ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಸುತ್ತಿದ್ದ ವಿಡಿಯೋ ವೈರಲ್ ಕೇಸ್ ಬಿಸಿ ನಟ ಧನ್ವೀರ್‌ಗೂ ತಟ್ಟಿದೆ. ಸಿಸಿಬಿ ಅಧಿಕಾರಿಗಳು ವಿಡಿಯೋ ವೈರಲ್ ಸಂಬಂಧ ನಟ ಧನ್ವಿರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಜೈಲಿನ ಒಳಗೆ ಮೊಬೈಲ್ ಬಳಸುತ್ತಿರುವ ವಿಡಿಯೋಗಳನ್ನ ಧನ್ವೀರ್ ವೈರಲ್ ಮಾಡಿರಬಹುದು ಎಂಬ ಅನುಮಾನದ ಮೇಲೆ ಕಚೇರಿಗೆ ಕರೆಸಿದ್ದ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಧನ್ವೀರ್ ಮೊಬೈಲ್ ನಲ್ಲಿ ಜೈಲಿನ ಯಾವುದೇ ವಿಡಿಯೋಗಳು ಪತ್ತೆಯಾಗಿಲ್ಲ ಎನ್ನಲಾಗಿದೆ.

ಸೆಂಟ್ರಲ್ ಜೈಲಿನಲ್ಲಿ ನಟ ದರ್ಶನ್ ತಮಗೆ ಹೆಚ್ಚುವರಿ ಹಾಸಿಗೆ ದಿಂಬು ಬೇಕು ಎಂದು ಒಂದು ಕಡೆ ಕೋರ್ಟ್ ಮೊರೆ ಹೋಗಿದ್ದರು. ಆದರೆ ಮತ್ತೊಂದು ಕಡೆ ಜೈಲಿನಲ್ಲಿರೋ ನಟೋರಿಯಸ್ ಕ್ರಿಮಿನಲ್ ಗಳು ರಾಜರೋಷವಾಗಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಇಂತ ವೀಡಿಯೋ ವೈರಲ್ ಹಿನ್ನೆಲೆ ಸಿಸಿಬಿ ಕೂಡ ತನಿಖೆಗೆ ಇಳಿದಿದೆ. ಈ ಸಂಬಂಧ ಕೆಲವರನ್ನ ವಿಚಾರಣೆ ನಡೆಸಿರೋ ಸಿಸಿಬಿ ಅಧಿಕಾರಿಗಳು, ನಟ ಧನ್ವಿರ್‌ಗೂ ಬಿಸಿ ಮುಟ್ಟಿಸಿದ್ದಾರೆ.







