ಫೋಟಕ ಮಾಹಿತಿ!

July 31, 2026
ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಏಕೆ? ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ನೀಡಿದ ಮಹತ್ವದ ಮಾಹಿತಿ ಇಲ್ಲಿದೆ

ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಏಕೆ? ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ನೀಡಿದ ಮಹತ್ವದ ಮಾಹಿತಿ ಇಲ್ಲಿದೆ

July 31, 2026
ನೀಟ್ ಪ್ರತಿಭಟನೆಗೆ ಲಕ್ಷಾಂತರ ರೂ. ವೆಚ್ಚ: ಹಣ ಎಲ್ಲಿಂದ ಬಂತು?

ನೀಟ್ ಪ್ರತಿಭಟನೆಗೆ ಲಕ್ಷಾಂತರ ರೂ. ವೆಚ್ಚ: ಹಣ ಎಲ್ಲಿಂದ ಬಂತು?

July 31, 2026
ಮದ್ಯ ಪ್ರಿಯರಿಗೆ ಗುಡ್ ನ್ಯೂಸ್!  ಸ್ಕಾಚ್ ವಿಸ್ಕಿ, ಜಿನ್ ಬೆಲೆ ಇಳಿಕೆ

ಮದ್ಯ ಪ್ರಿಯರಿಗೆ ಗುಡ್ ನ್ಯೂಸ್!  ಸ್ಕಾಚ್ ವಿಸ್ಕಿ, ಜಿನ್ ಬೆಲೆ ಇಳಿಕೆ

July 30, 2026
Next Post
Bengaluru: ರಸ್ತೆಯಲ್ಲಿ ಕೆಜಿಗಟ್ಟಲೆ ಮೊಳೆ ಚೆಲ್ಲುತ್ತಿದ್ದ ಪಂಚರ್ ಅಂಗಡಿ ಮಾಲೀಕರ ಬಂಧನ

Bengaluru: ರಸ್ತೆಯಲ್ಲಿ ಕೆಜಿಗಟ್ಟಲೆ ಮೊಳೆ ಚೆಲ್ಲುತ್ತಿದ್ದ ಪಂಚರ್ ಅಂಗಡಿ ಮಾಲೀಕರ ಬಂಧನ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada