ರಾಜಕೀಯ ಪಕ್ಷಗಳು ಚುನಾವಣೆ ಪೂರ್ವ ಹಾಗೂ ನಂತರದಲ್ಲಿ ನೀಡುವ ಭರವಸೆಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ವಿಚಾರಣೆಯನ್ನು ಪುನಾರಂಭಿಸಿದ ಮುಖ್ಯ ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಜೆ.ಕೆ.ಮಹೇಶ್ವರಿ ಹಾಗೂ ಹಿಮಾ ಕೊಹ್ಲಿ ಅವರಿದ್ದ ತ್ರಿಸದಸ್ಯ ಪೀಠವು ನಾಗರೀಕರ ಹಕ್ಕುಗಳಾಗಿರುವ ಕೆಲವು ಯೋಜನೆಗಳಾಗಿರುತ್ತವೆ. ವಾಸ್ತವವಾಗಿ ಅವು ಜನರಿಗೆ ಸೇರಬೇಕು ಎಂದು ಪೀಠ ಹೇಳಿದೆ.

ಈ ಸಮಸ್ಯೆಯು ಜಟಿಲವಾಗಿದೆ ಮತ್ತು ಯಾವುವು ಸರಿಯಾದ ಭರವಸೆ ಎಂಬುದು ಒಂದು ದೊಡ್ಡ ಪ್ರಶ್ನೆಯಾಗಿ ಪರಿಣಮಿಸಿದೆ ಎಂದು ಹೇಳಿದೆ.
ರಾಜಕೀಯ ಪಕ್ಷಗಳು ನೀಡುವ ಭರವಸೆಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಸದ್ಯ ಇರುವ ಪ್ರಶ್ನೆಯೆಂದರೆ ಯಾವುದು ಸರಿಯಾದ ಭರವಸೆ ಮತ್ತು ಕೆಲವು ಯಾವುದು ಉಚಿತ ಎಂಬುದರ ಬಗ್ಗೆ ಚರ್ಚೆಯ ಅವಶ್ಯಕತೆಯಿದೆ ಎಂದು ಪೀಠ ಹೇಳಿದೆ.