ಇನ್ನೇನು ಒಂದೆರಡು ದಿನ ನಾಡಿನೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಇರಲಿದೆ. ಇದನ್ನೇ ಹೈಜಾಕ್ ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರು ಹಗಲು ದರೋಡೆಗೆ ಇಳಿದೆ. ಏಕಾಏಕಿ ಬಸ್ ದರಗಳನ್ನು ಏರಿಸಿದ್ದು, ಸದ್ಯ ಖಾಸಗಿ ಬಸ್ ದರ ಮೂರುಪಟ್ಟಾಗಿದೆ.
ಮೂರು ಪಟ್ಟು ಹೆಚ್ಚಳ.. ವಿಮಾನ ದರಕ್ಕೆ ಸರಿಸಮನಾಗಿ ಖಾಸಗಿ ಬಸ್ ಟಿಕೆಟ್ ದರ.!!
ಸೋಮವಾರ ನಾಡಿನಾದ್ಯಂತ ದೀಪಾವಳಿ ಹಬ್ಬ ಅದ್ದೂರಿಯಾಗಿ ನಡೆಯಲಿದೆ. ಈ ನಡುವೆ ಇಂದಿನಿಂದ ಮುಂದಿನ ಮೂರು ದಿನಗಳ ಕಾಲ ಸರ್ಕಾರಿ ರಜೆ ಇರಲಿದೆ. ಇದನ್ನೇ ಹೈಜಾಕ್ ಮಾಡಿಕೊಂಡು ಹಗಲು ದರೋಡೆಗೆ ಖಾಸಗಿ ಬಸ್ ಮಾಲೀಕರು ಮುಂದಾಗಿದ್ದಾರೆ. ಶನಿವಾರದಿಂದ ಗುರುವಾರದರೆಗೆ ನಿರಂತರ ರಜೆ ಇರಲಿದೆ. ಹೀಗಾಗಿ ಊರಿಗೆ ಹೋಗುವವರ ಸಂಖ್ಯೆ ಹೆಚ್ಚಾಗಲಿದೆ. ಇದನ್ನೆ ಬಳಸಿಕೊಂಡು ಹಬ್ಬದ ಸೀಸನ್ ನಲ್ಲಿ ಮತ್ತೆ ವಸೂಲಿಗಿಳಿದಿದೆ ಖಾಸಗಿ ಬಸ್ ಗಳು.
ಅಕ್ಟೋಬರ್ 21ರಂದು ಬೆಂಗಳೂರು ಉಡುಪಿ 3,400 ರೂ ಖಾಸಗಿ ಬಸ್ ದರ ಫಿಕ್ಸ್ ಮಾಡಲಾಗಿದೆ. ಅದೇ ದಿನ ಬೆಂಗಳೂರು ಮಂಗಳೂರು 3,694 ರೂ. ದರ ಇತ್ತು. ಇದು ವಿಮಾನ ದರವನ್ನೇ ಸರಿದೂಗಿಸುವಂತಿದ್ದು, ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಬಗ್ಗೆ ಸಾರಿಗೆ ಇಲಾಖೆ ಸೂಚನೆ ಕೊಟ್ಟಿದ್ದರೂ ಕೂಡ ಇಲಾಖೆಯ ಸೂಚನೆಗೆ ಖಾಸಗಿ ಬಸ್ ಮಾಲಿಕರು ಕ್ಯಾರೇ ಎನ್ನುತ್ತಿಲ್ಲ. ಕಳೆದ ಆಯುಧ ಪೂಜೆಯಲ್ಲಿ ಖಾಸಗಿ ಬಸ್ ಮಾಲಿಕರ ಜೊತೆ ಸಭೆ ನಡೆಸಿದ್ದ ಸಾರಿಗೆ ಇಲಾಖೆ ದರ ಹೆಚ್ಚಳ ಮಾಡದಂತೆ ತಾಕೀತು ಮಾಡಿತ್ತು. ಈ ಬಗ್ಗೆ ಮಾತನಾಡಿರುವ ಸಾರಿಗೆ ಇಲಾಖೆ ಜಂಟಿ ಆಯುಕ್ತ ಹಾಲಸ್ವಾಮಿ, ಹೆಚ್ಚಿನ ದರ ವಸೂಲಿ ಮಾಡಿದ್ರೆ ಮೊದಲು ದೂರು ಕೊಡಿ. ದೂರಿನ ಅನ್ವಯ ನೋಟೀಸ್ ನೀಡ್ತೇವೆ. ಬೆಂಗಳೂರಿನ 11 ಕಡೆ ಪರಿಶೀಲನೆ ತಂಡ ರಚನೆ ಮಾಡಿದ್ದೇವೆ. ನಿಯಮ ಪದೇ ಪದೇ ಉಲ್ಲಂಘಿಸಿದ್ರೆ ಪರ್ಮಿಟ್ ಕ್ಯಾನ್ಸಲ್ ಮಾಡ್ತೀವಿ ಎಂದಿದ್ದಾರೆ.
ಬೆಂಗಳೂರಿನಿಂದ – ಹುಬ್ಬಳ್ಳಿ ಸಾಮಾನ್ಯ ದರ 650-700 ರೂಪಾಯಿ.
ಹೆಚ್ಚಳ – 1700-2500 ರೂಪಾಯಿ
ಬೆಂಗಳೂರು – ಬೆಳಗಾವಿ- ಸಾಮಾನ್ಯ ದರ – 750-850 ರೂ.
ಹೆಚ್ಚಳ – 2100-3500 ರೂಪಾಯಿ.
ಬೆಂಗಳೂರು – ಮಂಗಳೂರು
ಸಾಮಾನ್ಯ ದರ – 700
ಹೆಚ್ಚಳ – 2500 – 2700 ರೂಪಾಯಿ
ಬೆಂಗಳೂರು – ಬಿಜಾಪುರ
ಸಾಮಾನ್ಯ ದರ – 750- 850 ರೂ.
ಹೆಚ್ಚಳ – 1900-2500 ರೂಪಾಯಿ
ಬೆಂಗಳೂರು – ಶಿವಮೊಗ್ಗ
ಸಾಮಾನ್ಯ ದರ – 550 ರೂಪಾಯಿ
ಹೆಚ್ಚಳ – 1200 ರೂಪಾಯಿ
ಬೆಂಗಳೂರು – ಬಳ್ಳಾರಿ
ಸಾಮಾನ್ಯ ದರ – 600 ರೂಪಾಯಿ
ಹೆಚ್ಚಳ – 900-1200 ರೂಪಾಯಿ
ಸದ್ಯ ದೀಪಾವಳಿ ಹಿನ್ನಲೆ ಮತ್ತೆ ದರ ಏರಿಕೆ ಮಾಡಿರುವ ಖಾಸಗಿ ಬಸ್ ಗಳು ಶನಿವಾರ, ಭಾನುವಾರ ವೀಕೆಂಡ್ ಹಾಗೂ 24 ಸೋಮವಾರ ನರಕ ಚತುರ್ದಶಿ, 25 ಮಂಗಳವಾರ ದೀಪಾವಳಿ, ಗ್ರಹಣ ಹಾಗೂ 26 ಬುಧವಾರ ಬಲಿಪಾಡ್ಯಮಿ ಇರಲಿದೆ. ಇದನ್ನೇ ಮುಂದಿಟ್ಟುಕೊಂಡು ಜನರ ಜೇಬಿಗೆ ನೇರವಾಗಿ ಕೈಹಾಕೋಕೆ ಮುಂದಾಗಿದೆ.