ಬೆಂಗಳೂರು : ಬಂಡಿಪುರ ಸಫಾರಿ ವೇಳೆ ಒಂದೇ ಒಂದು ಹುಲಿ ಕಾಣಿಸದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಎಸ್ಪಿಜಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು ಎನ್ನಲಾಗಿದೆ. ಪ್ರಧಾನಿ ಮೋದಿ ಗರಂ ಆಗಿರುವ ಹಿನ್ನೆಲೆಯಲ್ಲಿ ಚಾಲಕ ಮಧುಸೂಧನ್(29) ವಿರುದ್ಧ ಕ್ರಮ ಕೈಗೊಳ್ಳುವಂತಎ ಬಿಜೆಪಿ ನಾಯಕರು ಬಂಡಿಪುರ ಆಡಳಿತಾಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಪ್ರಧಾನಿ ಮೋದಿಗಾಗಿ ಹುಲಿಗಳು ಹೆಚ್ಚಾಗಿ ಕಾಣಿಸುವ ಮಾರ್ಗವನ್ನೇ ಆಯ್ಕೆ ಮಾಡಲಾಗಿತ್ತು. ಆದರೆ ಆ ಭಾಗದಲ್ಲಿ ಭದ್ರತಾ ದೃಷ್ಟಿಯಿಂದ ಹೆಚ್ಚು ವಾಹನಗಳು ಓಡಾಡಿದ ಹಿನ್ನೆಲೆಯಲ್ಲಿ ಅಂದು ಮೋದಿ ಹುಲಿಗಳು ಕಣ್ಣಿಗೆ ಕಾಣಲಿಲ್ಲ ಎನ್ನಲಾಗಿದೆ.
ಚಾಲಕ ಸಫಾರಿ ಮಾರ್ಗವನ್ನು ಬದಲಾಯಿಸಬಹುದಿತ್ತು. ಆದರೆ ಮಾಡಿಲ್ಲ ಎಂದು ಬಂಡಿಪುರ ಅರಣ್ಯಾಧಿಕಾರಿಗಳು ಹೇಳಿದ್ದಾರೆ.