ಕರ್ನಾಟಕ ಶಿಕ್ಷಣ ಇಲಾಖೆಯು 15000 ಶಿಕ್ಷಕರ ನೇಮಕಾತಿಗಾಗಿ ಸಿಇಟಿ 2022 ಪರೀಕ್ಷೆಯನ್ನು ನಡೆಸಿದ್ದು, ಇಂದು (ಆಗಸ್ಟ್ 17) ಸಂಜೆ ಆರು ಗಂಟೆಗೆ ಸಿಇಟಿಯ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.
ಶಿಕ್ಷಕರ ನೇಮಕೈತಿಗಾಗಿ ಮೇ 2022 ರಂದು ಪರೀಕ್ಷೆಯನ್ನು ನಡೆಸಲಾಗಿತ್ತು. ಶಿಕ್ಷಕ ಹುದ್ದೆಗಾಗಿ ಲಕ್ಷಾಂತರ ಅಭ್ಯರ್ಥಿಗಳು ಸಿಇಟಿ ಪರೀಕ್ಷೆಯನ್ನು ಬರೆದಿದ್ದರು. ಕಷ್ಟು ಪಟ್ಟು ಓದಿ ಸಿಇಟಿಯನ್ನು ಅತ್ಯುತ್ತಮವಾಗಿ ಮಾಡಿರುವ ವಿದ್ಯಾರ್ಥಿಗಳಿಗೆ ಇಂದು ಶುಭಸುದ್ದಿ ಸಿಗಲಿದೆ
ಶಿಕ್ಷಕರ ಹುದ್ದೆ ನೇಮಕಾತಿ 2022ರ ಪರೀಕ್ಷೆಯು ಮೇ21 ಮತ್ತು ಮೇ22 ನಡೆದಿದೆ. ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಅಭ್ಯರ್ಥಿಗಳು ಬರೆದಿದ್ದಾರೆ. ಕರ್ನಾಟಕ ಶಿಕ್ಷಕರ ನೇಮಕಾತಿ ಹುದ್ದೆ 2022ರ ಪರೀಕ್ಷೆಗೆ 106083 ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದರು. ಈ ಪೈಕಿ ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿದ್ದವರು 31967 ಅಭ್ಯರ್ಥಿಗಳು. ಶಿಕ್ಷಕ ಹುದ್ದೆಗೆ ಅರ್ಜಿಗಳ ಪರಿಗಣನೆ ಆಗಿರುವುದು 74116 ಮಂದಿ ಅಭ್ಯರ್ಥಿಗಳದ್ದು. ಪರೀಕ್ಷೆಗೆ ಹಾಜರಾದವರ ಸಂಖ್ಯೆ 69159 ಅಭ್ಯರ್ಥಿಗಳು.

ಫಲಿತಾಂಶದ ವಿವರಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್: https://www.schooleducation.kar.nic.in/ ಮೂಲಕ ಪಡೆಯಬಹುದು.