2023ರ ಕರ್ನಾಟಕ ವಿಧಾನಸಭೆ ಚುನಾವಣೆಯ(karnataka assembly election 2023) ನಿಮಿತ್ತ, ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇದ್ರ ಮೋದಿ(narendra modi) ಸಮಾವೇಶ, ರೋಡ್ ಶೋಗಳಲ್ಲಿ ಭಾಗಿಯಾಗಿ ಮತಯಾಚನೆ ಮಾಡುತ್ತಿದ್ದಾರೆ. ಬೀದರ್ನಲ್ಲಿ ಚುನಾವಣಾ(election) ಪ್ರಚಾರದ ರಣ ಕಹಳೆ ಮೊಳಗಿಸಿದ ಪ್ರಧಾನಿ ಮೋದಿ ಬಳಿಕ ವಿಜಯಪುರ ನಗರದ ಸೈನಿಕ ಶಾಲೆ ಆವರಣದಲ್ಲಿ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು. ಜಗತ್ಯೋತಿ ಬಸವೇಶ್ವರರು ಸಮಾನತೆಗಾಗಿ ಹೋರಾಡಿದ್ದರು. ಆದ್ರೆ ಇಂದಿನ ಕಾಂಗ್ರೆಸ್ ನಾಯಕರು ಸಮಾಜ ಒಡೆಯುತ್ತಿದ್ದಾರೆ.

ಸಮಾಜವನ್ನು ವಿಭಜಿಸುವ ಕಾಂಗ್ರೆಸ್(congress) ಪಕ್ಷವನ್ನು ಕ್ಷಮಿಸಬೇಡಿ ಅಂತ ನರೇಂದ್ರ ಮೋದಿ ಹೇಳಿದರು. ಕುವೆಂಪು(kuvempu) ಅವರ ‘ಸರ್ವ ಜನಾಂಗದ ಶಾಂತಿಯ ತೋಟ’ ಸಾಲನ್ನು ಉಲ್ಲೇಖಿಸಿದ ಮೋದಿ, ಸಮಾಜದ ವರ್ಗಗಳು ಪರಸ್ಪರ ಗೌರವ ನೀಡಿ ಬಾಳುವುದು ಮುಖ್ಯ ಎಂದರು. ಜತೆಗೆ, ಕನಕದಾಸರ ಹೆಸರನ್ನೂ ಸ್ಮರಿಸಿದರು.ನನ್ನನ್ನು ಟೀಕಿಸುವುದರಲ್ಲೇ ಕಾಂಗ್ರೆಸ್ ಸಮಯ ವ್ಯರ್ಥ ಮಾಡುತ್ತಿದೆ. ಡಾ. ಅಂಬೇಡ್ಕರ್ರನ್ನು(DR ambedkar) ಕಾಂಗ್ರೆಸ್ನವರು ದೇಶದ್ರೋಹಿ ಎಂದಿದ್ದರು. ನನ್ನನ್ನು 91 ಬಾರಿ ಕಾಂಗ್ರೆಸ್ ನಾಯಕರು ಬೈದಿದ್ದಾರೆ. ನನ್ನ ಸಮಾಧಿ ತೋಡಬೇಕೆಂಬುದೇ ಕಾಂಗ್ರೆಸ್ ಉದ್ದೇಶ. ಆದರೆ ನಿಮ್ಮ ಆಶೀರ್ವಾದ ಇರುವ ವರೆಗೆ ಏನೂ ಮಾಡಲಾಗದು ಅಂತ ಪ್ರಧಾನಿ ನರೇಂದ್ರ ಮೋದಿ(narendara modi) ಹೇಳಿದರು.












