ಹಲವು ದಿನಗಳಿಂದ ಸಿದ್ದರಾಮಯ್ಯ ಆರ್‌ಎಸ್‌ಎಸ್ ಚಡ್ಡಿ ವಿಷಯವಾಗಿ ಕಿಡಿಕಾರುತ್ತಲೇ ಇದ್ದಾರೆ. ಸಿದ್ದರಾಮಯ್ಯ ಅವರ ಈ ಹೇಳಿಕೆಯನ್ನು ಖಂಡಿಸಿ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಚಡ್ಡಿಯನ್ನು (ಒಳ ಉಡುಪು) ತಲೆ ಮೇಲೆ ಹೊತ್ತು ಪ್ರತಿಭಟಿಸಿದ್ದರು. ಛಲವಾದಿ ನಾರಾಯಣಸ್ವಾಮಿ ಅವರ ಈ ನಡೆಯನ್ನು ತೀರ್ವವಾಗಿ ಖಂಡಿಸಿರುವ ಅನೇಕ ಕಾಂಗ್ರೆಸ್ ನಾಯಕರು, ದಲಿತರನ್ನು ಬಿಜೆಪಿ, ಆರ್‌ಎಸ್‌ಎಸ್ ಗುಲಾಮರಂತೆ ನಡೆಸಿಕೊಳ್ಳುತ್ತಿದೆ ಎಂದು ಕಿಡಿಕಾರಿದ್ದರು. ಈ ಕುರಿತು ಈಗ ಶಾಸಕ ಪ್ರಿಯಾಂಕ ಖರ್ಗೆ ಕೂಡ ಪ್ರತಿಕ್ರಿಸಿದ್ದು, ಬಿಜೆಪಿಯ ಆಧುನಿಕ ಮನುಧರ್ಮದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮೇಲ್ವರ್ಗದವರಿಗೆ, ಚಡ್ಡಿ ಹೊರುವ ಕೆಲಸ – ದಲಿತರಿಗೆ ಎಂದು ಕಿಡಕಾರಿದ್ದಾರೆ.

.
ಈ ಕುರಿತು ಟ್ವೀಟ್ ಮಾಡಿರುವ ಅವರು, ದಲಿತರೊಬ್ಬರು RSSನವರು ಬಳಸಿ ಬಿಸಾಡಿದ ಚಡ್ಡಿ ಹೊತ್ತಿದ್ದು ಮಲ ಹೊರುವ ಪದ್ಧತಿಗಿಂತ ಬಿನ್ನವೇನಲ್ಲ. ಛಲವಾದಿ ನಾರಾಯಣಸ್ವಾಮಿ ಅಣ್ಣ, ಅಂಬೇಡ್ಕರ್‌ರವರು ಶೋಷಿತರ ತಲೆಯ ಮೇಲೆ ಕಿರೀಟವನ್ನ ಕಾಣಬಯಸಿದ್ದರೇ ಹೊರತು ಚಡ್ಡಿಗಳನ್ನಲ್ಲ ಎಂದು ಹೇಳಿದ್ದಾರೆ.







