ಆಲಂ ಪಾಷಾ ಸಲ್ಲಿಸಿದ ಅರ್ಜಿ ವಿಚಾರಣೆ ಮುಂದಾದಾ ನ್ಯಾಯಾಲಯ. ಆಲಂ ಪಾಷಾ ನನ್ನು ವಿವರಣೆ ಕೇಳ್ತಿರುವ ಜಡ್ಜ್. ಈ ಪ್ರಕರಣದಲ್ಲಿ ನಿಮ್ಮ ಪಾತ್ರ ಏನು..? ಆರೋಪಿ ಪರವಾಗಿ ಇದೀರಾ..? ದೂರುದಾರ ಪರವಾಗಿ ಇದೀರಾ? ಸ್ಪಷ್ಟನೆ ನೀಡುವಂತೆ ಕೇಳಿದ ನ್ಯಾಯಾದೀಶರು.
ನೀವು ಸ್ನೇಹಮಯಿ ಕೃಷ್ಣ ಸಲ್ಲಸಿರುವ ಅರ್ಜಿ ತೆಗೆದುಕೊಳ್ಳಬಾರದು ಅನ್ನೋದಕ್ಕೆ ಕಾರಣ ಕೊಡಿ.
ನಿಮ್ಮ ಅರ್ಜಿಯನ್ನ ಯಾರೆಂದು ಪರಿಗಣಿಸೋಣ. ವಿಕ್ಟಿಮ್ ಅಂತ ಪರಿಗಣಿಸಬೇಕೋ, ದೂರುದಾರ ಅಂತ ಪರಿಗಣಿಸಬೇಕಾ ಜಡ್ಜ್ ಪ್ರಶ್ನೆ. ಸಾರ್ವಜನಿಕ ಹಿತಾಸಕ್ತಿ ಉದ್ದೇಶದಿಂದ ಅರ್ಜಿ ಸಲ್ಲಿಸಿರೋದಾಗಿ ಉತ್ತರ ನೀಡಿದ ಅಲಂ ಪಾಷಾ. ಅರ್ಜಿ ಸಂಬಂಧ ಸ್ನೇಹಮಯಿ ಕೃಷ್ಣ ಪರ ವಕೀಲರ ಆಕ್ಷೇಪ. ಅಲಂಪಾಷಾ ಅವ್ರು ಸಲ್ಲಿಸಿರೋ ಅರ್ಜಿ ಲೋಕಾಸ್ಟ್ಯಾಂಡ್ ಇಲ್ಲ. ಅದಕ್ಕೆ ಅವಕಾಶವೂ ಇಲ್ಲ. ಹೈ ಕೋರ್ಟ್ ಆರ್ಡರ್ ನಲ್ಲೆ ಅದನ್ನ ಸ್ಪಷ್ಟವಾಗಿ ಉಲೇಖಿಸಿದೆ. ಸ್ನೇಹಮಯಿ ಕೃಷ್ಣ ಪರ ವಕೀಲೆ ಲಕ್ಷ್ಮಿ ಅಯ್ಯಂಗಾರ್ ವಾದ.
ಪಿಸಿಆರ್ ಅಂದರೇನು ಅಲಂ ಪಾಷಾ ಗೆ ಜಡ್ಜ್ ಪ್ರಶ್ನೆ??
ಪಬ್ಲಿಕ್ ಕಂಟ್ರೋಲ್ ರೂಂ ಎಂದ ಆಲಂ ಪಾಷಾ. ಪಬ್ಲಿಕ್ ಕಂಟ್ರೋಲ್ ರೂಂ ಎನ್ನುವ ಉತ್ತರಕ್ಕೆ ಜಡ್ಜ್ ಗರಂ ಹಾಗಿ. ನಿಮಗೆ ಸೆನ್ಸ್ ಇದಿಯಾ ಇಲ್ಲಿ ಪೊಲಿಟಿಕಲ್ ಕಾಮಿಡಿಗಳನ್ನು ಕೇಳೋದಕ್ಕೆ ಆಗಲ್ಲ. ನೀವು ಈ ಪ್ರಕರಣದಲ್ಲಿ ಯಾವ ಉದ್ದೇಶಕ್ಕಾಗಿ ಎಂಟ್ರಿ ಆಗಿದ್ದೀರ. ನಿಮಗೆ ಏನಾದ್ರೂ ಮೋಸ ಆಗಿದ್ಯ, ವಿಕ್ಟಿಮ್ ಎಂದು ಪರಿಗಣಿಸಬೇಕಾ, ದೂರುದಾರರೆಂದು ಪರಿಗಣಿಸಬೇಕಾ ಎಂದು ಪ್ರಶ್ನೆ.
ಅರ್ಜೀದಾರ ಪರ ವಕೀಲೆ ಲಕ್ಷ್ಮೀ ಐಯಂಗಾರ್ ವಾದ ಆರಂಭ.
ಪ್ರಾಸಿಕ್ಯೂಷನ್ ಅನುಮತಿ ಪಡೆಯುವ ಸಂಬಂಧ ವಾದ ಮಂಡನೆ, ಲಾಲು ಪ್ರಸಾದ್ ಪ್ರಕರಣವನ್ನ ಉಲ್ಲೇಖಿಸಿ ವಾದ ಮಂಡನೆ..
ಆದೇಶ ಪ್ರಕಟಣೆಗೂ ಮುನ್ನ ಅಲಂ ಪಾಷಾ ಅರ್ಜಿ ಇತ್ಯಾರ್ಥ ಪಡಿಸಿದ ಜಡ್ಜ್. ಮತ್ತೆ ವಾದ ಮಂಡಿಸಲು ಅವಕಾಶ ಕೋರಿದ ದೂರುದಾರ ಸ್ನೇಹಮಯಿಕೃಷ್ಣ ಪರ ವಕೀಲೆ. ವಾದಕ್ಕೆ ಅವಕಾಶ ನೀಡಿದ ನ್ಯಾಯಾಧೀಶರು. ಪಿಸಿ ಆಕ್ಟ್ ಅಡಿಯಲ್ಲಿ ನೀಡಿರುವ ಕೆಲ ತೀರ್ಪು ಗಳನ್ನ ಉಲ್ಲೇಖಿಸಿ ವಾದ ಮಂಡಿಸುತ್ತಿರುವ ವಕೀಲೆ ಲಕ್ಷ್ಮಿ ಅಯ್ಯಂಗಾರ್
ಅರ್ಜಿದಾರ ಅಲಂ ಪಾಷಾ ದೂರು ದಾಖಲಿಸಲು ಅನುಮತಿ ಕೇಳುತ್ತಿಲ್ಲ. ಬದಲಿಗೆ ಕಾನೂನಿನ ಪ್ರಕ್ರಿಯೆ ತಡೆಹಿಡಿಯಲು ಕೋರುತ್ತಿದ್ದಾರೆ. ಹೀಗಾಗಿ ಅಲಂಪಾಷಾ ಅರ್ಜಿ ವಜಾಗೊಳಿಸಲು ಅರ್ಹವೆಂದು ಕೋರ್ಟ್ ಆದೇಶ. ನ್ಯಾ.ಸಂತೋಷ್ ಗಜಾನನ ಭಟ್ ಅವರಿಂದ ಆದೇಶ.