ಭುವನೇಶ್ವರ್: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ ಅವರ ಮಗಳು ಮತ್ತು ಅಳಿಯ ಅವರನ್ನು ಒಡಿಶಾ ಪೊಲೀಸರು ಸೋಮವಾರ ವಂಚನೆ ಆರೋಪದಡಿಯಲ್ಲಿ ಬಂಧಿಸಿದ್ದಾರೆ. ಒ ಇದೇನಿದು ಮೋದಿ ಅವರ ಅಧಿಕಾರಿಯ ಪುತ್ರಿಯ ಬಂಧನ ಎಂದು ಗಾಬರಿ ಆಗಬೇಡಿ.ಅಂದ ಹಾಗೆ ಇವರು ಮೋದಿ ಪ್ರಧಾನ ಕಾರ್ಯದರ್ಶಿಯವರ ನೈಜ ಮಗಳು ಮತ್ತು ಅಳಿಯ ಅಲ್ಲ.
ಇವರು ಹಾಗೇ ಬಿಂಬಿಸಿಕೊಂಡು ಸಾರ್ವಜನಿಕರನ್ನು ವಂಚಿಸುತಿದ್ದರು. ಬಂಧಿತ ದಂಪತಿಯನ್ನು ಹನ್ಸಿತಾ ಅಭಿಲಿಪ್ಸಾ (38) ಮತ್ತು ಅನಿಲ್ ಕುಮಾರ್ ಮೊಹಂತಿ ಎಂದು ಹೇಳಲಾಗಿದೆ. ಈ ಇಬ್ಬರೂ ಸೇರಿಕೊಂಡು ನಮಗೆ ಪ್ರಭಾವಿ ವ್ಯಕ್ತಿಗಳ ಸಂಪರ್ಕ ಹೊಂದಿದ್ದೇವೆ ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದರು ಎನ್ನಲಾಗಿದೆ.
ಇವರು ಹಾಗೇ ಬಿಂಬಿಸಿಕೊಂಡು ಸಾರ್ವಜನಿಕರನ್ನು ವಂಚಿಸುತಿದ್ದರು. ಬಂಧಿತ ದಂಪತಿಯನ್ನು ಹನ್ಸಿತಾ ಅಭಿಲಿಪ್ಸಾ (38) ಮತ್ತು ಅನಿಲ್ ಕುಮಾರ್ ಮೊಹಂತಿ ಎಂದು ಹೇಳಲಾಗಿದೆ. ಈ ಇಬ್ಬರೂ ಸೇರಿಕೊಂಡು ನಮಗೆ ಪ್ರಭಾವಿ ವ್ಯಕ್ತಿಗಳ ಸಂಪರ್ಕ ಹೊಂದಿದ್ದೇವೆ ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದರು ಎನ್ನಲಾಗಿದೆ.
ಆರೋಪಿ ದಂಪತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 329(3), 319(2), 318(4) ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಭುವನೇಶ್ವರದ ವಲಯ 6ರ ಹೆಚ್ಚುವರಿ ಡಿಸಿಪಿ ಸ್ವರಾಜ್ ದೇಬ್ತಾ ತಿಳಿಸಿದ್ದಾರೆ. ಬಂಧಿತ ಆರೋಪಿಗಳು ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ ಅವರ ಮಗಳು ಮತ್ತು ಅಳಿಯ ಎಂದು ಹೇಳಿಕೊಂಡು ಜನರನ್ನು ವಾಚಿಸುತಿದ್ದರು ಅಲ್ಲದೆ ಮನೆಯಲ್ಲಿ ಗಣ್ಯ ವ್ಯಕ್ತಿಗಳ ಜೊತೆಗೆ ತೆಗೆಸಿಕೊಂಡಿರುವ ಫೋಟೋಗಳನ್ನು ಮನೆಯ ಗೋಡೆಗಳಲ್ಲಿ ಅಳವಡಿಸಿಕೊಂಡಿದ್ದು ಪೊಲೀಸರು ಛಾಯಾಚಿತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ ಹನ್ಸಿತಾ ಮತ್ತು ಮೊಹಂತಿ ದಂಪತಿ ಐಷಾರಾಮಿ ಬಂಗಲೆಯಲ್ಲಿ ವಾಸವಿದ್ದು ಗಣ್ಯ ಹಾಗೂ ಪ್ರಭಾವೀ ಉದ್ಯಮಿ, ರಾಜಕಾರಣಿಗಳ ಜೊತೆಗಿರುವ ಎಡಿಟ್ ಮಾಡಿದ ಛಾಯಾಚಿತ್ರಗಳನ್ನು ಮುದ್ರಿಸಿ ಭುವನೇಶ್ವರದ ಶ್ರೀಮಂತ ಉದ್ಯಮಿಗಳು, ಬಿಲ್ಡರ್ಗಳು, ಗಣಿಗಾರಿಕೆ ನಿರ್ವಾಹಕರು ಮತ್ತು ಇತರ ಪ್ರಭಾವಿ ವ್ಯಕ್ತಿಗಳಿಗೆ ಟೆಂಡರ್ ನೀಡುವ , ಉದ್ಯಮಕ್ಕೆ ಲೈಸೆನ್ಸ್ ಕೊಡಿಸುವ ಭರವಸೆ ನೀಡಿ ಜನರನ್ನು ವಂಚಿಸುತಿದ್ದರು.ಈ ಕುರಿತು ಗಣಿ ಮಾಲೀಕರೊಬ್ಬರು ಇವರಿಗೆ ಗಣಿ ಲೈಸೆನ್ಸ್ ಪಡೆಯಲು 10 ಲಕ್ಷ ನೀಡಿದ್ದರು ಆದರೆ ಈ ದಂಪತಿ ಲೈಸೆನ್ಸ್ ಕೊಡಿಸಲಿಲ್ಲ , ಅವರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದ ವೇಳೆ ದಂಪತಿಗಳ ನಕಲಿ ಮುಖ ಬಯಲಾಗಿದೆ.