ಓಣಂ ಹಬ್ಬದ ಅಂಗವಾಗಿ ರಾಷ್ಟ್ರಪತಿ ದೌಪದಿ ಮುರ್ಮು, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ಕೇರಳದ ನಮ್ಮ ಸಹೋದರ ಸಹೋದರಿಯರಿಗೆ ಓಣಂ ಹಬ್ಬದ ಶುಭಾಶಯಗಳು. ಈ ಶುಭ ಸಂದರ್ಭದಲ್ಲಿ ಸುಗ್ಗಿಯ ಹಬ್ಬವು ಸಮೃದ್ಧಿ ಮತ್ತು ಎಲ್ಲರ ನಡುವೆ ಸಾಮರಸ್ಯದ ಮನೋಭಾವವನ್ನು ಮೂಡಿಸಲಿ. ಜತೆಗೆ, ಅಸಂಖ್ಯಾತ ವರದಾನಗಳನ್ನು ಕಲ್ಪಿಸಿಕೊಟ್ಟಿರುವ ಪ್ರಕೃತಿ ಮಾತೆಗೆ ಕೃತಜ್ಞತೆ ಸಲ್ಲಿಸೋಣ’ ಎಂದು ರಾಷ್ಟ್ರಪತಿ ದೌಪದಿ ಮುರ್ಮು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಶುಭಾಶಯ ತಿಳಿಸಿದ್ದಾರೆ.
ನಿರ್ದೇಶಕ ಜೇಸನ್ ಸಂಜಯ್ ವಿಜಯ್ ಮಾತನಾಡಿ, “ಲೈಕಾ ಪ್ರೊಡಕ್ಷನ್ಸ್ನಂತಹ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಡಿ ನನ್ನ ಮೊದಲ ಚಿತ್ರವನ್ನು ನಿರ್ದೇಶಿಸುವ ಅವಕಾಶ ಸಿಕ್ಕಿರುವುದು ಗೌರವದ ಸಂಗತಿಯಾಗಿದೆ. ಇದು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೇಂದ್ರವಾಗಿದೆ. ಈ ಅವಕಾಶಕ್ಕಾಗಿ ನಾನು ಸುಭಾಸ್ಕರನ್ ಸರ್ ಅವರಿಗೆ ಧನ್ಯವಾದ ಹೇಳುತ್ತೇನೆ. ನಾನು ನಿರ್ದೇಶಕನಾಗುವ ನನ್ನ ಕನಸುಗಳನ್ನು ಈಡೇರಿಸಲು ಉತ್ತಮ ಬೆಂಬಲವನ್ನು ನೀಡಿದ ತಮಿಳು ಕುಮಾರನ್ ಅವರಿಗೆ ಧನ್ಯವಾದ. ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ ಎಂದರು.
ಎಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು. ನಿಮ್ಮ ಜೀವನವು ಉತ್ತಮ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯಿಂದ ಕೂಡಿರಲಿ. ಕಳೆದ ಹಲವು ವರ್ಷಗಳಿಂದ ಓಣಂ ಜಾಗತಿಕ ಹಬ್ಬವಾಗಿದ್ದು, ಕೇರಳದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.
ಕೇರಳದಲ್ಲಿರುವ ಸಹೋದರ ಸಹೋದರಿಯರಿಗೆ ಓಣಂ ಹಬ್ಬದ ಶುಭಾಶಯಗಳು. ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷವನ್ನು ಕರುಣಿಸುವುದರ ಜತೆಗೆ ಏಕತೆ ಮತ್ತು ಒಗ್ಗಟ್ಟಿನ ಸಾರವನ್ನು ಹರಡಲಿ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.