ಪದೇ ಪದೇ ಪ್ರಶ್ನೆಗಳ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನ (Narendra modi) ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುವ ರಾಹುಲ್ ಗಾಂಧಿ (Rahul gandhi) ಇದೀಗ, ಪ್ರಧಾನಿ ಮೋದಿ ಸಿದ್ಧವಿದ್ದರೆ ನಾವು ಬಹಿರಂಗ ಚರ್ಚೆಗೆ ಸಿದ್ಧವಾಗಿದ್ದೇವೆ ಎಂದು ಪತ್ರವೊಂದನ್ನ ಬರೆದಿದ್ದಾರೆ. ಈ ಹಿಂದೆಯೂ ಸಾಕಷ್ಟು ಬಾರಿ ರಾಗಾ ಇದೇ ರೀತಿ ನಮೋಗೆ ಸವಾಕು ಹಾಕಿದ್ರು.
ಪ್ರಧಾನಿ ನರೇಂದ್ರ ಮೋದಿ ಜೊತೆ ಬಹಿರಂಗ ಚರ್ಚೆ ನಡೆಸಬೇಕೆಂದು ಕೋರಿ ಇಬ್ಬರು ಮಾಜಿ ನ್ಯಾಯಾಧೀಶರು ಮದನ್ ಬಿ ಲೋಕುರ್ (madan b lokur) ಹಾಗೂ ಓರ್ವ ಹಿರಿಯ ಪತ್ರಕರ್ತರ ಎನ್.ರಾಮ್ (N ram) ರಾಹುಲ್ ಗಾಂಧಿಗೆ ಮನವಿ ಮಾಡಿದ್ದರು. ಹೀಗಾಗಿ ಪ್ರಧಾನಿ ಮೋದಿ ಜೊತೆ ಚರ್ಚೆಗೆ ಕಾಂಗ್ರೆಸ್ ನಾಯಕ (congress leader) ರಾಹುಲ್ ಗಾಂಧಿ ಸಿದ್ದ ಎಂದು ಘೋಷಿಸಿದ್ದಾರೆ. ನಾನು ಇಲ್ಲವೇ ನಮ್ಮ ಪಕ್ಷದ ಅಧ್ಯಕ್ಷರು ಮೋದಿ ಜೊತೆ ಚರ್ಚೆಗೆ ಸಿದ್ದವಿದ್ದೇವೆ ಅಂತ ರಾಹುಲ್ ಗಾಂಧಿ ಒಪ್ಪಿಗೆ ಸೂಚಿಸಿದ್ದಾರೆ.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇಬ್ಬರೂ ಪರಸ್ಪರರ ವಿರುದ್ದ ಆರೋಪಗಳನ್ನು ಹೊರಿಸುತ್ತಿರುವುದು ಹಾಗೂ ಸವಾಲುಗಳನ್ನು ಒಡ್ಡುತ್ತಿರುವುದು ಮಾತ್ರವೇ ಕೇಳಿ ಬರುತ್ತಿದೆ. ಆದರೆ ಇವರಿಬ್ಬರಿರ ಕಡೆಯಿಂದ ಅರ್ಥಪೂರ್ಣ ಪ್ರಶ್ನೆ ಉತ್ತರಗಳು ಬರುತ್ತಿಲ್ಲ ಹೀಗಾಘಿ ಚರ್ಚೆ ಸೂಕ್ತ ಎಂದು ನ್ಯಾಯಾಧೀಶ ಮತ್ತು ಪತ್ರಕರ್ತರು ಹೇಳಿದ್ದರು. ಇದಕ್ಕೆ ರಾಗಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಇದರಿಂದ ಜನರಿಗೂ ಪಕ್ಷಗಳನ್ನು ಆಯ್ಕೆ ಮಾಡಿಕೊಳ್ಳಲು ಸಹಾಯಕವಾಗುತ್ತೆ. ಚರ್ಚೆಯಲ್ಲಿ ಭಾಗವಹಿಸಲು ಒಪ್ಪಿದರೇ, ನಮಗೆ ತಿಳಿಸಿ, ನಾವು ಚರ್ಚೆಯ ಸ್ವರೂಪ ನಿರ್ಧರಿಸೋಣ ಅಂತ ರಾಹುಲ್ ಗಾಂಧಿ ಮದನ್ ಬಿ ಲೋಕೂರ್, ಅಜಿತ್ ಪಿ ಶಾ (Ajit p sharma) ಪತ್ರಕರ್ತ ರಾಮ್ ಪತ್ರಗೆ ಬರೆದು ತಿಳಿಸಿದ್ರು.