• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕ್ರಿಪ್ಟೋ ಕರೆನ್ಸಿ’ಗೆ ಲಗಾಮು ಹಾಕಲು ಮುಂದಾದ ಪ್ರಧಾನಿ ಮೋದಿ: ಅನಿಯಂತ್ರಿತ ಕ್ರಿಪ್ಟೋ ಮಾರುಕಟ್ಟೆ ಮೇಲೆ ಕೇಂದ್ರದ ಹದ್ದಿನ ಕಣ್ಣು!

ನಚಿಕೇತು by ನಚಿಕೇತು
November 24, 2021
in ದೇಶ, ರಾಜಕೀಯ
0
ಮೋದಿ ಕನಸಿನ ಟೈಗರ್ ಸಫಾರಿಯಲ್ಲಿ ಹೇಳಿದ್ದು 163, ಕಡಿದಿದ್ದು ಹತ್ತು ಸಾವಿರ ಮರ !
Share on WhatsAppShare on FacebookShare on Telegram

ಕ್ರಿಪ್ಟೋಕರೆನ್ಸಿ ಪ್ರಕರಣ ಇಡೀ ದೇಶದಲ್ಲೇ ಸಂಚಲನ ಸೃಷ್ಟಿಸಿದೆ. ಕರ್ನಾಟಕದಲ್ಲಿ ಸಿಡಿದ ಬಿಟ್ ಬಾಂಬ್ ದೆಹಲಿ ಅಂಗಳದಲ್ಲಿ ಸದ್ದು ಮಾಡ್ತಿದೆ. ಕ್ರಿಪ್ಟೋ ಕರೆನ್ಸಿ ಬಗ್ಗೆ ಖುದ್ದು ಪ್ರಧಾನಿ ಮೋದಿಯೇ ತಲೆಕೆಡಿಸಿಕೊಂಡಿದ್ದು, ಮಹತ್ವದ ಸಭೆಯೂ ನಡೆದಿದೆ. ನಿನ್ನೆ ತಡರಾತ್ರಿವರೆಗೂ ನಡೆದ ಸಭೆಯಲ್ಲಿ ಕ್ರಿಪ್ಟೋ ಎಂಬ ಹುಚ್ಚು ಕುದುರೆಗೆ ಲಗಾಮು ಹಾಕಲು ಮೋದಿ ಮುಂದಾಗಿದ್ದಾರೆ.

ADVERTISEMENT

ಕರ್ನಾಟಕದಲ್ಲಿ ಸಿಡಿದ ಬಿಟ್ ಬಾಂಬ್ ಇಡೀ ರಾಷ್ಟ್ರವನ್ನೇ ತಲ್ಲಣಗೊಳಿಸಿದೆ. ಖುದ್ದು ಪ್ರಧಾನಿ ಮೋದಿಯೇ ಈ ಬಗ್ಗೆ ತಲೆಕೆಡಿಸಿಕೊಂಡಂತಿದೆ. ದೆಹಲಿಯಲ್ಲಿ ಕೈ ಪಡೆ ಕ್ರಿಪ್ಟೋಕರೆನ್ಸಿಯ ಬಗ್ಗೆ ಗುಡುಗಿದ್ದೇ ತಡ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ಕ್ರಿಪ್ಟೋ ಎಂಬ ಹುಚ್ಚು ಕುದುರೆಗೆ ಲಗಾಮು ಹಾಕಲು ಮೋದಿ ಮುಂದಾಗಿದ್ದಾರೆ.

ಕರ್ನಾಟಕದಲ್ಲಿ ಬಿಟ್ ಕಾಯಿನ್ ದಂಧೆ ವಿಚಾರ ಸಾಕಷ್ಟೂ ಸದ್ದು ಮಾಡ್ತಿದೆ. ಕೈ ಪಡೆ ಕಮಲದ ಮೇಲೆ ಬಿಟ್ ಅಸ್ತ್ರ ಪ್ರಯೋಗಿಸಿದೆ. ಇದ್ರಿಂದ ಪಾರಾಗಲು ಸಿಎಂ ದೆಹಲಿಗೆ ದೌಡಾಯಿಸಿ ಮೋದಿ ಮುಂದೆ ವಿಚಾರ ಪ್ರಸ್ತಾಪಿಸಿ ಬಂದೂ ಆಗಿದೆ. ಇದ್ರ ಬೆನ್ನಲ್ಲೇ ಬಿಟ್ ಬಾಂಬ್ ಬೆಂಗಳೂರಿನಿಂದ ದೆಹಲಿಗೆ ಶಿಫ್ಟ್ ಆಗಿದ್ದು, ಕಾಂಗ್ರೆಸ್ನ ರಾಷ್ಟ್ರ ನಾಯಕರು ದೆಹಲಿಯಲ್ಲಿ ಕ್ರಿಪ್ಟೋ ಕರೆನ್ಸಿ ಬಗ್ಗೆ ಗುಡಗುಗಿದ್ದಾರೆ. ಇದ್ರ ಬೆನ್ನಲ್ಲೇ ಪ್ರಧಾನಿ ಮೋದಿ ಮಹತ್ವದ ಸಭೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿ ದೆಹಲಿಯ ತಮ್ಮ ನಿವಾಸದಲ್ಲಿ ಕ್ರಿಪ್ಟೋ ಕರೆನ್ಸಿ ವಿಚಾರವಾಗಿ ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಆರ್‌ಬಿಐ, ಹಣಕಾಸು ಸಚಿವಾಲಯ, ಗೃಹ ಸಚಿವಾಲಯದ ಅಧಿಕಾರಿಗಳು ಭಾಗಿಯಾಗಿದ್ದು, ಕ್ರಿಪ್ಟೋಕರೆನ್ಸಿಯ ಮುಂದಿನ ದಾರಿಯ ಕುರಿತು ಗಂಭೀರ ಚರ್ಚೆ ನಡೆದಿದೆ. ಸಭೆಯಲ್ಲಿ ಬಿಟ್ ಕಾಯಿನ್ಗೆ ಲಗಾಮು ಹಾಕಲು ಕೇಂದ್ರ ನಿರ್ಧರಿಸಲಾಗಿದೆ.

ಪಾರದರ್ಶಕವಲ್ಲದ ಜಾಹೀರಾತು ಮೂಲಕ ದಾರಿ ತಪ್ಪಿಸುವ ಯತ್ನ ನಡೆಯುತ್ತಿರುವುದರ ಬಗ್ಗೆ ಸಭೆಯಲ್ಲಿ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಅನಿಯಂತ್ರಿತ ಕ್ರಿಪ್ಟೋ ಮಾರುಕಟ್ಟೆ ಸಮಸ್ಯೆಗೆ ನಿಯಂತ್ರಣ ಹಾಕ್ಬೇಕು ಅಂತ ಸೂಚಿಸಿರುವ ಮೋದಿ, ಮನಿ ಲಾಂಡರಿಂಗ್, ಉಗ್ರರಿಗೆ ಹಣಕಾಸು ವರ್ಗಾವಣೆ ಮೇಲೆ ಆರ್‌ಬಿಐ, ಹಣಕಾಸು ಸಚಿವಾಲಯ, ಗೃಹ ಸಚಿವಾಲಯ ನಿಗಾ ಇಡಬೇಕು ಅಂತ ಸೂಚಿಸಿದ್ದಾರೆ.

ಇನ್ನು ಕ್ರಿಪ್ಟೋಕರೆನ್ಸಿ ಬಗ್ಗೆ ಪ್ರಪಂಚದಾದ್ಯಂತ ತಜ್ಞರನ್ನು ಸಂಪರ್ಕಿಸಲಾಗಿದ್ದು, ಕ್ರಿಪ್ಟೋಕರೆನ್ಸಿ ನಿಯಂತ್ರಣಕ್ಕೆ ಬೇಕಾದ ತಂತ್ರಜ್ಞಾನದ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಅಂತ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದ್ದಾರೆ. ಇನ್ನು ಇದೇ ವೇಳೆ ಮುಂಬರುವ ಬಜೆಟ್ನಲ್ಲಿ ಕ್ರಿಪ್ಟೋ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

ರಾಜ್ಯ ರಾಜಧಾನಿಯಲ್ಲಿ ಕೈ ಪಡೆ ಸಿಡಿಸಿದ ಬಿಟ್ ಬಾಂಬ್ ದೆಹಲಿಯಲ್ಲಿ ಸಂಚಲನ ಸೃಷ್ಟಿಸಿದ್ದು, ಪ್ರಧಾನಿ ಮೋದಿಯೂ ಈ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಅಲ್ದೆ ಕ್ರಿಪ್ಟೋ ಕರೆನ್ಸಿ ಎಂಬ ಹುಚ್ಚು ಕುದುರೆಗೆ ಕಡಿವಾಣ ಹಾಕಲು ಮೋದಿ ಮುಂದಾಗಿದ್ದು, ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಸೂಚನೆಯೂ ರವಾನಿಸಿದ್ದಾರೆ. ಆದ್ರೆ ಬಿಟ್ ಎಂಬ ಈ ಮಾಯಾ ಲೋಕವನ್ನ ಹೇಗೆ ಬೇಧಿಸೋದು ಅನ್ನೋದೆ ಸದ್ಯದ ಯಕ್ಷ ಪ್ರಶ್ನೆ.

Tags: BJPCongress PartyCovid 19ಕರೋನಾನರೇಂದ್ರ ಮೋದಿಬಿಜೆಪಿ
Previous Post

ನವೆಂಬರ್ 26ಕ್ಕೆ ಪ್ರಬಲ ವಾಯುಭಾರ ಕುಸಿತ; ರಾಜ್ಯಾದ್ಯಂತ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ

Next Post

ಬೆಳ್ಳಂಬೆಳಿಗ್ಗೆ 15 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ : ಮುಂದುವರಿದ ಪರಿಶೀಲನೆ – ಇಲ್ಲಿದೆ ಸಂಪೂರ್ಣ ವರದಿ

Related Posts

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ
Top Story

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

by ಪ್ರತಿಧ್ವನಿ
May 15, 2026
0

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಯುದ್ಧದ ಸ್ಥಿತಿ ಹಾಗೂ ಉದ್ವಿಗ್ನ ಪರಿಸ್ಥಿತಿ ಪರಿಣಾಮ ಇದೀಗ ಭಾರತಕ್ಕೂ ತಟ್ಟಿದೆ, ಇದರ ಮುನ್ನೇಚ್ಚರಿಕೆ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ...

Read moreDetails
ಕೇರಳದ ನೂತನ ಸಿಎಂ: ವೇಣುಗೋಪಾಲ್‌ಗೆ ನಿರಾಸೆ? ಫಸ್ಟ್ ರಿಯಾಕ್ಷನ್ ಏನು

ಕೇರಳದ ನೂತನ ಸಿಎಂ: ವೇಣುಗೋಪಾಲ್‌ಗೆ ನಿರಾಸೆ? ಫಸ್ಟ್ ರಿಯಾಕ್ಷನ್ ಏನು

May 15, 2026
64ನೇ ವಸಂತಕ್ಕೆ ಡಿಕೆಶಿ; ಸಿಎಂ ಕುರ್ಚಿ ಕನಸು ಈಡೇರುತ್ತಾ ಎಂಬ ಕುತೂಹಲ

64ನೇ ವಸಂತಕ್ಕೆ ಡಿಕೆಶಿ; ಸಿಎಂ ಕುರ್ಚಿ ಕನಸು ಈಡೇರುತ್ತಾ ಎಂಬ ಕುತೂಹಲ

May 15, 2026
ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

May 14, 2026
ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚು ಉದ್ಯೋಗಾವಕಾಶ: ಕ್ರೆಡಲ್ ಎಂ.ಡಿ. ಕೆ.ಪಿ. ರುದ್ರಪ್ಪಯ್ಯ

ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚು ಉದ್ಯೋಗಾವಕಾಶ: ಕ್ರೆಡಲ್ ಎಂ.ಡಿ. ಕೆ.ಪಿ. ರುದ್ರಪ್ಪಯ್ಯ

May 14, 2026
Next Post
ಬೆಳ್ಳಂಬೆಳಿಗ್ಗೆ 15 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ :  ಮುಂದುವರಿದ ಪರಿಶೀಲನೆ – ಇಲ್ಲಿದೆ ಸಂಪೂರ್ಣ ವರದಿ

ಬೆಳ್ಳಂಬೆಳಿಗ್ಗೆ 15 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ : ಮುಂದುವರಿದ ಪರಿಶೀಲನೆ - ಇಲ್ಲಿದೆ ಸಂಪೂರ್ಣ ವರದಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada