
ಕಾಂಗ್ರೆಸ್ ಸರಕಾರದ ಬಗ್ಗೆ ಮಾತನಾಡಲು ಅಸಹ್ಯ ಆಗುತ್ತೆ ಎನ್ನುವ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಕಲಬುರ್ಗಿಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದ್ದಾರೆ. ಅವರಿಗೆ ಅಸಹ್ಯವಾಗುತ್ತಿದ್ದರೆ ಏಕೆ ಮಾತನಾಡಬೇಕು ? ಎಂದು ಪ್ರಶ್ನಿಸಿರುವ ಪ್ರಿಯಾಂಕ್ ಖರ್ಗೆ, ಅಷ್ಟಕ್ಕೂ ಅವರಿಗೆ ಮಾತನಾಡು ಅಂದವರಾದ್ರೂ ಯಾರು ? ನಾವೇನಾದ್ರೂ ಮಾತಾಡಿ ಅಂತ ಹೇಳಿದ್ದೇವಾ ? ಎಂದು ಚಾಟಿ ಬೀಸಿದ್ದಾರೆ.

ಅವರ ಮನೆಯ ಮಕ್ಕಳು ಮಾಡಿರುವ ಕೆಲಸ ಅವರಿಗೆ ಅಸಹ್ಯ ಅನ್ನಿಸೋದಿಲ್ಲವೇ..? ಎಂದಿರುವ ಸಚಿವರು ಮೊದಲು ಅವರು ತಮ್ಮ ಮನೆ ಮಕ್ಕಳು ಮಾಡಿರುವ ಅಸಹ್ಯದ ಬಗ್ಗೆ ಮಾತಾಡಲಿ ಎಂದಿದ್ದಾರೆ. ಇನ್ನು ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆ ಬಗ್ಗೆ ವ್ಯಂಗ್ಯವಾಡಿದ್ದು, ಬಿಜೆಪಿಯ ಯಾವ ಬಣದವರು ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನುವುದು ಮೊದಲು ಹೇಳಿ ? ಅಧಿಕೃತ ಬಿಜೆಪಿಯೋ ಅಥವಾ ಅನಧಿಕೃತ ಬಿಜೆಪಿಯಿಂದ ಪ್ರತಿಭಟನೆ ನಡೆಯುತ್ತಿದೆಯೋ ? ಎಂದು ಬಣ ರಾಜಕೀಯದ ಬಗ್ಗೆ ಮೂದಲಿಸಿದ್ದಾರೆ.
