ಪ್ರೆಸ್ ಕ್ಲಬ್ ಆಫ್ ಬೆಂಗಳೂರು 2024-25ನೇ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಅಚ್ಚರಿಯ ಫಲಿತಾಂಶ ನಿರೀಕ್ಷೆ ಹುಸಿಯಾಗಿದೆ. ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಹಾಲಿ ಅಧ್ಯಕ್ಷ ಶ್ರೀಧರ್ ಮರು ಆಯ್ಕೆ ಆಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಧ್ಯಾನ ಪೂಣಚ್ಚ, ಶ್ರೀಧರ್ ಆರ್ ಮತ್ತು ಸುಭಾಷ್ ಹೂಗಾರ್‌ರವರು ಸ್ಪರ್ಧೆ ಮಾಡಿದ್ದರು. ಹಾಲಿ ಅಧ್ಯಕ್ಷರಾಗಿದ್ದ ಶ್ರೀಧರ್ ಆರ್ 404 ಮತಗಳನ್ನು ಪಡೆದು ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿ , ಜಂಟಿ ಕಾರ್ಯದರ್ಶಿ, ಖಜಾಂಚಿ ಮತ್ತು 6 ಮಂದಿ ಕಮಿಟಿ ಸದಸ್ಯರುಗಳು ಮತ್ತು ಮಹಿಳಾ ಮೀಸಲು ಸ್ಥಾನಗಳಿಗೆ ಚುನಾವಣೆ ನಡೆದಿದೆ.ಭಾನುವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆ ಮತದಾನಕ್ಕೆ ಅವಕಾಶ ಕೊಡಲಾಗಿತ್ತು. ನೀಡಿದರು. ಪ್ರೆಸ್ ಕ್ಲಬ್‌ನಲ್ಲಿ 1040 ಮತದಾರರು ಇದ್ದು, ಒಟ್ಟು 767 ಮತಗಳು ಚಲಾವಣೆಯಾಗಿವೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶ್ರೀಧರ್ ಆರ್ 404 ಮತಗಳನ್ನು ಪಡೆದ್ರೆ ವಿ.ಎನ್ ಮೋಹನ್ ಕುಮಾರ್ 417 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಶಿವಕುಮಾರ್ ಬೆಳ್ಳಿತಟ್ಟೆ ಅವರು ಪಡೆದ ಮತಗಳು 336. ಇನ್ನು TV5 ಸುದ್ದಿ ವಾಹಿನಿಯ ಜಿ.ಗಣೇಶ್ ಖಜಾಂಚಿಯಾಗಿ ಆಯ್ಕೆ ಆಗಿದ್ದು 556 ಮತಗಳನ್ನು ಪಡೆದುಕೊಂಡಿದ್ದಾರೆ. ಜಿ.ವೈ.ಮಂಜುನಾಥ್ ಕಾರ್ಯದರ್ಶಿ ಆಗಿ ಆಯ್ಕೆಯಾಗಿದ್ದು 288 ಮತ ಪಡೆದಿದ್ದಾರೆ. ಇನ್ನು ಜಂಟಿ ಕಾರ್ಯದರ್ಶಿಯಾಗಿ ಧರಣೇಶ್ ಬೂಕನಕೆರೆ ಆಯ್ಕೆಯಾಗಿದ್ದು 195 ಮತಗಳನ್ನು ಪಡೆದಿದ್ದಾರೆ. ಮಹಿಳಾ ಮೀಸಲು ಸ್ಥಾನಕ್ಕೆ ಮಿನಿ ತೇಜಸ್ವಿ 491 ಮತಗಳನ್ನು ಪಡೆದು ಜಯಶಾಲಿ ಆಗಿದ್ದಾರೆ.
ಕಮಿಟಿ ಸದಸ್ಯರಾಗಿ 6 ಮಂದಿ ಆಯ್ಕೆ..
ಶಿವಣ್ಣ-234 ಮತಗಳು
ಶರಣಬಸಪ್ಪ-258 ಮತಗಳು
ಯಾಸ್ನಿಫ್ ಮುಸ್ತಾಕ್-259 ಮತಗಳು
ಮುತ್ತಾಜ್ ಅಲೀಮ್-272 ಮತಗಳು
ರೋಹಿಣಿ ಅಡಿಗ-306 ಮತಗಳು
ಮಂಜುನಾಥ್-281 ಮತಗಳು
ಪ್ರತಿಧ್ವನಿ ಡಿಜಿಟಲ್ ಮಾಧ್ಯಮ ಕೂಡ ಪ್ರೆಸ್ ಕ್ಲಬ್ ಫಲಿತಾಂಶವನ್ನು ಅಚ್ಚರಿಯಿಂದ ನೋಡುತ್ತಿತ್ತು. ನಮ್ಮ ಡಿಜಿಟಲ್ ಮಾಧ್ಯಮದ ಹಿತೈಷಿಗಳಾಗಿರುವ ಧರಣೇಶ್ ಬೂಕನಕೆರೆ ಜಂಟಿ ಕಾರ್ಯದರ್ಶಿ ಆಗಿ ಆಯ್ಕೆಯಾಗಿರುವುದು ಸಂತಸದ ವಿಚಾರ. ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದ ಧರಣೇಶ್, ನ್ಯೂಸ್ 18 ಕನ್ನಡ, ದಿಗ್ವಿಜಯ ನ್ಯೂಸ್ ದೆಹಲಿ ವರದಿಗಾರನಾಗಿ ಸಾಕಷ್ಟು ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಇದೀಗ ಪ್ರೆಸ್ ಕ್ಲಬ್‌ನಲ್ಲಿ ಅವರ ಸೇವೆ ಮುಂದುವರಿಯಲಿ ಎಂದು ನಿಮ್ಮ ದನಿಯಾದ ಪ್ರತಿಧ್ವನಿ ಆಶಿಸುತ್ತದೆ.
ಕೃಷ್ಣಮಣಿ